ಕೊಪ್ಪಳ: ಕೊರೊನಾ ಮಹಾಮಾರಿ ವಿರುದ್ಧ ಹೋರಾಡುತ್ತಿರುವ ಈ ದಿನಗಳಲ್ಲಿ ಈಗ ಇಲಿಜ್ವರವೂ ಕಾಲಿಟ್ಟಿದೆ. ಕೊಪ್ಪಳ ಜಿಲ್ಲೆಯಲ್ಲಿ ಇಲಿಜ್ವರದ ಒಟ್ಟು ಆರು ಪ್ರಕರಣಗಳು ದೃಢಪಟ್ಟಿದ್ದು, ಇದರಲ್ಲಿ ಕೊಪ್ಪಳ ತಾಲೂಕಿನಲ್ಲಿ ಐದು ಹಾಗೂ ಕುಷ್ಟಗಿ ತಾಲೂಕಿನಲ್ಲಿ ಒಂದು ಪ್ರಕರಣ ದೃಢಪಟ್ಟಿವೆ.
ಕೊಪ್ಪಳ ತಾಲೂಕಿನ ಹೊಸಳ್ಳಿಯಲ್ಲಿ ಎರಡು, ಹೊಸಲಿಂಗಾಪುರ, ಕೆರೆಹಳ್ಳಿ ಹಾಗೂ ನರೇಗಲ್ ಗ್ರಾಮಗಳಲ್ಲಿ ತಲಾ ಒಂದು ಹಾಗೂ ಕುಷ್ಟಗಿ ತಾಲೂಕಿನ ಶಾಖಾಪುರ ಗ್ರಾಮದಲ್ಲಿ ಒಂದು ಇಲಿಜ್ವರ ಪ್ರಕರಣ ಪತ್ತೆಯಾಗಿವೆ.

ಹಾಗಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಈ ನಿಟ್ಟಿನಲ್ಲಿ ಸಾರ್ವಜನಿಕರು ಮುಂಜಾಗ್ರತೆ ವಹಿಸಬೇಕು. ಈ ಸಂಬಂಧ ಸಾರ್ವಜನಿಕರು ವಹಿಸಬೇಕಾದ ಮುನ್ನೆಚ್ಚರಿಕೆ, ಇಲಿಜ್ವರದ ಗುಣಲಕ್ಷಣಗಳನ್ನು ತಿಳಿಸಿ ಸುತ್ತೋಲೆ ಹೊರಡಿಸಲಾಗಿದೆ.
ಇಲಿಜ್ವರ ಪತ್ತೆಯಾಗಿರುವುದು ಸತ್ಯ. ಲೆಸ್ಟೋಸ್ಟೆರೋಸಿಸ್ ಎಂಬುದು ಇದರ ವೈಜ್ಞಾನಿಕ ಹೆಸರು. ಇಲಿಜ್ವರ ಎಂದಾಕ್ಷಣ ಸಾರ್ವಜನಿಕರು ಆತಂಕಕ್ಕೆ ಒಳಗಾಗುವ ಅಗತ್ಯ ಇಲ್ಲ. ವಿಶೇಷವಾಗಿ ಕಾಮಾಲೆ ಜ್ವರದ ಗುಣಲಕ್ಷಣ ಇರುವವರು ನಿರ್ಲಕ್ಷ್ಯ ಮಾಡುವಂತಿಲ್ಲ. ಸರಿಯಾದ ಸಮಯಕ್ಕೆ ಸೂಕ್ತ ಚಿಕಿತ್ಸೆ ನೀಡಿದರೆ ವಾಸಿಯಾಗುವ ಕಾಯಿಲೆ ಇದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಲಿಂಗರಾಜ ತಿಳಿಸಿದ್ದಾರೆ.

ಇದು ಸೂಕ್ಷ್ಮಾಣು ಜೀವಿಗಳಿಂದ ಹರಡುವ ಸಾಂಕ್ರಾಮಿಕ ರೋಗವಾಗಿದ್ದು, ಇಲಿ, ಹೆಗ್ಗಣ, ಬೆಕ್ಕು, ನಾಯಿ ಹಾಗೂ ಕಾಡುಪ್ರಾಣಿಗಳ ಮೂತ್ರ ವಿಸರ್ಜನೆಯಿಂದ ನೀರಿನಲ್ಲಿ ಸೇರಿಕೊಂಡ ರೋಗಾಣು ಹರಡುತ್ತದೆ. ಕಲುಷಿತ ನೀರು ಮಾನವನ ದೇಹ ಸೇರಿದಾಗ ಶರೀರದ ಮೇಲಿನ ಗಾಯಗಳು, ಬಾಯಿ, ಮೂಗು ಹಾಗೂ ಕಣ್ಣುಗಳ ಒಳಭಾಗದ ಮೂಲಕ ಸೇರಿ ಖಾಯಿಲೆ ಬರುತ್ತದೆ.
ಇಲಿಜ್ವರದ ಲಕ್ಷಣಗಳು…
1. ಜ್ವರ, ಮಾಂಸ ಖಂಡಗಳಲ್ಲಿ ನೋವು, ಮೈಕೈ ನೋವು, ತಲೆನೋವು, ಕಾಮಾಲೆ, ಬಾಯಿ, ಮೂಗು, ಕಫದಲ್ಲಿ ರಕ್ತಸ್ರಾವ ಇಲಿಜ್ವದ ಪ್ರಮುಖ ಲಕ್ಷಣಗಳು. ಮೂತ್ರಪಿಂಡ(ಕಿಡ್ನಿ) ಹಾಗೂ ಹೃದಯದ ಸೋಂಕಿಗೂ ಕಾರಣವಾಗಬಹುದು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








