ಟಿ20 ವಿಶ್ವಕಪ್ನಲ್ಲಿ (T20 World Cup 2024) ಲೀಗ್ ಹಂತದ ಪಂದ್ಯಗಳು ಕೊನೆಯ ಹಂತಕ್ಕೆ ಬಂದು ನಿಂತಿವೆ. ಈಗಾಗಲೇ ಸೂಪರ್ 8 ಹಂತಕ್ಕೆ 6 ತಂಡಗಳು ಎಂಟ್ರಿ ಕೊಟ್ಟಿವೆ. ಇನ್ನೂ ಎರಡು ತಂಡಗಳು ಪ್ರವೇಶ ಪಡೆಯಬೇಕಿವೆ.
ಟೂರ್ನಿಯಲ್ಲಿ ಇಲ್ಲಿಯವರೆಗೆ 31 ಪಂದ್ಯಗಳು ನಡೆದಿವೆ. ದಕ್ಷಿಣ ಆಫ್ರಿಕಾ ವಿರುದ್ಧ ಇಂದು ರೋಚಕ ಸೋಲು ಕಾಣುವುದರ ಮೂಲಕ ನೇಪಾಳ ತಂಡ ಕೂಟ ಟೂರ್ನಿಯಿಂದ ಹೊರ ಬಿದ್ದಿದೆ. 8 ತಂಡಗಳ ಪೈಕಿ 6 ತಂಡಗಳು ಈಗಾಗಲೇ ಸೂಪರ್ 8 ಹಂತಕ್ಕೆ ತಲುಪಿವೆ. ಭಾರತ, ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ, ಅಫ್ಘಾನಿಸ್ತಾನ, ವೆಸ್ಟ್ ಇಂಡೀಸ್ ಮತ್ತು ಯುಎಸ್ಎ ತಂಡಗಳು ಸೇರಿವೆ. ಮೊದಲ ಟಿ20 ವಿಶ್ವಕಪ್ ಆಡುತ್ತಿರುವ ಅಮೆರಿಕ ತಂಡ ತನ್ನ ಮೊದಲ ಆವೃತ್ತಿಯಲ್ಲೇ ಅದ್ಭುತ ಪ್ರದರ್ಶನ ನೀಡಿ ಸೂಪರ್ 8ರ ಸುತ್ತಿಗೆ ಪ್ರವೇಶ ಪಡೆದಿದೆ.
ಮತ್ತೊಂದೆಡೆ 10 ತಂಡಗಳು ಸೂಪರ್-8 ರೇಸ್ನಿಂದ ಹೊರಗೆ ಬಿದ್ದಿವೆ. ಪಾಕಿಸ್ತಾನ, ಕೆನಡಾ, ಐರ್ಲೆಂಡ್, ನ್ಯೂಜಿಲೆಂಡ್, ನಮೀಬಿಯಾ, ಪಪುವಾ ನ್ಯೂಗಿನಿಯಾ, ಶ್ರೀಲಂಕಾ, ಉಗಾಂಡಾ, ನೇಪಾಳ ಮತ್ತು ಒಮಾನ್ ತಂಡಗಳು ಹೊರ ಬಿದ್ದಿವೆ. ನಾಲ್ಕು ತಂಡಗಳ ಮಧ್ಯೆ ಸೂಪರ್ 8 ತಲುಪಲು ಪೈಪೋಟಿ ನಡೆದಿದೆ. ಈ ಬಾರಿ ಪಾಕಿಸ್ತಾನ್ ಹಾಗೂ ನ್ಯೂಜಿಲೆಂಡ್ ತಂಡಗಳು ಅಚ್ಚರಿ ಎಂಬಂತೆ ಸೂಪರ್-8ರ ಘಟ್ಟ ತಲುಪದೆ ಹೊರಗೆ ಬಿದ್ದಿವೆ.