ಭಾರತ-ಪಾಕ್ ಗಡಿಯಲ್ಲಿ 65 ಕೋಟಿ ರೂ. ಮೌಲ್ಯದ ಹೆರಾಯಿನ್ ವಶಪಡಿಸಿಕೊಂಡ ಬಿಎಸ್‌ಎಫ್
ಚಂಡೀಗಢ, ಸೆಪ್ಟೆಂಬರ್25: ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಗುರುವಾರ ಪಂಜಾಬ್‌ನ ಫಿರೋಜ್‌ಪುರ ಜಿಲ್ಲೆಯಲ್ಲಿ 65 ಕೋಟಿ ರೂ. ಮೌಲ್ಯದ ಹೆರಾಯಿನ್ ಅನ್ನು ವಶಪಡಿಸಿಕೊಂಡಿದೆ.
ಭಾರತ ಪಾಕಿಸ್ತಾನದ ಅಂತರರಾಷ್ಟ್ರೀಯ ಗಡಿಯುದ್ದಕ್ಕೂ ಕಳ್ಳಸಾಗಣೆ ಪ್ರಯತ್ನಗಳನ್ನು ಗಡಿ ಭದ್ರತಾ ಪಡೆ ಪಟ್ಟುಬಿಡದೆ ತಡೆಯುತ್ತಿದೆ ಎಂದು ಬಿಎಸ್ಎಫ್ ಪಂಜಾಬ್ ಟ್ವೀಟ್ ಮಾಡಿದೆ.
ತಮ್ಮ ಆರೋಗ್ಯದ ಗುಟ್ಟನ್ನು ಬಹಿರಂಗ ಪಡಿಸಿದ ಪ್ರಧಾನಿ ಮೋದಿ
ಶೋಧ ಕಾರ್ಯಾಚರಣೆಯಲ್ಲಿ, 116 ಬೆಟಾಲಿಯನ್‌ನ ಸೈನಿಕರು 13 ಕೆಜಿ ಹೆರಾಯಿನ್ ತುಂಬಿದ ನಾಲ್ಕು ಪ್ಲಾಸ್ಟಿಕ್ ಕ್ಯಾನ್‌ಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಅದು ಹೇಳಿದೆ. ಪಂಜಾಬ್ ಪಾಕಿಸ್ತಾನದೊಂದಿಗೆ 553 ಕಿ.ಮೀ ಉದ್ದದ ಅಂತರರಾಷ್ಟ್ರೀಯ ಗಡಿಯನ್ನು ಹಂಚಿಕೊಂಡಿದೆ.






