ಬೀದರ್ : ಮಹಾರಾಷ್ಟ್ರಕ್ಕೆ ಅಕ್ರಮವಾಗಿ (Maharashtra) ಸಾಗಾಟವಾಗುತ್ತಿದ್ದ 7 20 ಲಕ್ಷ ರೂ. ಮೌಲ್ಯದ ತಂಬಾಕನ್ನು (Tobacco) ಜಪ್ತಿ ಮಾಡಲಾಗಿದೆ.
ಬೀದರ್ (Bidar) ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಬಂಗ್ಲಾ ಕ್ರಾಸ್ ಹತ್ತಿರ ಈ ಅಪಾರ ಮೌಲ್ಯದ ತಂಬಾಕನ್ನು ವಶಕ್ಕೆ ಪಡೆಯಲಾಗಿದೆ. ಸರ್ಕಾರದಿಂದ ಯಾವುದೇ ಅನುಮತಿ ಪಡೆಯದೆ ಪ್ರತಿಷ್ಠಿತ M – SCENTED TOBACOO GOLD ಕಂಪನಿಯ ತಂಬಾಕು ಪ್ಯಾಕೆಟ್ ಗಳನ್ನು ಸಾಗಾಟ ಮಾಡಲಾಗುತ್ತಿತ್ತು.
ಸದ್ಯ ಈ ತಂಬಾಕು ಸಾಗಾಟ ಮಾಡುತ್ತಿದ್ದ ಜಾಫರ್ಮಿಯಾ ಎಂಬ ವ್ಯಕ್ತಿಯ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಅಲ್ಲದೇ, ಸಾಗಾಟಕ್ಕೆ ಬಳಕೆ ಮಾಡಿದ್ದ 20 ಲಕ್ಷ ರೂ. ಮೌಲ್ಯದ ವಾಹನ ಸೇರಿದಂತೆ ಹಲವು ವಸ್ತುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ವ್ಯಕ್ತಿ ಹೈದರಾಬಾದ್ ನಿಂದ ಮುಂಬಯಿಗೆ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಎನ್ನಲಾಗಿದೆ.