75th independence day | ರೈತರು, ಸೈನಿಕರಿಗೆ ಸಲಾಂ ಹೇಳಿದ ಬೊಮ್ಮಾಯಿ
ಬೆಂಗಳೂರು : ಬ್ರಿಟೀಷರಿಗೆ ಮೊದಲು ಸೆಡ್ಡು ಹೊಡೆದಿದ್ದು ನಮ್ಮ ಹೆಮ್ಮೆಯ ಕಿತ್ತೂರು ರಾಣಿ ಚೆನ್ನಮ್ಮ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ದೇಶದೆಲ್ಲೆಡೆ 75ನೇ ಸ್ವಾತಂತ್ರ್ಯೋತ್ಸವದ ಸಂಭ್ರಮ ಮನೆ ಮಾಡಿದೆ. ಬೆಂಗಳೂರಿನ ಮಾಣೆಕ್ ಷಾ ಮೈದಾನದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಧ್ವಜಾರೋಹಣ ನೆರವೇರಿಸಿದರು.
ಇದಾದ ಬಳಿಕ ತೆರೆದ ವಾಹನದಲ್ಲಿ ಮುಖ್ಯಮಂತ್ರಿಗಳು ಸಂಚರಿಸಿ, ವಿವಿಧ ಪಡೆಗಳಿಗೆ ಗೌರವ ಸಲ್ಲಿಸಿದರು.
ಸದ್ಉ ರಾಜ್ಯವನ್ನುದ್ದೇಶಿಸಿ ಮಾತನಾಡುತ್ತಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮೊದಲ ರಾಜ್ಯದ ಜನರಿಗೆ ಸ್ವಾತಂತ್ರ್ಯೋತ್ಸವ ಶುಭಾಶಯಗಳನ್ನು ತಿಳಿಸಿದರು.
ಜೊತೆಗೆ ಸ್ವಾತಂತ್ರ್ಯ ಹೋರಾಟಗಾರರನ್ನು ಸ್ಮರಿಸಿದರು. ತ್ಯಾಗ ಬಲಿದಾಗಳನ್ನು ಸ್ಮರಿಸಿದರು.
ಭಾರತ ದೇಶಕ್ಕೆ ಈಗ ಅಮೃತ ಘಳಿಗೆ ಬಂದಿದೆ. ಸ್ವಾತಂತ್ರ್ಯ ಹೋರಾಟದಲ್ಲಿ ಸಾಕಷ್ಟು ಮಂದಿ ಹೋರಾಟ ನಡೆಸಿದ್ದಾರೆ. ಎಲ್ಲರ ಕಾಣಿಗೆ ಸ್ಮರಣವಾಗಿರಬೇಕು.

ಜಲಿಯನ್ ವಾಲಾವಾಗ್ ಹತ್ಯಾಕಾಂಡ ಮರೆಯಲು ಸಾಧ್ಯವೇ ಇಲ್ಲ. ದೇಶಕ್ಕೆ ಭಾರಿ ದೊಡ್ಡ ಚರಿತ್ರೆ ಇದೆ, ಬೇಕಿರುವುದು ಚಾರಿತ್ರೆ. ಯುವಕರು ದೇಶಕ್ಕಾಗಿ ಪ್ರಾಣ ಬೇಕಿಲ್ಲ, ನಿಮ್ಮ ಶ್ರದ್ದೆ, ಶ್ರಮ ಬೇಕು. ದೇಶ ಮೊದಲು, ನಮ್ಮ ಕರ್ತವ್ಯಗಳನ್ನು ಮಾಡಬೇಕು. ಬುದ್ಧಿವಂತ, ಶ್ರಮಜೀವಿಗಳು ಇರುವ ದೇಶ ನಮ್ಮದು.
ಇದೇ ವೇಳೆ 75ನೇ ಸ್ವತಂತ್ರ್ಯ ದಿನಾಚರಣೆಯನ್ನು ಹೋರಾಟ ನಡೆದ ಅನಾಮಧೇಯ ಹೋರಾಟಗಾರರಿಗೆ ಬೊಮ್ಮಾಯಿ ಸಮರ್ಪಿಸಿದರು.
ಅಮೃತಕಾಲಕ್ಕೆ ಭದ್ರ ಬುನಾದಿ ಹಾಕಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಕರೆಕೊಟ್ಟಿದ್ದಾರೆ. ಅವರೊಂದಿಗೆ ನಾವು ಕೈ ಜೋಡಿಸಬೇಕಾಗಿದೆ ಎಂದು ಜನರಿಗೆ ಕರೆಕೊಟ್ಟರು.