86ನೇ ಕನ್ನಡ ಸಾಹಿತ್ಯ ಸಮ್ಮೇಳನ; ಅಧ್ಯಕ್ಷರಾಗಿ ಸಾಹಿತಿ ಡಾ.ದೊಡ್ಡರಂಗೇಗೌಡ ಆಯ್ಕೆ
ಬೆಂಗಳೂರು : 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಹಿರಿಯ ಸಾಹಿತಿ, ಪದ್ಮಶ್ರೀ ಪುರಸ್ಕøತ ಡಾ.ದೊಡ್ಡರಂಗೇಗೌಡ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ.
86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಹಾವೇರಿಯಲ್ಲಿ ನಡೆಯಲಿದೆ.
ಇದರ ಅಧ್ಯಕ್ಷರನ್ನಾಗಿ ಡಾ.ದೊಡ್ಡರಂಗೇಗೌಡ ಅವರು ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ ಎಂದು ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಮನುಬಳಿಗಾರ್ ತಿಳಿಸಿದ್ದಾರೆ.
ಹಾವೇರಿಯ ಜಿ.ಹೆಚ್.ಗುದ್ದಲ್ಯಪ್ಪ ಹಳ್ಳಿಕೇರಿ ಕಾಲೇಜು ಪಕ್ಕದ 25 ಎಕರೆ ಜಮೀನಿನಲ್ಲಿ ಫೆಬ್ರವರಿ 26, 27 ಮತ್ತು 28 ರಂದು ಸಮ್ಮೇಳನ ನಡೆಯಲಿದೆ. ಫೆಬ್ರವರಿ 26 ರಿಂದ ಸಾಹಿತ್ಯ ಸಮ್ಮೇಳಕ್ಕೆ ತಯಾರಿ ನಡೆಯಲಿದೆ.
ಒಂದು ದಿನಕ್ಕೆ ಸುಮಾರು ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ ಇದೆ. ಸರ್ಕಾರಕ್ಕೆ ಅನುಮತಿಗಾಗಿ ಈಗಾಗಲೇ ಪ್ರಸ್ತಾವನೆ ಕೂಡ ಕಳಿಸಲಾಗಿದೆ.
ಫೆಬ್ರವರಿ ಮೊದಲ ವಾರದೊಳಗೆ ಸರ್ಕಾರದ ಅನುಮತಿ ಸಿಗುವ ವಿಶ್ವಾಸ ಇದೆ. ಸುಮಾರು 500 ಮಳಿಗೆಗಳು ಸಮ್ಮೇಳನದಲ್ಲಿ ಇರಲಿವೆ ಎಂದು ಡಾ.ಮನುಬಳಿಗಾರ್ ತಿಳಿಸಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel









