ಬೆಳಗಾವಿ : 9 ಮಂದಿಗೆ ಬ್ಲ್ಯಾಕ್ ಫಂಗಸ್, ವೈಟ್ ಫಂಗಸ್ ಗೆ 2 ಬಲಿ
ಬೆಳಗಾವಿ : ಕಳೆದ 15 ದಿನಗಳಲ್ಲಿ ಜಿಲ್ಲೆಯಲ್ಲಿ 9 ಜನರಲ್ಲಿ ಬ್ಲ್ಯಾಕ್ ಫಂಗಸ್ ಪತ್ತೆಯಾಗಿದ್ದು, ಇಬ್ಬರು ವೈಟ್ ಫಂಗಸ್ ಗೆ ಬಲಿಯಾಗಿದ್ದಾರೆ.
ಕೊರೊನಾದ ಬೆನ್ನಲ್ಲೆ ರಾಜ್ಯದಲ್ಲಿ ಬ್ಲಾಕ್ ಫಂಗಸ್, ವೈಟ್ ಫಂಗಸ್ ಕೇಸ್ ಗಳು ಹೆಚ್ಚಾಗುತ್ತಿವೆ.
ಇದೀಗ ಈ ಫಂಗಸ್ ಕುಂದಾನಗರಿ ಬೆಳಗಾವಿಯಲ್ಲೂ ತನ್ನ ಕಬಂದ ಬಾಹುಗಳನ್ನು ಚಾಚಿದೆ.
ಕಳೆದ 15 ದಿನಗಳಲ್ಲಿ ಜಿಲ್ಲೆಯಲ್ಲಿ ಕೊರೊನಾದಿಂದ ಗುಣಮುಖರಾಗುತ್ತಿರುವ 9 ಜನರಲ್ಲಿ ಬ್ಲ್ಯಾಕ್ ಫಂಗಸ್ ಪತ್ತೆಯಾಗಿದೆ.
ಗೋಕಾಕ್ ಹಾಗೂ ಅಥಣಿ ತಾಲೂಕಿನಲ್ಲಿ ಇಬ್ಬರು ವೈಟ್ ಫಂಗಸ್ ಗೆ ಬಲಿಯಾಗಿದ್ದಾರೆ ಎಂದು ಡಿ ಹೆಚ್ ಒ ಡಾ.ಶಶಿಕಾಂತ ಮುನ್ಯಾಳ ತಿಳಿಸಿದ್ದಾರೆ.
ವಾತಾವರಣದಲ್ಲಿ ಬ್ಲ್ಯಾಕ್ ಹಾಗೂ ವೈಟ್ ಎರಡೂ ರೀತಿಯ ಫಂಗಸ್ ಗಳಿವೆ. ಶೇ.60-70ರಷ್ಟು ಬ್ಲ್ಯಾಕ್ ಫಂಗಸ್ ಇದ್ದರೆ, ಶೇ.30-40ರಷ್ಟು ವೈಟ್ ಫಂಗಸ್ ಇದೆ.
ಆಕ್ಸಿಜನ್ ಪೈಪ್ ಲೈನ್ 48 ಗಂಟೆಗಳಲ್ಲಿ ಬದಲಿಸಬೇಕು. ಇದರಲ್ಲಿ ಅಸಮರ್ಪಕ ನೀರಿನ ಬಳಕೆಯಿಂದಾಗಿ ಹಾಗೂ ಅತಿಯಾದ ಸ್ಟಿರಾಯ್ಡ್ ಬಳಕೆ, ಅನಿಯಂತ್ರಿತ ಶುಗರ್ ಇರುವ ಸೋಂಕಿತರಲ್ಲಿ ಬ್ಲ್ಯಾಕ್ ಫಂಗಸ್ ಪತ್ತೆಯಾಗುತ್ತಿದೆ ಎಂದು ಅವರು ವಿವರಿಸಿದ್ದಾರೆ.









