ದಾಯಾದಿ ಕಲಹ | ಬೆಂಕಿ ಹಚ್ಚಿ ವ್ಯಕ್ತಿಯ ಕೊಲೆ mandya saaksha tv
ಮಂಡ್ಯ : ದಾಯಾದಿ ಕಲಹ ಹಿನ್ನೆಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ವ್ಯಕ್ತಿಯ ಕೊಲೆ ಮಾಡಿರುವ ಘಟನೆ ಮಂಡ್ಯ ಜಿಲ್ಲೆಯ ಕೆ.ಆರ್ ಪೇಟೆ ತಾಲೂಕಿನ ಮೂಡನಹಳ್ಳಿಯಲ್ಲಿ ನಡೆದಿದೆ.
29 ವರ್ಷದ ರಘು ಮೃತ ದುರ್ದೈವಿಯಾಗಿದ್ದಾರೆ. ಶಿವು ಬೆಂಕಿ ಹಚ್ಚಿದ ಆರೋಪಿಂಯಾಗಿದ್ದಾರೆ.
ಸೆಪ್ಟೆಂಬರ್ 25 ರಂದು ಕಾರಿನ ಒಳಗೆ ಕುಳಿತು ಗ್ಲಾಸ್ ಮೇಲೆತ್ತುವ ವೇಳೆ ರಘುಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ.
ಅಂದು ಸುಟ್ಟಗಾಯಗಳಿಂದ ಬಳಲುತ್ತಿದ್ದ ರಘು ಅವರನ್ನು ಮೈಸೂರಿನ ಕೆಆರ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.
ಇದೀಗ ಚಿಕಿತ್ಸೆ ಫಲಿಸದೆ ರಘು ಸಾವನ್ನಪ್ಪಿದ್ದಾರೆ.
ರಘು ದಾಯಾದಿ ಶಿವು ಎಂಬುವವರು ಈ ಕೃತ್ಯ ಎಸಗಿದ್ದಾರೆ ಎಂದು ಆರೋಪಿಸಲಾಗಿದ್ದು, ಘಟನೆ ನಂತರ ಶಿವು ತಲೆ ಮರೆಸಿಕೊಂಡಿದ್ದಾನೆ.









