ಜಾಗತಿಕ ಹಸಿವು ಸೂಚ್ಯಂಕ: ಪಾಕ್ ಗಿಂತ ಭಾರತದಲ್ಲಿ ಹಸಿವಿನ ಪ್ರಮಾಣ ಹೆಚ್ಚು Global Hunger Index saaksha tv
ನವದೆಹಲಿ : ಜಾಗತಿಕ ಹಸಿವು ಸೂಚ್ಯಂಕ 2021ರ ಪಟ್ಟಿಯಲ್ಲಿ ನೆರೆಯ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ನೇಪಾಳ ದೇಶಗಳಿಂತ ಭಾರತ ಅತ್ಯಂತ ಹೀನಾಯ ಸ್ಥಿತಿಯಲ್ಲಿದೆ.
ಇಂದು ಐರಿಷ್ ಸಂಘಟನೆಯಾದ ಕನ್ಸರ್ನ್ ವಲ್ರ್ಡ್ ವೈಡ್ ಮತ್ತು ಜರ್ಮನ್ ಸಂಘಟನೆ ವೆಲ್ಟ್ ಹಂಗರ್ ಹಿಲ್ಫ್ ತಮ್ಮ ವರದಿಯನ್ನು ಪ್ರಕಟಿಸಿವೆ.
ಈ ವರದಿಯಲ್ಲಿ ಭಾರತದಲ್ಲಿನ ಹಸಿವಿನ ತೀವ್ರತೆಯ ಬಗ್ಗೆ ಆತಂಕ ವ್ಯಕ್ತಪಡಿಸಲಾಗಿದೆ.
ಯಾಕಂದರೇ ಜಾಗತಿಕ ಹಸಿವು ಸೂಚ್ಯಂಕದಲ್ಲಿ 116 ದೇಶಗಳ ಪೈಕಿ ಭಾರತ 101ನೇ ಸ್ಥಾನ ಪಡೆದುಕೊಂಡಿದೆ.
ಕಳೆದ 107 ರಾಷ್ಟ್ರಗಳ ಪೈಕಿ ಭಾರತ 94 ಸ್ಥಾನದಲ್ಲಿತ್ತು. ಆದ್ರೆ ಈಗ 12 ಸ್ಥಾನಗಳ ಕುಸಿತ ಕಂಡಿದೆ.
ನೆರೆಯ ಪಾಕಿಸ್ತಾನ 92ನೇ ಸ್ಥಾನದಲ್ಲಿದ್ದೇ, ನೇಪಾಳ 76ನೇ ಸ್ಥಾನ, ಬಾಂಗ್ಲಾದೇಶ 76ನೇ ಸ್ಥಾನದಲ್ಲಿವೆ. ಈ ರಾಷ್ಟ್ರಗಳಿಗಿಂತ ಭಾರತದಲ್ಲಿ ಹಸಿವಿನ ಪ್ರಮಾಣ ಹೆಚ್ಚಾಗಿದೆ.









