ಡಾ.ದ.ರಾ.ಬೇಂದ್ರೆ 125ನೇ ಜನ್ಮ ದಿನಾಚರಣೆ : Shimoga ಶಿವಮೊಗ್ಗದಲ್ಲಿ ಸಂಗೀತ ಕಾರ್ಯಕ್ರಮ
ಶಿವಮೊಗ್ಗ : ಅಂಬಿಕಾತನಯದತ್ತ ಎಂದೇ ಪ್ರಸಿದ್ಧರಾದ ವರಕವಿ ಡಾ. ದ.ರಾ ಬೇಂದ್ರೆ ಅವರ 125ನೇ ಜನ್ಮ ದಿನಾಚರಣೆ ಪ್ರಯುಕ್ತ ಅಜೇಯ ಸಂಸ್ಕೃತಿ ಬಳಗದ ವತಿಯಿಂದ ಶಿವಮೊಗ್ಗದಲ್ಲಿ ನಿನ್ನೆ ಸಂಗೀತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕುವೆಂಪು ರಂಗಮಂದಿರದಲ್ಲಿ ನಡೆದ ಕಾರ್ಯಕ್ರಮಕ್ಕೆ ಸಾಂಸ್ಕೃತಿಕ ಪರಿಚಾರಕ ಡಾ.ಶ್ರೀನಿವಾಸ ಮೂರ್ತಿ ಚಾಲನೆ ನೀಡಿದರು.
ಪ್ರಸಿದ್ಧ ಸುಗಮ ಗಾಯಕ ಪ್ರಹ್ಲಾದ್ ದೀಕ್ಷಿತ್ ಮತ್ತು ತಂಡ ಪ್ರೇಕ್ಷಕರಿಗೆ ಬೇಂದ್ರೆ ಕಾವ್ಯಗಳ ಗಾನಸುಧೆಯನ್ನು ಉಣಬಡಿಸಿತು.
ಈ ವೇಳೆ ನಗರದ ಸಂಗೀತ ರಸಿಕರು ಪಾಲ್ಗೊಂಡು ಗಾಯನ ಸುಧೆಯನ್ನು ಕೇಳಿ ಆನಂದಿಸಿದರು.









