ದೀಪಕ್ ಚಹರ್ ಗೆ ರೋಹಿತ್ ಶರ್ಮಾ ಸೆಲ್ಯೂಟ್
ಈಡನ್ ಗಾರ್ಡನ್ನಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ಭಾರತ ಅದ್ಭುತ ಗೆಲುವು ಸಾಧಿಸಿದೆ.
ಆದ್ರೆ ಈ ಪಂದ್ಯದಲ್ಲಿ ನಡೆದ ಒಂದು ಆಸಕ್ತಿಕರ ಸನ್ನಿವೇಶ ಸೋಶಿಯಲ್ ಮೀಡಿಯಾದಲ್ಲಿದ ಭಾರಿ ಸದ್ದು ಮಾಡುತ್ತಿದೆ.
ಕಿವೀಸ್ ವಿರುದ್ಧದ ಅಂತಿಮ ಪಂದ್ಯದಲ್ಲಿ ಟೀಂ ಇಂಡಿಯಾ ವೇಗದ ಬೌಲರ್ ದೀಪಕ್ ಚಹಾರ್ ಅವರು ಬೌಲಿಂಗ್ ನಲ್ಲಿ ಮಾತ್ರವಲ್ಲ ಬ್ಯಾಟಿಂಗ್ ನಲ್ಲೂ ಮಿಂಚುತ್ತೇನೆ ಎಂದು ಮತ್ತೆ ಸಾಭೀತು ಮಾಡಿದ್ದಾರೆ.
ಭಾನುವಾರ ನಡೆದ ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಚಹಾರ್ 21 ರನ್ ಗಳಿಸಿ ರೋಹಿತ್ ಸೇನೆಯ ಬೃಹತ್ ಸ್ಕೋರ್ ನಲ್ಲಿ ತಮ್ಮ ಪಾತ್ರವನ್ನು ವಹಿಸಿದ್ದರು.
ಇನ್ನು ಟೀಂ ಇಂಡಿಯಾದ ಇನಿಂಗ್ಸ್ನ ಕೊನೆಯ ಓವರ್ನಲ್ಲಿ ಆಡಮ್ ಮಿಲ್ನೆ ಬೌಲ್ ಮಾಡಿದರು.
ದೀಪಕ್ ಚಹಾರ್ ಮೊದಲ ಎರಡು ಬಾಲ್ ಗಳಲ್ಲಿ ಎರಡು ಬೌಂಡರಿಗಳನ್ನು ಬಾರಿಸಿದರು. ನಾಲ್ಕನೇ ಎಸೆತವನ್ನು ಲಾಂಗ್ ಅನ್ ಕಡೆಗೆ ಸಿಕ್ಸರ್ ಬಾರಿಸಿದರು.
ದೀಪಕ್ ಚಹಾರ್ ಶಾರ್ಟ್ ಬಾಲ್ ಅನ್ನು ಸಿಕ್ಸರ್ಗೆ ಬಾರಿಸಿದ್ದಕ್ಕಾಗಿ ಡಗೌಟ್ ನಲ್ಲಿ ಕುಳಿತಿದ್ದ ರೋಹಿತ್ ಶರ್ಮಾ ಸೆಲ್ಯೂಟ್ ಮಾಡಿದರು.
https://twitter.com/i/status/1462442025974779910
ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ.









