ಭ್ರಷ್ಟ ಬಿಜೆಪಿಯ ಸರ್ಕಾರದಲ್ಲಿ ಕುರುಡು ಕಾಂಚಾಣ ಕುಣಿಯುತ್ತಿದೆ : ಕಾಂಗ್ರೆಸ್ BJP government saaksha tv
ಬೆಂಗಳೂರು : ಭ್ರಷ್ಟ ಬಿಜೆಪಿಯ 40% ಕಮಿಷನ್ ಸರ್ಕಾರದಲ್ಲಿ ಕುರುಡು ಕಾಂಚಾಣ ಎಲ್ಲೆಡೆ ಕುಣಿಯುತ್ತಿದೆ ಎಂದು ರಾಜ್ಯ ಕಾಂಗ್ರೆಸ್ ಆರೋಪಿಸಿದೆ.
ಈ ಕುರಿತು ಟ್ವಿಟ್ ಮಾಡಿರುವ ಕಾಂಗ್ರೆಸ್, ಅಕಾಲಿಕ ಮಳೆ ಹಾನಿಗೆ 900 ಕೋಟಿ ಪರಿಹಾರಕ್ಕಾಗಿ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸುವ ಮಾತನಾಡಿರುವ ಅಶೋಕ್ ಅವರೇ, 2019ರಿಂದ ಇಲ್ಲಿಯವರೆಗೆ ರಾಜ್ಯ ಪ್ರತಿ ವರ್ಷ ನೆರೆ ಹಾವಳಿ ಎದುರಿಸಿದೆ.
ಇದುವರೆಗೂ ಎಷ್ಟು ಹಣ ನೀಡಿದೆ ನಿಮ್ಮ ಡಬಲ್ ಇಂಜಿನ್ ಸರ್ಕಾರ ? ಈ ಹಿಂದಿನ ಪರಿಹಾರವನ್ನೇ ನೀಡದ ಕೇಂದ್ರ ಸರ್ಕಾರ ಈಗ 900 ಕೋಟಿ ನೀಡುವ ನಂಬಿಕೆ ಇದೆಯೇ ಎಂದು ಪ್ರಶ್ನಿಸಿದೆ.
ಭ್ರಷ್ಟ ಬಿಜೆಪಿಯ 40% ಕಮಿಷನ್ ಸರ್ಕಾರದಲ್ಲಿ ಕುರುಡು ಕಾಂಚಾಣ ಎಲ್ಲೆಡೆ ಕುಣಿಯುತ್ತಿದೆ.
ಗುತ್ತಿಗೆದಾರರು ಅಧಿಕಾರಿಗಳಿಂದ ಜನಪ್ರತಿನಿಧಿಗಳವರೆಗೆ ಮಂಜೂರಾದ ಅನುದಾನದಲ್ಲಿ 40% ಕಮಿಷನ್ ಕೊಡಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.
ಇಂತಹ ಭ್ರಷ್ಟ ಸರ್ಕಾರವಿದ್ದರೆ ಕಾಮಗಾರಿಗಳ ಗುಣಮಟ್ಟ ಉತ್ತಮವಾಗಿರಲು, ರಾಜ್ಯ ಅಭಿವೃದ್ಧಿ ಕಾಣಲು ಹೇಗೆ ಸಾಧ್ಯ ಎಂದು ಕಾಂಗ್ರೆಸ್ ಕುಟುಕಿದೆ.









