`ಅಂಜನಿಪುತ್ರ’ನಿಗೆ `ಹನುಮ ಮಾಲಾಧಾರಿ’ಗಳಿಂದ ವಿಶೇಷ ನಮನ puneeth-rajkumar saaksha tv
ಮಂಡ್ಯ : ಇತ್ತೀಚೆಗೆ ನಿಧನರಾದ ಸ್ಯಾಂಡಲ್ವುಡ್ನ ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ ಅವರಿಗೆ ಶ್ರೀರಂಗಪಟ್ಟಣದಲ್ಲಿ ಹನುಮ ಮಾಲಾಧಾರಿಗಳು ವಿಶೇಷ ನಮನ ಸಲ್ಲಿಸಿದ್ದಾರೆ.
ಹನುಮ ಜಯಂತಿ ಅಂಗವಾಗಿ ಇಂದು ಮಂಡ್ಯದ ಶ್ರೀರಂಗಪಟ್ಟಣದಲ್ಲಿ ಹನುಮ ಮಾಲಾಧಾರಿಗಳಿಂದ ಸಂಕೀರ್ತನಾ ಯಾತ್ರೆಯನ್ನು ಹಮ್ಮಿಕೊಳ್ಳಲಾಗಿತ್ತು. ಈ ಯಾತ್ರೆಗೆ 15 ಸಾವಿರಕ್ಕೂ ಹೆಚ್ಚು ಹನುಮ ಮಾಲಾಧಾರಿ ಭಕ್ತರು ಆಗಮಿಸಿದ್ದು, ಶ್ರೀರಂಗಪಟ್ಟಣ ಕೇಸರಿಮಯವಾಗಿದೆ.
ಈ ಸಂದರ್ಭದಲ್ಲಿ ಅಪ್ಪು ಅವರ ಕೆಲ ಅಭಿಮಾನಿಗಳು ಪುನೀತ್ ಭಾವಚಿತ್ರ ಇಟ್ಟು ನಮನ ಸಲ್ಲಿಸಿದ್ದಾರೆ. ಹನುಮ ಮಾಲಾಧಾರಿಗಳು ರಾಮನ ಜಪದ ಜೊತೆ ಅಪ್ಪು ಜಪ ಕೂಡ ಮಾಡುತ್ತಿದ್ದಾರೆ.









