ದಲಿತ ಯುವತಿಯನ್ನ ಮದ್ವೆಯಾಗಿದ್ದಕ್ಕೆ ಸ್ವಜಾತಿಯಿಂದ ಬಹಿಷ್ಕಾರ
ಚಿಕ್ಕಮಗಳೂರು : ದಲಿತ ಯುವತಿಯನ್ನು ಮದುವೆಯಾದ ಎಂಬ ಕಾರಣಕ್ಕಾಗಿ ಒಂದು ಕುಟುಂಬವನ್ನೇ ಸ್ವಜಾತಿಯವರು ಬಹಿಷ್ಕಾರ ಹಾಕಿರುವ ಘಟನೆ ತರೀಕೆರೆ ತಾಲೂಕಿನ ಲಿಂಗದಹಳ್ಳಿಯಲ್ಲಿ ನಡೆದಿದೆ. Chikkamagalore dalit-hindu-family-barred-from-village saaksha tv
ಚಂದ್ರಶೇಖರ್ ಎಂಬುವವರು ಪ್ರೀತಿಸಿ ದಲಿತ ಯುವತಿಯನ್ನು ಮದುವೆಯಾಗಿದ್ದರು. ಈ ಕಾರಣಕ್ಕಾಗಿ ಸ್ವಜಾತಿ ಮುಖಂಡರು ಚಂದ್ರಶೇಖರ್ ಕುಟುಂಬಕ್ಕೆ ಬಹಿಷ್ಕಾರ ಹಾಕಿದ್ದಾರೆ.
ಅಲ್ಲದೇ ಇವರ ಜೊತೆ ಊರಿನಲ್ಲಿ ಯಾರೂ ಮಾತನಾಡುವಂತಿಲ್ಲ. ಒಂದು ವೇಳೆ ಯಾರಾದರೂ ಮಾತನಾಡಿದರೇ ಅವರಿಗೆ 5 ಸಾವಿರ ರೂ. ದಂಡ ವಿಧಿಸಲಾಗುತ್ತಿತ್ತು.
ಜೊತೆಗೆ ಚಂದ್ರಶೇಖರ್ ಕುಟುಂಬವೂ ಊರಿನ ಯಾವುದೇ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಇರಲಿಲ್ಲ.
ಇದರಿಂದ ರೋಸಿ ಹೋದ ಚಂದ್ರಶೇಖರ್ ಕುಟುಂಬ ಹಿಂದೂ ಧರ್ಮದಿಂದ ಕ್ರೈಸ್ತ ಧರ್ಮಕ್ಕೆ ಮತಾಂತರಗೊಳ್ಳಲು ಚಿಂತನೆ ನಡೆಸಿದ್ದರು.
ಆದ್ರೆ ಕೊನೆಗೆ ಹಿಂದೂ ಧರ್ಮದ ಮುಖಂಡರು ಚಂದ್ರಶೇಖರ್ ಕುಟುಂಬದ ಮನನೊಲಿಸಿದ್ದಾರೆ. ಇತ್ತ ನ್ಯಾಯಕ್ಕಾಗಿ ಚಂದ್ರಶೇಖರ್ ಕುಟುಂಬ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದೆ.









