yash dhull | ಯಶ್ ಧೂಳ್… ಶತಕದ ಸಂಭ್ರಮ..!
Yash Dhull scores century on first-class debut for Delhi in Ranji Trophy against Tamil Nadu
ಇಂದಿನಿಂದ ದೇಶಿ ವಿಶ್ವಕಪ್ ರಣಜಿ ಟ್ರೋಫಿ ಟೂರ್ನಿ ಶುರುವಾಗಿದೆ. ಟೂರ್ನಿಯ ಮೊದಲ ದಿನವೇ ಭಾರತದ ಉದಯೋನ್ಮುಖ ಆಟಗಾರ ಅಂಡರ್ 19 ವಿಶ್ವಕಪ್ ಗೆದ್ದ ನಾಯಕ ಯಶ್ ಧೂಳ್ ಶತಕದ ಸಂಭ್ರಮ ಆಚರಿಸಿದ್ದಾರೆ.
ಗೊವಾಹಟಿ ನಲ್ಲಿ ನಡೆಯುತ್ತಿರುವ ತಮಿಳುನಾಡು ವಿರುದ್ದಧ ಪಂದ್ಯದಲ್ಲಿ ಯಶ್ ಧೂಳ್, ಆರಂಭಿಕರಾಗಿ ಕಣಕ್ಕಿಳಿದು ಸೆಂಚೂರಿ ಸಿಡಿಸಿದ್ದಾರೆ. ಆ ಮೂಲಕ ಭಾರತೀಯ ಕ್ರಿಕೆಟ್ ನಲ್ಲಿ ಮತ್ತೊಬ್ಬ ಯುವ ಆಟಗಾರನ ಉದಯವಾಗಿದೆ.
ಅಂದಹಾಗೆ ಯಶ್ ಗೆ ಇದು ಚೊಚ್ಚಲ ರಣಜಿ ಪಂದ್ಯವಾಗಿದ್ದು, ಮೊದಲ ಪಂದ್ಯದಲ್ಲಿಯೇ ಚೊಚ್ಚಲ ಶತಕ ಸಿಡಿಸಿ ಸಂಭ್ರಮಿಸಿದ್ದಾರೆ. ಈ ಪಂದ್ಯದಲ್ಲಿ 80 ಸರಾಸರಿಯಲ್ಲಿ ಬ್ಯಾಟ್ ಬೀಸಿದ ಯಶ್, 135 ಎಸೆತಗಳಲ್ಲಿ ಸೆಂಚೂರಿ ಸಿಡಿಸಿದ್ದಾರೆ.









