Cooking : ಮೊಟ್ಟೆಯಿಂದ ಮಾಡಿ 5 ರೀತಿಯ ರುಚಿಕರ ಅಡುಗೆಗಳು.. ರೆಸಿಪಿಗಳು
ಎಗ್ ಸುಕ್ಕಾ
ಬೇಕಾಗುವ ಸಾಮಾಗ್ರಿಗಳು
ಮೊಟ್ಟೆ – 4
ಸಣ್ಣಗೆ ಕತ್ತರಿಸಿದ ಈರುಳ್ಳಿ – 1
ಹಸಿ ಮೆಣಸಿನ ಕಾಯಿ – 2
ಜೀರಿಗೆ – 1 ಚಮಚ
ತುರಿದ ತೆಂಗಿನಕಾಯಿ – 1/2 ಕಪ್
ಶುಂಠಿ ಬೆಳ್ಳುಳ್ಳಿ ಪೇಸ್ಟ್ – 1ಚಮಚ
ಮೆಣಸಿನ ಪುಡಿ – 1 ಚಮಚ
ಧನಿಯಾ ಪುಡಿ – 1 ಚಮಚ
ಹುಣಸೆ ರಸ ಅಗತ್ಯವಿರುವಷ್ಟು
ರುಚಿಗೆ ತಕ್ಕಷ್ಟು ಉಪ್ಪು
ಕರಿಬೇವಿನ ಸೊಪ್ಪು ಸ್ವಲ್ಪ
ಎಣ್ಣೆ- 3 ಚಮಚ
ಮಾಡುವ ವಿಧಾನ :
ಮೊದಲು ಮೊಟ್ಟೆಗಳನ್ನು ಬೇಯಿಸಿ ಎರಡು ತುಂಡುಗಳಾಗಿ ಕತ್ತರಿಸಿ. ಈಗ ಕಡಾಯಿ ಬಿಸಿ ಮಾಡಿ ತುರಿದ ತೆಂಗಿನಕಾಯಿಯನ್ನು ಹುರಿದು ಪಕ್ಕಕ್ಕೆ ಇರಿಸಿ. ನಂತರ ಕಡಾಯಿಗೆ ಒಂದು ಚಮಚ ಎಣ್ಣೆ ಹಾಕಿ ಬಿಸಿ ಮಾಡಿ ಈರುಳ್ಳಿ ತುಂಡುಗಳನ್ನು ಹುರಿದು ಇಟ್ಟುಕೊಳ್ಳಿ. ಈಗ ಕಡಾಯಿಗೆ ಎರಡು ಚಮಚ ಎಣ್ಣೆ ಸೇರಿಸಿ, ಜೀರಿಗೆ ಹುರಿಯಿರಿ. ಇದಕ್ಕೆ ಕತ್ತರಿಸಿದ ಹಸಿ ಮೆಣಸಿನ ಕಾಯಿ ಸೇರಿಸಿ ಹುರಿಯಿರಿ.

ಬಳಿಕ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಸೇರಿಸಿ. ನಂತರ ಮೆಣಸಿನ ಪುಡಿ, ಧನಿಯಾ ಪುಡಿ ಸೇರಿಸಿ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಸರಿಯಾಗಿ ಬೆರೆಸಿ. ಹುಣಸೆ ರಸ ಸೇರಿಸಿ ಮಿಶ್ರ ಮಾಡಿ. ಇದಕ್ಕೆ ಹುರಿದ ಈರುಳ್ಳಿ ಮತ್ತು ಹುರಿದ ತೆಂಗಿನಕಾಯಿ ಮಿಶ್ರಣವನ್ನು ಸೇರಿಸಿ ಕಲಸಿ. ಬಳಿಕ ಕತ್ತರಿಸಿದ ಬೇಯಿಸಿದ ಮೊಟ್ಟೆಗಳನ್ನು ಸೇರಿಸಿ ಮಿಶ್ರಣವನ್ನು ಸರಿಯಾಗಿ ಬೆರೆಸಿ. ಈಗ ಬಿಸಿ ಬಿಸಿಯಾದ ರುಚಿಕರವಾದ ಎಗ್ ಸುಕ್ಕಾ ಸವಿಯಲು ರೆಡಿಯಾಗಿದೆ.
ಎಗ್ ಬುರ್ಜಿ
ಬೇಕಾಗುವ ಸಾಮಾಗ್ರಿಗಳು
ಮೊಟ್ಟೆ – 5
ಎಣ್ಣೆ – 3 ಚಮಚ
ಲವಂಗ – 2
ಜೀರಿಗೆ – 1/2 ಚಮಚ
ಕೊತ್ತಂಬರಿ ಹುಡಿ -1 ಚಮಚ
ಮೆಣಸಿನ ಪುಡಿ – 1 ಚಮಚ
ಮೆಂತೆಕಾಳು-4
ತೆಂಗಿನಕಾಯಿ ತುರಿ -1/2 ಕಪ್
ಸಾಸಿವೆ-1 ಚಮಚ
ಬೆಳ್ಳುಳ್ಳಿ-5 ಎಸಳು
ಈರುಳ್ಳಿ -1,
ಟೊಮೆಟೊ-1
ರುಚಿಗೆ ತಕ್ಕಷ್ಟು ಉಪ್ಪು
ಅರಿಶಿನ-ಚಿಟಿಕೆ

ಮಾಡುವ ವಿಧಾನ
ಮೊದಲಿಗೆ ಬಾಣಲೆಯಲ್ಲಿ 1 ಚಮಚ ಎಣ್ಣೆ ಬಿಸಿ ಮಾಡಿ ಜೀರಿಗೆ, ಮೆಂತೆ, ಲವಂಗ ಹಾಕಿ. ನಂತರ ತೆಂಗಿನಕಾಯಿ ತುರಿ ಸೇರಿಸಿ ಮಧ್ಯಮ ಉರಿಯಲ್ಲಿ ಹುರಿಯಿರಿ. ತಣ್ಣಗಾದ ಬಳಿಕ ಮಿಕ್ಸಿ ಜಾರಿಗೆ ಹಾಕಿ ಸ್ವಲ್ಪ ನೀರು ಸೇರಿಸಿ ತರಿತರಿಯಾಗಿ ರುಬ್ಬಿಕೊಳ್ಳಿ
ಈಗ ಪ್ಯಾನ್ ಗೆ 2 ಟೇಬಲ್ ಸ್ಪೂನ್ ಎಣ್ಣೆ ಹಾಕಿ ಬಿಸಿ ಮಾಡಿ. ನಂತರ ಇದಕ್ಕೆ ಸಾಸಿವೆ ಹಾಕಿ ಸಿಡಿದ ನಂತರ ಜಜ್ಜಿದ ಬೆಳ್ಳುಳ್ಳಿ ಸೇರಿಸಿ. ನಂತರ ಚಿಕ್ಕದಾಗಿ ಕತ್ತರಿಸಿದ ಈರುಳ್ಳಿ ಸೇರಿಸಿ 3 ನಿಮಿಷಗಳ ಕಾಲ ಹುರಿಯಿರಿ. ಆಮೇಲೆ ಸಣ್ಣಗೆ ಹೆಚ್ಚಿದ ಟೊಮೆಟೊ, ಉಪ್ಪು, ಅರಿಶಿನ ಸೇರಿಸಿ ಟೊಮೆಟೊ ಮೆತ್ತಗಾಗುವವರೆಗೆ ಬೇಯಿಸಿ. ಬಳಿಕ ಮಿಕ್ಸಿಯಲ್ಲಿ ಪುಡಿ ಮಾಡಿದ ಪೌಡರ್ ಸೇರಿಸಿ 5 ನಿಮಿಷಗಳ ಕಾಲ ಕೈಯಾಡಿಸಿ. ಆಮೇಲೆ ಮೊಟ್ಟೆ ಒಡೆದು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಸಣ್ಣ ಉರಿಯಲ್ಲಿ 5 ನಿಮಿಷಗಳ ಕಾಲ ಬೇಯಿಸಿಕೊಳ್ಳಿ. ರುಚಿಕರವಾದ ಎಗ್ ಬುರ್ಜಿ ಸವಿಯಲು ಸಿದ್ಧವಾಗಿದೆ.
5 ಸುಲಭ ಮತ್ತು ರುಚಿಕರ ಸಿಹಿ ತಿನಿಸುಗಳು ರೆಸಿಪಿಗಳು ನಿಮಗಾಗಿ..!
ಮೊಟ್ಟೆಯ ಕಬಾಬ್
ಬೇಕಾಗುವ ಸಾಮಗ್ರಿಗಳು
ಮೊಟ್ಟೆಗಳು – 6
ಕೆಂಪು ಮೆಣಸು ಹುಡಿ 2 ಚಮಚ
ಕಡ್ಲೆಹಿಟ್ಟು 2 ಚಮಚ
ಕೊತ್ತಂಬರಿ ಹುಡಿ 1 ಚಮಚ
ಗರಂ ಮಸಾಲ 1/2 ಟೀಸ್ಪೂನ್
ಸಣ್ಣದಾಗಿ ಕತ್ತರಿಸಿದ ಈರುಳ್ಳಿ -1
ಪೆಪ್ಪರ್ ಪುಡಿ 1 ಚಮಚ
ಬ್ರೆಡ್ ಹುಡಿ – 1 ಕಪ್
ರುಚಿಗೆ ತಕ್ಕಷ್ಟು ಉಪ್ಪು
ಹುರಿಯಲು ಎಣ್ಣೆ

ಮಾಡುವ ವಿಧಾನ
ಮೊದಲಿಗೆ ಮೊಟ್ಟೆಗಳನ್ನು 15 ನಿಮಿಷಗಳ ಕಾಲ ಚೆನ್ನಾಗಿ ಕುದಿಸಿ, ಒಂದು ಬಟ್ಟಲಿನಲ್ಲಿ ಮೊಟ್ಟೆಯ ಸಿಪ್ಪೆ ತೆಗೆದು ಅವುಗಳನ್ನು ಚಿಕ್ಕದಾಗಿ ಕತ್ತರಿಸಿಕೊಳ್ಳಿ.
ಇದರ ನಂತರ, ಪೆಪ್ಪರ್ ಪುಡಿ, ಕೊತ್ತಂಬರಿ ಹುಡಿ, ಈರುಳ್ಳಿ, ಗರಂ ಮಸಾಲ, ಕಡ್ಲೆಹಿಟ್ಟು, ಕೆಂಪು ಮೆಣಸು ಪುಡಿ ಮತ್ತು ಉಪ್ಪು ಸೇರಿಸಿ. ನಂತರ ಸ್ವಲ್ಪ ನೀರು ಬೆರೆಸಿ ಚೆನ್ನಾಗಿ ಮಿಶ್ರಣ ಮಾಡಿ. ಇದಕ್ಕೆ ಕತ್ತರಿಸಿದ ಮೊಟ್ಟೆಗಳನ್ನು ಸೇರಿಸಿ ಮಿಶ್ರ ಮಾಡಿ.
ಈಗ ಈ ಮಿಶ್ರಣದಿಂದ ಸಣ್ಣ ಕಬಾಬ್‌ಗಳನ್ನು ತಯಾರಿಸಿ ಅದಕ್ಕೆ ಬ್ರೆಡ್ ಹುಡಿ ಲೇಪಿಸಿ.
ಈಗ ಬಾಣಲೆಯಲ್ಲಿ ಎಣ್ಣೆಯನ್ನು ಬಿಸಿ ಮಾಡಿ. ನಂತರ ಕಬಾಬ್‌ಗಳನ್ನು ಬಿಸಿ ಎಣ್ಣೆಯಲ್ಲಿ ಬಿಡಿ. ಹೊಂಬಣ್ಣಕ್ಕೆ ಬರುವವರೆಗೆ ಡೀಪ್ ಫ್ರೈ ಮಾಡಿ. ಬಿಸಿಯಾದ ಮೊಟ್ಟೆಯ ಕಬಾಬ್ ಸವಿಯಲು ಸಿದ್ಧವಾಗಿದೆ.
5 ವಿವಿಧ ಬಗೆಯ ರುಚಿಕರ ಬೋಂಡಾಗಳ ರೆಸಿಪಿಗಳು ನಿಮಗಾಗಿ..!
ಮೊಟ್ಟೆ ಪಲ್ಯ
ಬೇಕಾಗುವ ಸಾಮಗ್ರಿಗಳು
ಬೇಯಿಸಿದ ಮೊಟ್ಟೆಗಳು 4
ಕ್ಯಾಪ್ಸಿಕಂ 1
ಟೊಮೆಟೊ 1
ಎಣ್ಣೆ 4 ಟೀಸ್ಪೂನ್
ಅರಿಶಿನ ಪುಡಿ 1/2 ಟೀಸ್ಪೂನ್
ಜೀರಿಗೆ ಪುಡಿ 1 ಟೀಸ್ಪೂನ್
ಉಪ್ಪು 1 ಟೀಸ್ಪೂನ್
ಕೆಂಪು ಮೆಣಸಿನ ಪುಡಿ 1 ಟೀಸ್ಪೂನ್
ಎಗ್ ಮಸಾಲ ಪುಡಿ 1 ಟೀಸ್ಪೂನ್
ಕೊತ್ತಂಬರಿ ಸೊಪ್ಪು ಸ್ವಲ್ಪ

ಮಾಡುವ ವಿಧಾನ
ಮೊದಲಿಗೆ ಬಾಣಲೆ ಬಿಸಿ ಮಾಡಿ ಅದಕ್ಕೆ ಎಣ್ಣೆ ಸೇರಿಸಿ. ಅದು ಬಿಸಿಯಾದ ನಂತರ ಕತ್ತರಿಸಿದ ಕ್ಯಾಪ್ಸಿಕಂ ಮತ್ತು ಟೊಮ್ಯಾಟೊ, ಅರಿಶಿನ ಪುಡಿ, ಜೀರಿಗೆ ಪುಡಿ ಮತ್ತು ಉಪ್ಪು ಸೇರಿಸಿ ಮತ್ತು ಅದನ್ನು ಸರಿಯಾಗಿ ಬೆರೆಸಿ.
ಕಸೂರಿ ಮೇಥಿ ಇದ್ದರೆ ಅದನ್ನು ಸೇರಿಸಿ.
ಈಗ ಎಲ್ಲಾ 4 ಮೊಟ್ಟೆಗಳನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ ನಿಧಾನವಾಗಿ ಬಾಣಲೆಗೆ ಸೇರಿಸಿ. ಈಗ ಅದಕ್ಕೆ ಎಗ್ ಮಸಾಲ ಪುಡಿಯನ್ನು ಸೇರಿಸಿ ಮತ್ತು ಸ್ವಲ್ಪ ಸಮಯದವರೆಗೆ ನಿಧಾನವಾಗಿ ಕಲಸಿ. ಮೊಟ್ಟೆಯ ಪ್ರತಿಯೊಂದು ಭಾಗದಲ್ಲೂ ಮಸಾಲೆ ಬೆರೆಯುವಂತೆ ಮಿಶ್ರ ಮಾಡಿ.
ಈಗ ಅಂತಿಮವಾಗಿ ಕತ್ತರಿಸಿದ ಕೊತ್ತಂಬರಿ ಸೊಪ್ಪನ್ನು ಸೇರಿಸಿ. ರುಚಿಯಾದ ಮೊಟ್ಟೆ ಪಲ್ಯ ಸವಿಯಲು ರೆಡಿ.
ಈ ಖಾದ್ಯವನ್ನು ನೀವು ಅನ್ನ ಮತ್ತು ಚಪಾತಿಯೊಂದಿಗೆ ಸೇವಿಸಬಹುದು.









