Kieron Pollard | ಸ್ಪಿನ್ನರ್ ಆದ ಪೊಲಾರ್ಡ್.. ಮುಂಬೈಗೆ ಸಿಕ್ಕ ಹೊಸ ಸ್ಪಿನ್ನರ್..
ವೆಸ್ಟ್ ಇಂಡೀಸ್ ನಾಯಕ ಕೀರಾನ್ ಪೊಲಾರ್ಡ್ ಅವತಾರ ಎತ್ತಿದ್ದಾರೆ. ಸಾಮಾನ್ಯವಾಗಿ ಮಧ್ಯಮ ವೇಗದಲ್ಲಿ ಬೌಲಿಂಗ್ ಮಾಡುವ ಪೊಲಾರ್ಡ್ ಮೊದಲ ಬಾರಿಗೆ ಸ್ಪಿನ್ನರ್ ಆಗಿದ್ದಾರೆ.
ಟ್ರಿನಿಡಾಡ್ T10 ಬ್ಲಾಸ್ಟ್‌ನ ನಲ್ಲಿ ಪೊಲಾರ್ಡ್ ಸ್ಕಾರ್ಲೆಟ್ ಐಬಿಸ್ ಸ್ಕಾರ್ಚರ್ಸ್ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ.
ಸೋಕಾ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಪೊಲಾರ್ಡ್ ಆಫ್ ಸ್ಪಿನ್ ಬೌಲಿಂಗ್ ಮಾಡುವ ಮೂಲಕ ಎಲ್ಲರನ್ನೂ ಅಚ್ಚರಿಗೊಳಿಸಿದ್ದಾರೆ.
ಪೊಲಾರ್ಡ್ ಸೋಕಾ ಕಿಂಗ್ಸ್ ಇನ್ನಿಂಗ್ಸ್ ನ ನಾಲ್ಕನೇ ಓವರ್ ಬೌಲ್ ಮಾಡಿದ್ದಲ್ಲದೆ, ಲಿಯೊನಾರ್ಡೊ ಜೂಲಿಯನ್ ಅವರನ್ನು ಕ್ಲೀನ್ ಬೌಲ್ಡ್ ಮಾಡಿದರು.
ಪಂದ್ಯದಲ್ಲಿ ಕೇವಲ ಒಂದು ಓವರ್ ಬೌಲ್ ಮಾಡಿದ ಪೊಲಾರ್ಡ್ 10 ರನ್ ನೀಡಿ ಒಂದು ವಿಕೆಟ್ ಪಡೆದರು.
ಪೊಲಾರ್ಡ್ ಬೌಲಿಂಗ್ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೋಗೆ ನೆಟಿಜನ್‌ಗಳು ತಮಾಷೆಯ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ.
ಮುಂಬೈಗೆ ಹೊಸ ಸ್ಪಿನ್ನರ್ ಸಿಕ್ಕಿದ್ದಾರೆ ಎಂಬ ಕಾಮೆಂಟ್ ಗಳು ಬರುತ್ತಿವೆ. ಪಂದ್ಯದ ವಿಷಯಕ್ಕೆ ಬಂದರೆ..
ಸೋಕಾ ಕಿಂಗ್ಸ್ ನಿಗದಿತ 10 ಓವರ್‌ಗಳಲ್ಲಿ ಮೂರು ವಿಕೆಟ್‌ಗಳ ನಷ್ಟಕ್ಕೆ 150 ರನ್ ಗಳಿಸಿತ್ತು.
ಆದರೆ, ಮಳೆಯಿಂದಾಗಿ ಗುರಿಯನ್ನು 8 ಓವರ್‌ಗಳಲ್ಲಿ 122 ರನ್‌ಗಳಿಗೆ ಇಳಿಸಲಾಯಿತು.
122 ರನ್‌ಗಳ ಗುರಿಯೊಂದಿಗೆ ಕಣಕ್ಕೆ ಇಳಿದ ಸ್ಕಾರ್ಚರ್ಸ್ ಮೂರು ವಿಕೆಟ್ ಕಳೆದುಕೊಂಡು 80 ರನ್ ಗಳಿಸಲಷ್ಟೆ ಶಕ್ತವಾಯಿತು. kieron-pollard-turns-spinner saaksha tv









