ADVERTISEMENT
Saturday, March 21, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

Jadeja | ಜಡ್ಡು ಡಬಲ್ ಸೆಂಚೂರಿ ಮಿಸ್.. ಮತ್ತೆ ದ್ರಾವಿಡ್ ವಿಲನ್..?!

Mahesh M Dhandu by Mahesh M Dhandu
March 6, 2022
in Newsbeat, Sports, ಕ್ರಿಕೆಟ್, ಕ್ರೀಡೆ
jadeja-fans-slams-rohit-sharma-rahul-dravid saaksha tv
Share on FacebookShare on TwitterShare on WhatsappShare on Telegram

Jadeja | ಜಡ್ಡು ಡಬಲ್ ಸೆಂಚೂರಿ ಮಿಸ್.. ಮತ್ತೆ ದ್ರಾವಿಡ್ ವಿಲನ್..?!

ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಸ್ಟಾರ್ ಆಲ್ ರೌಂಡರ್ ರವೀಂದ್ರ ಜಡೇಜಾ ಸೂಪರ್ ಪ್ರದರ್ಶನ ನೀಡಿ ಮಿಂಚಿದ್ದಾರೆ. ಎರಡನೇ ದಿನ 45 ರನ್ ಗಳಿಸಿ ಕ್ರೀಸ್ ಗೆ ಬಂದ ಜಡೇಜಾ ಕೊನೆಯವರೆಗೂ ನಿಂತು ಟೀಂ ಇಂಡಿಯಾ ಬೃಹತ್ ಸ್ಕೋರ್ ಮಾಡುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.

Related posts

ಬೆಂಗಳೂರು 2ನೇ ವಿಮಾನ ನಿಲ್ದಾಣಕ್ಕೆ ಕೇಂದ್ರ ಭರವಸೆ: ಡಿಕೆ ಶಿವಕುಮಾ‌ರ್

ಬೆಂಗಳೂರು 2ನೇ ವಿಮಾನ ನಿಲ್ದಾಣಕ್ಕೆ ಕೇಂದ್ರ ಭರವಸೆ: ಡಿಕೆ ಶಿವಕುಮಾ‌ರ್

March 21, 2026
ಬೆಂಗಳೂರು 2ನೇ ಏರ್‌ಪೋರ್ಟ್‌ಗೆ ಟೆಂಡರ್ ಆಹ್ವಾನ

ಬೆಂಗಳೂರು 2ನೇ ಏರ್‌ಪೋರ್ಟ್‌ಗೆ ಟೆಂಡರ್ ಆಹ್ವಾನ

March 21, 2026

228 ಎಸೆತಗಳಲ್ಲಿ 17 ಬೌಂಡರಿ, 3 ಸಿಕ್ಸರ್ ಗಳೊಂದಿಗೆ ಔಟಾಗದೆ 175 ರನ್ ಗಳಿಸಿದ್ದ ಜಡೇಜಾ ಇನ್ನೇನು ದ್ವಿಶತದ ಸಂಭ್ರಮ ಆಚರಿಸುತ್ತಾರೆ ಅಂತಾ ಎಲ್ಲರು ಅಂದುಕೊಂಡಿದ್ದರು. ಆದ್ರೆ ಟೀಂ ಇಂಡಿಯಾದ ನಾಯಕ ರೋಹಿತ್ ಶರ್ಮಾ, 574 ರನ್ ಗಳಿಗೆ ಡಿಕ್ಲೇರ್ ಘೋಷಿಸಿದರು. ಇಲ್ಲಿಗೆ ಸೋಶಿಯಲ್ ಮೀಡಿಯಾದಲ್ಲಿ ರೋಹಿತ್ ಶರ್ಮಾ ನಿರ್ಧಾರದ ಬಗ್ಗೆ ಚರ್ಚೆ ಶುರುವಾಗಿದೆ.

ಜಡೇಜಾ ಬ್ಯಾಟ್ ಬೀಸುತ್ತಿದ್ದ ವೇಗವನ್ನು ನೋಡಿದರೆ 25 ರನ್ ಗಳಿಸುವುದು ದೊಡ್ಡ ಸಮಸ್ಯೆಯಾಗಿರಲಿಲ್ಲ. ಆದರೆ ಜಡೇಜಾ ದ್ವಿಶತಕ ಸಿಡಿಸಲು ಬಿಡದೆ ಇನ್ನಿಂಗ್ಸ್ ಡಿಕ್ಲೇರ್ ಮಾಡಿದ್ದಕ್ಕೆ ಅಭಿಮಾನಿಗಳು ಕಿಡಿಕಾರಿದ್ದಾರೆ. ಟೆಸ್ಟ್ ಕ್ರಿಕೆಟ್ ನಲ್ಲಿ ಡಬಲ್ ಸೆಂಚೂರಿ ಸಿಡಿಸಬೇಕೆನ್ನುವುದು ಯಾವುದೇ ಕ್ರಿಕೆಟಿಗನಿಗೆ ಕನಸ್ಸಾಗಿರುತ್ತದೆ. ಲಂಕಾ ವಿರುದ್ಧದ ಪಂದ್ಯದಲ್ಲಿ ರವೀಂದ್ರ ಜಡೇಜಾಗೂ ಆ ಅವಕಾಶ ಸಿಕ್ಕಿತ್ತು. ಆದರೆ ಜಡೇಜಾ ಮೇಡನ್ ದ್ವಿಶತಕಕ್ಕೆ 25 ರನ್‌ಗಳ ಅವಶ್ಯಕತೆ ಇದ್ದಾಗ ಡಿಕ್ಲೇರ್ ಘೋಷಿಸಿದ್ದು, ಎಷ್ಟು ಸರಿ..? ಎಂಬ ಪ್ರಶ್ನೆ ಈಗ ಹುಟ್ಟಿಕೊಂಡಿದೆ.

jadeja-fans-slams-rohit-sharma-rahul-dravid saaksha tv

ಆದರೆ, ಈ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಳ್ಳುವ ಐಡಿಯಾ ನಾಯಕ ರೋಹಿತ್  ಅವರದ್ದಲ್ಲವಂತೆ, ಬದಲಿಗೆ  ಟೀಂ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್ ಅವರದ್ದು ಎನ್ನುತ್ತಿದ್ದಾರೆ ಕೆಲವರು.

ಈ ಹಿಂದೆ ದ್ರಾವಿಡ್ ನಾಯಕರಾಗಿದ್ದಾಗ ಸಚಿನ್ ದ್ವಿಶತಕ ಸಿಡಿಸದಂತೆ ತಡೆದಿದ್ದರು. 2004ರಲ್ಲಿ ಭಾರತ ತಂಡ ಪಾಕಿಸ್ತಾನ ಪ್ರವಾಸ ಕೈಗೊಂಡಿತ್ತು. ಮುಲ್ತಾನ್‌ ನಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ ಸಚಿನ್ ತೆಂಡೂಲ್ಕರ್ 194 ರನ್ ಗಳಿಸಿದ್ದಾಗ ಅಂದಿನ ನಾಯಕ ದ್ರಾವಿಡ್ ಇನ್ನಿಂಗ್ಸ್ ಡಿಕ್ಲೇರ್ ಮಾಡಿದ್ದರು. ದ್ರಾವಿಡ್ ನಿರ್ಧಾರದಿಂದ ಸಚಿನ್ ಕೇವಲ ಆರು ರನ್ ಗಳಿಂದ ದ್ವಿಶತಕ ಮಿಸ್ ಮಾಡಿಕೊಂಡರು. ಆ ಸಮಯದಲ್ಲಿ ದ್ರಾವಿಡ್ ಅವರ ನಿರ್ಧಾರ ತೀವ್ರ ಟೀಕೆಗಳಿಗೆ ಕಾರಣವಾಗಿತ್ತು. ದ್ರಾವಿಡ್ ನಿರ್ಧಾರ ತಪ್ಪು ಎಂದು ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದರು. ಇದೇ ಪಂದ್ಯದಲ್ಲಿ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್ ಟ್ರಿಪಲ್ ಸೆಂಚುರಿ ಬಾರಿಸಿದ್ದರು. ಈ ಪಂದ್ಯದಲ್ಲಿ ಟೀಂ ಇಂಡಿಯಾ ಇನಿಂಗ್ಸ್ ಹಾಗೂ 52 ರನ್‌ಗಳ ಜಯ ಸಾಧಿಸಿತ್ತು.

ಮತ್ತೆ ಇದೀಗ ರವೀಂದ್ರ ಜಡೇಜಾ ವಿಚಾರದಲ್ಲಿ ರಾಹುಲ್ ದ್ರಾವಿಡ್ ಮತ್ತೆ ಅದೇ ತಪ್ಪನ್ನು ಮಾಡಿದ್ದಾರೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಕೆಲವರು ಆಕ್ರೋಶ ಹೊರಹಾಕುತ್ತಿದ್ದಾರೆ.

jadeja-fans-slams-rohit-sharma-rahul-dravid

 

Tags: #Saaksha TVCricketM.S DhoniRahul Dravidravindra jadeja
ShareTweetSendShare
Join us on:

Related Posts

ಬೆಂಗಳೂರು 2ನೇ ವಿಮಾನ ನಿಲ್ದಾಣಕ್ಕೆ ಕೇಂದ್ರ ಭರವಸೆ: ಡಿಕೆ ಶಿವಕುಮಾ‌ರ್

ಬೆಂಗಳೂರು 2ನೇ ವಿಮಾನ ನಿಲ್ದಾಣಕ್ಕೆ ಕೇಂದ್ರ ಭರವಸೆ: ಡಿಕೆ ಶಿವಕುಮಾ‌ರ್

by Shwetha
March 21, 2026
0

ಬೆಂಗಳೂರು ನಗರಕ್ಕೆ ಎರಡನೇ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಅಗತ್ಯವಿರುವ ಎಲ್ಲಾ ಅನುಮತಿಗಳನ್ನು ಕೇಂದ್ರ ಸರ್ಕಾರ ನೀಡಲಿದೆ ಎಂದು ಡಿ. ಕೆ. ಶಿವಕುಮಾರ್ ತಿಳಿಸಿದ್ದಾರೆ. ಕೇಂದ್ರ ವಿಮಾನಯಾನ ಸಚಿವರನ್ನು...

ಬೆಂಗಳೂರು 2ನೇ ಏರ್‌ಪೋರ್ಟ್‌ಗೆ ಟೆಂಡರ್ ಆಹ್ವಾನ

ಬೆಂಗಳೂರು 2ನೇ ಏರ್‌ಪೋರ್ಟ್‌ಗೆ ಟೆಂಡರ್ ಆಹ್ವಾನ

by Shwetha
March 21, 2026
0

ಬೆಂಗಳೂರು ನಗರದ ಎರಡನೇ ವಿಮಾನ ನಿಲ್ದಾಣ ನಿರ್ಮಾಣದ ದಿಶೆಯಲ್ಲಿ ರಾಜ್ಯ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದ್ದು, ಟೆಂಡರ್ ಆಹ್ವಾನಿಸಿದೆ. ಈ ಕುರಿತು ಎಮ್. ಬಿ. ಪಾಟೀಲ್ ಪ್ರತಿಕ್ರಿಯಿಸಿ,...

ಮಧ್ಯಪ್ರಾಚ್ಯದಲ್ಲಿ ಮಹಾ ಸಂಘರ್ಷ: ಹಾರ್ಮುಜ್‌ ಜಲಸಂಧಿಯಲ್ಲಿ ಹಡಗು ಸಾಗಿಸಲು ಇರಾನ್ ವಿಧಿಸಿದೆ 18 ಕೋಟಿ ರೂಪಾಯಿ ಟೋಲ್!.

ಮಧ್ಯಪ್ರಾಚ್ಯದಲ್ಲಿ ಮಹಾ ಸಂಘರ್ಷ: ಹಾರ್ಮುಜ್‌ ಜಲಸಂಧಿಯಲ್ಲಿ ಹಡಗು ಸಾಗಿಸಲು ಇರಾನ್ ವಿಧಿಸಿದೆ 18 ಕೋಟಿ ರೂಪಾಯಿ ಟೋಲ್!.

by Shwetha
March 21, 2026
0

ಟೆಹ್ರಾನ್: ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಭೀಕರ ಯುದ್ಧದ ಕಾರ್ಮೋಡದ ನಡುವೆಯೇ ಇರಾನ್ ಜಗತ್ತಿನ ಪ್ರಮುಖ ವಾಣಿಜ್ಯ ಮಾರ್ಗವಾದ ಹಾರ್ಮುಜ್ ಜಲಸಂಧಿಯಲ್ಲಿ ಹೊಸ ನಿಯಮವೊಂದನ್ನು ಜಾರಿಗೆ ತಂದಿದೆ. ಇದು ಜಾಗತಿಕ...

ಗ್ಯಾಸ್ ಬುಕ್ಕಿಂಗ್ ನಿಯಮದಲ್ಲಿ ಭಾರಿ ಬದಲಾವಣೆ ಇನ್ಮುಂದೆ ದಿನದ 24 ಗಂಟೆಯೂ ಬುಕ್ ಮಾಡುವಂತಿಲ್ಲ : ಗ್ಯಾಸ್ ಬುಕ್ ಮಾಡುವ ಮುನ್ನ ಈ ಸುದ್ದಿ ಓದಿ ಹೊಸ ಟೈಮಿಂಗ್ಸ್ ಮಿಸ್ ಆದ್ರೆ ಸಿಲಿಂಡರ್ ಸಿಗಲ್ಲ!

ಗ್ಯಾಸ್ ಬುಕ್ಕಿಂಗ್ ನಿಯಮದಲ್ಲಿ ಭಾರಿ ಬದಲಾವಣೆ ಇನ್ಮುಂದೆ ದಿನದ 24 ಗಂಟೆಯೂ ಬುಕ್ ಮಾಡುವಂತಿಲ್ಲ : ಗ್ಯಾಸ್ ಬುಕ್ ಮಾಡುವ ಮುನ್ನ ಈ ಸುದ್ದಿ ಓದಿ ಹೊಸ ಟೈಮಿಂಗ್ಸ್ ಮಿಸ್ ಆದ್ರೆ ಸಿಲಿಂಡರ್ ಸಿಗಲ್ಲ!

by Shwetha
March 21, 2026
0

ಬೆಂಗಳೂರು: ಅಡುಗೆ ಅನಿಲ ಗ್ರಾಹಕರಿಗೆ ತೈಲ ಕಂಪನಿಗಳು ಮಹತ್ವದ ಸುದ್ದಿಯೊಂದನ್ನು ನೀಡಿದ್ದು ಸಿಲಿಂಡರ್ ಬುಕ್ಕಿಂಗ್ ಪ್ರಕ್ರಿಯೆಯಲ್ಲಿ ಪ್ರಮುಖ ಬದಲಾವಣೆಗಳನ್ನು ಮಾಡಲಾಗಿದೆ. ನೀವು ಇದುವರೆಗೆ ನಿಮಗೆ ಇಷ್ಟ ಬಂದ...

ಸಾಲದ ಶೂಲದಲ್ಲಿ ರಾಜ್ಯವಿದ್ದರೂ ಹೈಕಮಾಂಡ್ ಪಾಲಿಗೆ ಕರ್ನಾಟಕವೇ ಕಾಮಧೇನು ಡಿಕೆಶಿ ವಿರುದ್ಧ ಐಶ್ವರ್ಯ ಅನಂತಕುಮಾರ್ ನೇರ ವಾಗ್ದಾಳಿ

ಸಾಲದ ಶೂಲದಲ್ಲಿ ರಾಜ್ಯವಿದ್ದರೂ ಹೈಕಮಾಂಡ್ ಪಾಲಿಗೆ ಕರ್ನಾಟಕವೇ ಕಾಮಧೇನು ಡಿಕೆಶಿ ವಿರುದ್ಧ ಐಶ್ವರ್ಯ ಅನಂತಕುಮಾರ್ ನೇರ ವಾಗ್ದಾಳಿ

by Shwetha
March 21, 2026
0

ಬೆಂಗಳೂರು ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರವು ಕರ್ನಾಟಕವನ್ನು ಕೇವಲ ತನ್ನ ಪಕ್ಷದ ಹೈಕಮಾಂಡ್‌ಗೆ ಹಣ ಒದಗಿಸುವ ಮೂಲವನ್ನಾಗಿ ಮಾಡಿಕೊಂಡಿದೆ ಎಂದು ದಿವಂಗತ ಕೇಂದ್ರ ಸಚಿವ ಹಾಗೂ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram