Shreya Ghoshal | ಶ್ರೇಯಾ ಘೋಶಾಲ್ ಗೆ ಇಂದು ಜನ್ಮದಿನದ ಸಂಭ್ರಮ
ಖ್ಯಾತ ಹಿನ್ನೆಲೆ ಗಾಯಕಿ, ಶ್ರೇಯಾ ಘೋಶಾಲ್ ಅವರಿಗೆ ಇಂದು ಜನ್ಮದಿನದ ಸಂಭ್ರಮ.
38ನೇ ವರ್ಷಕ್ಕೆ ಕಾಲಿಟ್ಟ ಶ್ರೇಯಾ ಘೋಶಾಲ್ ಅವರಿಗೆ ಅಭಿಮಾನಿಗಳು ಸೋಶಿಯಲ್ ಮೀಡಿಯಾ ಮೂಲಕ ಶುಭಾಶಯಗಳನ್ನು ತಿಳಿಸುತ್ತಿದ್ದಾರೆ.
ಕನ್ನಡದ ಅನೇಕ ಸಿನಿಮಾಗಳಲ್ಲಿ ಹಾಡಿರುವ ಶ್ರೇಯಾ ಘೋಶಾಲ್ ಅವರು ಬಾಲಿವುಡ್ ನ ಖ್ಯಾತ ಗಾಯಕಿಯರಲ್ಲಿ ಒಬ್ಬರು.
ಅನೇಕ ಸೂಪರ್ ಹಿಟ್ ಗೀತೆಗಳಿಗೆ ಧ್ವನಿಯಾಗುವ ಮೂಲಕ ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದಾರೆ.
ಅಂದಹಾಗೆ ಶ್ರೇಯಾ ಘೋಶಾಲ್ ಅವರು ಮಾರ್ಚ್ 12, 1984 ರಂದು ಪಶ್ಚಿಮ ಬಂಗಾಳದ ಬೆಹ್ರಾಂಪುರದ ಮುರ್ಷಿದಾಬಾದ್ ನಲ್ಲಿ ಜನಿಸಿದರು.
ಬಾಲ್ಯದಿಂದಲೂ ಸಂಗೀತದ ಬಗ್ಗೆ ಒಲವು ಹೊಂದಿದ್ದದ ಅವರು, ತಮ್ಮ ನಾಲ್ಕನೇ ವಯಸ್ಸಿನಿಂದಲೇ ಸಂಗೀತ ಕಲಿಯಲು ಆರಂಭಿಸಿದ್ದರು.
ಸರೆಗಮಪ‘ ಟಿವಿ ಕಾರ್ಯಕ್ರಮದಿಂದಾಗಿ ಶ್ರೇಯಾ ಘೋಶಾಲ್ ಅವರಿಗೆ ದೊಡ್ಡ ಅವಕಾಶ ಸಿಕ್ಕಿತ್ತು.
‘ಸರೆಗಮಪ’ ಸೀಸನ್ ಎರಡರಲ್ಲಿ ಶ್ರೇಯಾ ಘೋಷಾಲ್ ಭಾಗವಹಿಸಿದ್ದರು. ಅದು ಶ್ರೇಯಾ ವೃತ್ತಿ ಜೀವನಕ್ಕೆ ಹೊಸ ತಿರುವು ನೀಡಿತು.
ಸರೆಗಮಪಾದಿಂದಾಗಿ ಬಾಲಿವುಡ್ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಶ್ರೇಯಾ ಅವರಿಗೆ ತಮ್ಮ ಚಿತ್ರ ದೇವದಾಸ್ ನಲ್ಲಿ ಹಾಡುವ ಅವಕಾಶ ನೀಡಿದರು.
ಇಲ್ಲಿಂದ ಶ್ರೇಯಾ ಘೋಶಾಲ್ ತಿರುಗಿ ನೋಡಲೇ ಇಲ್ಲ.
ಶ್ರೇಯಾ ಘೋಶಾಲ್ ಹಿಂದಿ ಜೊತೆಗೆ ಬಂಗಾಳಿ, ತಮಿಳು, ತೆಲುಗು, ಕನ್ನಡ, ಮರಾಠಿ ಮತ್ತು ಭೋಜ್‌ಪುರಿ ಭಾಷೆಗಳ ಹಾಡುಗಳನ್ನು ಹಾಡಿದ್ದಾರೆ.
Shreya ghoshal Birthday









