IPL 2022 | CSK ತಂಡಕ್ಕೆ ದೊಡ್ಡ ಆಘಾತ..
ಟೂರ್ನಿ ಆರಂಭಕ್ಕೂ ಮುನ್ನಾ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ದೊಡ್ಡ ಆಘಾತ ಎದುರಾಗಿದೆ.
ಕಳೆದ ಋತುವಿನಲ್ಲಿ ಟಾಪ್ ಸ್ಕೋರರ್ ಆಗಿದ್ದ ರುತುರಾಜ್ ಗಾಯಕ್ವಾಡ್ ಈ ಆವೃತ್ತಿಯ ಆರಂಭಿಕ ಪಂದ್ಯಗಳಿಂದ ದೂರ ಉಳಿಯಲಿದ್ದಾರೆ.
ಶ್ರೀಲಂಕಾ ವಿರುದ್ಧದ ಟಿ 20 ಸರಣಿ ವೇಳೆ ರುತುರಾಜ್ ಗಾಯಕ್ವಾಡ್ ಗಾಯಗೊಂಡಿದ್ದರು. ಹೀಗಾಗಿ ಅವರು ತಂಡದಿಂದ ದೂರ ಉಳಿಯಬೇಕಾಗಿತ್ತು.
ಸದ್ಯ ಗಾಯ ತಗ್ಗಿದ್ದರೂ ರುತುರಾಜ್ ಫಿಟ್ ನೆಸ್ ಪರೀಕ್ಷೆ ಎದುರಿಸಬೇಕಾಗಿದೆ.
ಈ ಹಿನ್ನೆಲೆಯಲ್ಲಿ ಸೀಸನ್‌ನ ಮೊದಲ ವಾರದಲ್ಲಿ ಸಿಎಸ್‌ಕೆ ಆಡಲಿರುವ ಪಂದ್ಯಗಳಿಂದ ರುತುರಾಜ್ ಹೊರಗುಳಿಯಲಿದ್ದಾರೆ.
ಈ ವಿಚಾರವಾಗಿ ಸಿಎಸ್ ಕೆ ಫ್ರಾಂಚೈಸಿಯ ಸಿಇಒ ಕಾಶಿ ವಿಶ್ವನಾಥನ್ ಸ್ಪಂದಿಸಿ, ಮಾರ್ಚ್ 17 ಅಥವಾ 18 ರಂದು ಸೂರತ್ ನಲ್ಲಿ ರುತುರಾಜ್ ಸಿಎಸ್‌ಕೆ ತಂಡವನ್ನು ಸೇರುವ ಸಾಧ್ಯತೆಯಿದೆ ಎಂದಿದ್ದಾರೆ.
ರುತುರಾಜ್ ಸಿಎಸ್‌ಕೆ ಆಡಲಿರುವ ಮೂರು ಪಂದ್ಯಗಳಿಂದ ದೂರ ಉಳಿಯಲಿದ್ದಾರೆ.
ಇನ್ನು ಸಿಎಸ್ ಕೆ ಬೌಲರ್ ದೀಪಕ್ ಚಹಾರ್ ಕೂಡ ಎನ್ ಸಿಎಯಲ್ಲಿದ್ದಾರೆ.
ವೆಸ್ಟ್ ಇಂಡೀಸ್ ವಿರುದ್ಧದ ಟಿ 20 ಸರಣಿಯಲ್ಲಿ ಭುಜದ ಗಾಯದ ನಂತರ ಚಹಾರ್ ಶ್ರೀಲಂಕಾ ವಿರುದ್ಧದ ಟಿ 20 ಸರಣಿಯನ್ನು ಕಳೆದುಕೊಂಡರು.
ipl-2022-csk-ruturaj-gaikwad-likely-unavailable








