ಗೆಳೆಯ ಗುದ್ದಾಟದಲ್ಲಿ ಗೆಲ್ಲೋರು ಯಾರು..?
15 ಆವೃತ್ತಿಯ ಇಂಡಿಯನ್ ಪ್ರಿಮಿಯರ್ ಲೀಗ್ ನ 4 ನೇ ಪಂದ್ಯದಲ್ಲಿ ಹೊಸ ತಂಡಗಳು ಗುದ್ದಾಟ ನಡೆಸಲಿವೆ. ಕನ್ನಡಿಗ ಕೆ.ಎಲ್.ರಾಹುಲ್ ನೇತೃತ್ವದ ಲಕ್ನೋ ಸೂಪರ್ ಜೈಂಟ್ಸ್ ತಂಡ ಮತ್ತು ಹಾರ್ದಿಕ್ ಪಾಂಡ್ಯ ನಾಯಕತ್ವದ ಗುಜರಾತ್ ಟೈಟಾನ್ಸ್ ತಂಡಗಳು ಇಂದು ಮುಖಾಮುಖಿಯಾಗಲಿವೆ.
ಇದೇ ಮೊದಲ ಬಾರಿಗೆ ಈ ಎರಡೂ ತಂಡಗಳು ಐಪಿಎಲ್ ಗುದ್ದಾಡಲಿರುವ ಕಾರಣ, ಈ ಪಂದ್ಯದ ಮೇಲೆ ಸಾಕಷ್ಟು ನಿರೀಕ್ಷೆಗಳಿವೆ.
ತಂಡಗಳ ಸ್ಟ್ರಂಥ್ ಅಂಡ್ ವೀಕ್ನೆಸ್ ಗಳ ಬಗ್ಗೆ ಮಾತನಾಡೋದಾದ್ರೆ ಎರಡೂ ತಂಡಗಳಲ್ಲಿ ಸ್ವದೇಶಿ ಮತ್ತು ವಿದೇಶಿ ಆಟಗಾರರ ಸಮ್ಮಿಲನವಿದೆ.
ಮೊದಲನೇಯದಾಗಿ ಲಖನೌ ಸೂಪರ್ ಜೈಂಟ್ಸ್ ತಂಡದ ಬಗ್ಗೆ ಮಾತನಾಡೋದಾದ್ರೆ, ಇಂದಿನ ಪಂದ್ಯಕ್ಕೆ ವಿದೇಶಿ ಆಟಗಾರರ ಅಲಭ್ಯತೆ ತಂಡಕ್ಕೆ ಹಿನ್ನಡೆಯನ್ನುಂಟು ಮಾಡಲಾಗಿದೆ. ಆದ್ರೂ ತಂಡದ ಸಮತೋಲನದಲ್ಲಿ ಯಾವುದೇ ತೊಡಕಾಗುವ ಲಕ್ಷಣಗಳು ಕಾಣುತ್ತಿಲ್ಲ.
ನಾಯಕ ಕೆ.ಎಲ್.ರಾಹುಲ್ ಇನ್ನಿಂಗ್ಸ್ ಆರಂಭಿಸೋದು ಪಕ್ಕಾ. ಅವರಿಗೆ ಎವಿನ್ ಲೆವಿಸ್ ಸಾಥ್ ನೀಡಲಿದ್ದಾರೆ. ಒನ್ ಡೌನ್ ನಲ್ಲಿ ಕನ್ನಡಿಗ ಮನೀಶ್ ಪಾಂಡೆ ಕಣಕ್ಕಿಳಿಯಬಹುದು.
ಯುವ ಆಟಗಾರ ಆಯುಷ್ ಬಡೋನಿ , ದೀಪಕ್ ಹೂಡ ಮಿಡಲ್ ಆರ್ಡರ್ ನಲ್ಲಿ ಕಾಣಿಸಿಕೊಳ್ಳಬಹುದು. ಕೃನಾಲ್ ಪಾಂಡ್ಯಾ ಮತ್ತು ಕೃಷ್ಣಪ್ಪ ಗೌತಮ್ ಆಲ್ರೌಂಡರ್ ಆಡ ಆಡಬೇಕಿದೆ.
ಶ್ರೀಲಂಕಾದ ದುಷ್ಮಂತ್ ಚಾಮಿರಾ ಸೇವೆಯೂ ಸಿಗಲಿದೆ. ಆ್ಯಂಡ್ರ್ಯೂ ಟೈ, ರವಿ ಬಿಷ್ಣೋಯಿ ಮತ್ತು ಆವೇಶ್ ಖಾನ್ ತಂಡದ ಬೌಲಿಂಗ್ ಬ್ರಹ್ಮಾಸ್ತ್ರಗಳಾಗಿದ್ದಾರೆ.
ಇನ್ನು ಹಾರ್ದಿಕ್ ಪಾಂಡ್ಯ ನಾಯಕತ್ವದ ಗುಜರಾತ್ ಟೈಟಾನ್ಸ್ ತಂಡದ ಬ್ಯಾಲೆನ್ಸ್ ಚೆನ್ನಾಗಿ ಕಾಣುತ್ತಿದೆ. ಶುಭ್ಮನ್ ಗಿಲ್ ಮತ್ತು ಮ್ಯಾಥ್ಯೂ ವೇಡ್ ಇನ್ನಿಂಗ್ಸ್ ಆರಂಭಿಸಬಹುದು.
ಕರ್ನಾಟಕದ ಆಲ್ರೌಂಡರ್ ಅಭಿನವ್ ಮುಕುಂದ್, ವಿಜಯ್ ಶಂಕರ್ ಮತ್ತು ಹಾರ್ದಿಕ್ ಪಾಂಡ್ಯಾ ಬ್ಯಾಟಿಂಗ್ ಆಲ್ರೌಂಡರ್ಗಳಾಗಿ ತಂಡಕ್ಕೆ ನೆರವಾಗಬೇಕಿದೆ.
ಡೇವಿಡ್ ಮಿಲ್ಲರ್ ಮತ್ತು ರಾಹುಲ್ ತೇವಾಟಿಯಾ ಫಿನಿಷಿಂಗ್ ಟಚ್ ಕೊಡಬಲ್ಲರು. ರಶೀದ್ ಖಾನ್ ಪ್ರಮುಖ ಲೆಗ್ ಸ್ಪಿನ್ನರ್ ಆದರೆ ಜಯಂತ್ ಯಾದವ್ ಆಫ್ ಸ್ಪಿನ್ನರ್ ಆಗಿದ್ದಾರೆ. ಮೊಹಮ್ಮದ್ ಶಮಿ ಮತ್ತು ಲೋಕಿ ಫರ್ಗ್ಯೂಸನ್ ಬೌಲಿಂಗ್ ಶಕ್ತಿಗಳಾಗಿದ್ದಾರೆ.
ಮೇಲ್ನೋಟಕ್ಕೆ ಲಖನೌ ಕಾಂಬಿನೇಷನ್ ಮಾಡಿಕೊಳ್ಳಲು ಯೋಚನೆ ಮಾಡುವ ಹಾಗೆ ಕಾಣುತ್ತಿದೆ. ಆದರೆ ಗುಜರಾತ್ ಪಕ್ಕಾ ಆಟಗಾರರನ್ನು ಹೊಂದಿರುವ ಹಾಗೇ ಕಾಣುತ್ತಿದೆ. ipl-2022-tata-ipl-2022-gt-vs-lsg match