Karnataka CM ಬೊಮ್ಮಾಯಿ ಅವರೇ ಹಲಾಲ್ ಕಟ್, ಜಟ್ಕಾ ಕಟ್ ಬಿಡಿ, ತೈಲಗಳ ತೆರಿಗೆ ಕಟ್ ಯಾವಾಗ ಹೇಳಿ
ಬೆಂಗಳೂರು : ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ.
ಹಲವು ರಾಜ್ಯಗಳಲ್ಲಿ ಡೀಸೆಲ್ ಬೆಲೆ 100ರ ಗಡಿ ದಾಟಿದೆ. ಇದಲ್ಲದೇ ದೇಶದ ಎಲ್ಲ ರಾಜ್ಯಗಳಲ್ಲೂ ಪೆಟ್ರೋಲ್ ಬೆಲೆ 100 ರೂಪಾಯಿಗಳ ಗಡಿ ದಾಟಿದೆ.
ಪಂಚ ರಾಜ್ಯಗಳ ಚುನಾವಣಾ ಕಾರಣದಿಂದ ನಾಲ್ಕೂವರೆ ತಿಂಗಳಿನಿಂದ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಮಾಡಿರಲಿಲ್ಲ.
ಫಲಿತಾಂಶ ಪ್ರಕಟವಾದ ಎರಡು ದಿನದ ಬಳಿಕ ಬೆಲೆ ಪರಿಷ್ಕರಣೆಗೆ ಚಾಲನೆ ಸಿಕ್ಕಿದೆ. ಮಾರ್ಚ್ 22 ರಿಂದ ಈವರೆಗೆ ಎರಡು ವಾರಗಳಲ್ಲಿ ಒಟ್ಟು 11 ಬಾರಿ ಬೆಲೆ ಏರಿಕೆಯಾಗಿದೆ.
ಈ ಹಿನ್ನೆಲೆಯಲ್ಲಿ ರಾಜ್ಯ ಕಾಂಗ್ರೆಸ್ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ಕಿಡಿಕಾರಿದೆ.
ಕಾಂಗ್ರೆಸ್ ಟ್ವಿಟ್ಟರ್ ನಲ್ಲಿ.. ಹಲಾಲ್ ಕಟ್, ಜಟ್ಕಾ ಕಟ್ ಎಂದು ಜನರ ದಿಕ್ಕು ತಪ್ಪಿಸುತ್ತಾ ಜನರ ಜೇಬು ಕಟ್ ಮಾಡುತ್ತಿದೆ ಬಿಜೆಪಿ ಎಂದು ದೂರಿದೆ.
ಜೊತೆಗೆ ಚುನಾವಣೆಯವರೆಗೂ ಸುಮ್ಮನಿದ್ದ ಸರ್ಕಾರ ಈಗ ಕೇವಲ 15 ದಿನಗಳ ಒಳಗಾಗಿ 8 ರೂಪಾಯಿಗಳಸ್ಟು ಇಂಧನ ತೈಲಗಳ ಬೆಲೆ ಏರಿಸಿ ಸುಲಿಗೆಗೆ ಇಳಿದಿದೆ ಎಂದು ಆಕ್ರೋಶ ಹೊರಹಾಕಿದೆ.
ಅಲ್ಲದೇ ಸಿಎಂ ಬಸವರಾಜ ಬೊಮ್ಮಾಯಿ ಅವರೇ, ಹಲಾಲ್ ಕಟ್, ಜಟ್ಕಾ ಕಟ್ ಬಿಡಿ, ಇಂಧನ ತೈಲಗಳ ತೆರಿಗೆ ಕಟ್ ಯಾವಾಗ ಮಾಡುವಿರಿ ಹೇಳಿ ಎಂದು ಪ್ರಶ್ನಿಸಿದ್ದಾರೆ. karnataka-Congress slams cm basavaraj bommai









