ADVERTISEMENT
Friday, April 24, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

RCB ತಂಡಕ್ಕೆ ಸ್ಫೋಟಕ ಆರಂಭಿಕ ಆಗಮನ

Mahesh M Dhandu by Mahesh M Dhandu
April 18, 2022
in Newsbeat, Sports, ಕ್ರಿಕೆಟ್
ipl 2022 who are the openers of rcb saakshah tv
Share on FacebookShare on TwitterShare on WhatsappShare on Telegram

RCB ತಂಡಕ್ಕೆ ಸ್ಫೋಟಕ ಆರಂಭಿಕ ಆಗಮನ

ಫಾಫ್ ಡುಪ್ಲಸಿಸ್ ನಾಯಕತ್ವದಲ್ಲಿ 15 ನೇ ಆವೃತ್ತಿಯ ಇಂಡಿಯನ್ ಪ್ರಿಮಿಯರ್ ಲೀಗ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಉತ್ತಮ ಪ್ರದರ್ಶನ ನೀಡುತ್ತಿದೆ.

Related posts

SSLC RESULT – ಟ್ವೀಟ್ ಎಲ್ಲಿ ಮಹಾಜ್ಞಾನಿ ಕಲಬುರಗಿ ಕೊನೆಯ ಸ್ಥಾನಕ್ಕೆ ಪ್ರಿಯಾಂಕ್ ಖರ್ಗೆ ಕಾಲೆಳೆದ ಬಿಜೆಪಿ

SSLC RESULT – ಟ್ವೀಟ್ ಎಲ್ಲಿ ಮಹಾಜ್ಞಾನಿ ಕಲಬುರಗಿ ಕೊನೆಯ ಸ್ಥಾನಕ್ಕೆ ಪ್ರಿಯಾಂಕ್ ಖರ್ಗೆ ಕಾಲೆಳೆದ ಬಿಜೆಪಿ

April 24, 2026
ಕಾಂಗ್ರೆಸ್ ಕೈಬಿಟ್ಟರೆ ಸಮುದಾಯದಿಂದ ತ್ರಿವಳಿ ತಲಾಖ್ ಗ್ಯಾರಂಟಿ: ಹೈಕಮಾಂಡ್ ವಿರುದ್ಧ ಮುನಿಸಿಕೊಂಡ ಮುಸ್ಲಿಂ ನಾಯಕರು

ಕಾಂಗ್ರೆಸ್ ಕೈಬಿಟ್ಟರೆ ಸಮುದಾಯದಿಂದ ತ್ರಿವಳಿ ತಲಾಖ್ ಗ್ಯಾರಂಟಿ: ಹೈಕಮಾಂಡ್ ವಿರುದ್ಧ ಮುನಿಸಿಕೊಂಡ ಮುಸ್ಲಿಂ ನಾಯಕರು

April 24, 2026

ಆರ್ ಸಿಬಿ ತಂಡ ಈ ಆವೃತ್ತಿಯಲ್ಲಿ ಸೋಲು ಗೆಲುವುಗಳ ಸಮ್ಮಿಲನದೊಂದಿಗೆ ಸಾಗುತ್ತಿದೆ. ಮೊದಲ ಪಂದ್ಯದಲ್ಲಿ ಪಂಜಾಬ್ ವಿರುದ್ಧ ಸೋತ ರಾಯಲ್ ಚಾಲೆಂಜರ್ಸ್ ಬಳಿಕ ಸತತ ಮೂರು ಗೆಲುವುಗಳೊಂದಿಗೆ ಮುನ್ನುಗ್ಗಿದ್ರು.

ಆದ್ರೆ ಈ ಗೆಲುವಿನ ಓಟಕ್ಕೆ ಚೆನ್ನೈ ಸೂಪರ್ ಕಿಂಗ್ಸ್ ತಂಡ ಬ್ರೇಕ್ ಹಾಕಿತು. ಆದ್ರೆ ಆಘಾತದಿಂದ ಬೇಗ ಚೇತರಿಸಿಕೊಂಡ ಆರ್ ಸಿಬಿ ತಂಡ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸ್ಟ್ರಾಂಗ್ ಕಮ್ ಬ್ಯಾಕ್ ಮಾಡಿದೆ. ಹೀಗಾಗಿ ಆಡಿರುವ ಆರು ಪಂದ್ಯಗಳಲ್ಲಿ ನಾಲ್ಕು ಪಂದ್ಯಗಳನ್ನು ಗೆದ್ದು ಎಂಟು ಅಂಕಗಳನ್ನು ಪಡೆದುಕೊಂಡಿದೆ.

ಒಟ್ಟಾರೆ ತಂಡದ ವಿಚಾರವಾಗಿ ಮಾತನಾಡೋದಾದ್ರೆ ಇದು ಅದ್ಭುತ ಪ್ರದರ್ಶನ ಹೌದು.. ಆದ್ರೆ ಆರ್ ಸಿಬಿಗೆ ಮೊದಲ ಪಂದ್ಯದಿಂದಲೂ ಟಾಪ್ ಆರ್ಡರ್ ಸಮಸ್ಯೆ ಕಾಡುತ್ತಿದೆ.

ಆರಂಭಿಕರಾಗಿ ಮೈದಾನಕ್ಕೆ ಬರುತ್ತಿರುವ ಫಾಫ್ ಡುಪ್ಲಸಿಸ್ ಮತ್ತು ಯುವ ಬ್ಯಾಟರ್ ಅನೂಜ್ ರಾವತ್ ನಿರೀಕ್ಷಿತ ಮಟ್ಟದಲ್ಲಿ ಪ್ರದರ್ಶನ ನೀಡುತ್ತಿಲ್ಲ. ಕೆಲವು ಪಂದ್ಯಗಳಲ್ಲಿ ಅರ್ಧಶತಕದ ಜೊತೆಯಾಟ ನೀಡಿದ್ರೂ ಬೇಗ ಕ್ರೀಸ್ ನಿಂದ ಪೆವಿಲಿಯನ್ ನತ್ತ ಹೆಜ್ಜೆ ಹಾಕುತ್ತಿದ್ದಾರೆ.

ipl 2022 who are the openers of rcb saakshah tv

ಮುಖ್ಯವಾಗಿ ಚೇಸಿಂಗ್ ಅಥವಾ ಟಾರ್ಗೆಟ್ ಸೆಟ್ಟಿಂಗ್ ನಲ್ಲಿ ಪವರ್ ಪ್ಲೇ ನಲ್ಲಿ ರನ್ ಗಳೇ ಬರುತ್ತಿಲ್ಲ. ಪವರ್ ಪ್ಲೇನಲ್ಲಿ ರನ್ ಗಳಿಕೆಗಿಂತ ವಿಕೆಟ್ ಉಳಿಸಿಕೊಳ್ಳಲು ಪರದಾಡುತ್ತಿದ್ದಂತೆ ಕಾಣಿಸುತ್ತಿದೆ.  ಇದು ತಂಡದ ಮೇಲೆ ಹಾಗೇ ಮಿಡಲ್ ಆರ್ಡರ್ ಆಟಗಾರರ ಮೇಲೆ ಅನಾವಶ್ಯಕ ಒತ್ತಡ ಏರಿದಂತೆ ಆಗುತ್ತಿದೆ.

ಇದು ಒಂದು ಕಡೆಯಾದ್ರೆ ಆರ್ ಸಿಬಿಯ ಕೀ ಪ್ಲೇಯರ್ ವಿರಾಟ್ ಕೊಹ್ಲಿ ವೈಫಲ್ಯ ತಂಡಕ್ಕೆ ತಲೆನೋವಾಗಿದೆ. ವಿರಾಟ್ ಕೊಹ್ಲಿ ಮೊದಲಿನ ಟಚ್ ನಲ್ಲಿ ಕಾಣಿಸಿಕೊಳ್ಳದೇ ಇರೋದು ತಂಡದ ಮೇಲೆ ಪರಿಣಾಮ ಬೀರುತ್ತಿದೆ. ಮುಖ್ಯವಾಗಿ ವಿರಾಟ್ ಕ್ರೀಸ್ ಕಚ್ಚಿ ಬ್ಯಾಟ್ ಬೀಸದೇ ಇರೋದು ತಂಡಕ್ಕೆ ದೊಡ್ಡ ಕೊರತೆಯಾಗಿದೆ.  ಆರ್ ಸಿಬಿ ಈ ಬಾರಿ ಕಪ್ ಗೆಲ್ಲಬೇಕಾದ್ರೆ ಈ ಸಮಸ್ಯೆಗೆ ಆದಷ್ಟು ಬೇಗ ಪರಿಹಾರ ಸಿಗಬೇಕಾಗಿದೆ.

ಈ ನಡುವೆ ಲಕ್ನೋ ವಿರುದ್ದದ ಪಂದ್ಯಕ್ಕೆ ಆರ್ ಸಿಬಿ ಪ್ಲೇಯಿಂಗ್ ಇಲೆವೆನ್ ನಲ್ಲಿ ಬದಲಾವಣೆ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಅನೂಜ್ ರಾವತ್ ಬದಲಿಗೆ  ರಜತ್ ಪಟೀದಾರ್ ಅಥವಾ ಮಹಿಪಾಲ್ ಲೋಮ್ರೋರ್ ಅವರಿಗೆ ಅವಕಾಶ ನೀಡಬಹುದು ಎಂದು ಅಂದಾಜಿಸಲಾಗುತ್ತಿದೆ.

ರಜತ್ ಪಟೀದಾರ್ ಈಗಾಗಲೇ ಆರ್ ಸಿಬಿ ಪರ ಆಡಿದ್ದಾರೆ. ಇತ್ತ ಮಹಿಪಾಲ್ ಎಡಗೈ ಬ್ಯಾಟರ್ ಆಗಿದ್ದಾರೆ. ಇಬ್ಬರೂ ಟಾಪ್ ಅಥವಾ ಮಿಡಲ್ ನಲ್ಲಿ ಬ್ಯಾಟ್ ಬೀಸುತ್ತಾರೆ. ಹೀಗಾಗಿ ವಿರಾಟ್  ಫಾಫ್ ಜೊತೆ ಇನ್ನಿಂಗ್ಸ್ ಓಪನ್ ಮಾಡುವ ಸಾಧ್ಯತೆಗಳಿವೆ.

ಆದ್ರೆ ಆರ್ ಸಿಬಿ ಮ್ಯಾನೆಜ್ ಮೆಂಟ್ ಯಾವ ರೀತಿ ನಿರ್ದಾರ ತೆಗೆದುಕೊಳ್ಳುತ್ತೋ ಕಾದು ನೋಡಬೇಕು…  ipl 2022 who are the openers of rcb

Tags: #Saaksha TVipl 2022RCB
ShareTweetSendShare
Join us on:

Related Posts

SSLC RESULT – ಟ್ವೀಟ್ ಎಲ್ಲಿ ಮಹಾಜ್ಞಾನಿ ಕಲಬುರಗಿ ಕೊನೆಯ ಸ್ಥಾನಕ್ಕೆ ಪ್ರಿಯಾಂಕ್ ಖರ್ಗೆ ಕಾಲೆಳೆದ ಬಿಜೆಪಿ

SSLC RESULT – ಟ್ವೀಟ್ ಎಲ್ಲಿ ಮಹಾಜ್ಞಾನಿ ಕಲಬುರಗಿ ಕೊನೆಯ ಸ್ಥಾನಕ್ಕೆ ಪ್ರಿಯಾಂಕ್ ಖರ್ಗೆ ಕಾಲೆಳೆದ ಬಿಜೆಪಿ

by Shwetha
April 24, 2026
0

ಎಸ್ ಎಸ್ ಎಲ್ ಸಿ ಫಲಿತಾಂಶ ಪ್ರಕಟವಾಗುತ್ತಿದ್ದಂತೆಯೇ ರಾಜ್ಯ ರಾಜಕಾರಣದಲ್ಲಿ ಹೊಸ ಸಮರ ಶುರುವಾಗಿದೆ. ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳು ಕ್ರಮವಾಗಿ ಪ್ರಥಮ ಹಾಗೂ ದ್ವಿತೀಯ...

ಕಾಂಗ್ರೆಸ್ ಕೈಬಿಟ್ಟರೆ ಸಮುದಾಯದಿಂದ ತ್ರಿವಳಿ ತಲಾಖ್ ಗ್ಯಾರಂಟಿ: ಹೈಕಮಾಂಡ್ ವಿರುದ್ಧ ಮುನಿಸಿಕೊಂಡ ಮುಸ್ಲಿಂ ನಾಯಕರು

ಕಾಂಗ್ರೆಸ್ ಕೈಬಿಟ್ಟರೆ ಸಮುದಾಯದಿಂದ ತ್ರಿವಳಿ ತಲಾಖ್ ಗ್ಯಾರಂಟಿ: ಹೈಕಮಾಂಡ್ ವಿರುದ್ಧ ಮುನಿಸಿಕೊಂಡ ಮುಸ್ಲಿಂ ನಾಯಕರು

by Shwetha
April 24, 2026
0

ದಾವಣಗೆರೆ ಲೋಕಸಭಾ ಚುನಾವಣೆಯ ಬೆನ್ನಲ್ಲೇ ಕೈ ನಾಯಕರ ವಿರುದ್ಧ ಮುಸ್ಲಿಂ ಸಮುದಾಯ ಆಕ್ರೋಶದ ಕಟ್ಟೆ ಒಡೆದಿದೆ. ಪಕ್ಷಕ್ಕಾಗಿ ದಶಕಗಳಿಂದ ದುಡಿದ ನಾಯಕರನ್ನು ಏಕಾಏಕಿ ಉಚ್ಚಾಟಿಸಿರುವ ಕಾಂಗ್ರೆಸ್ ಹೈಕಮಾಂಡ್...

ಎರಡು ನಿಮಿಷ ಕ್ಯೂನಲ್ಲಿ ನಿಲ್ಲಲು ಆಗಲ್ವಾ ಮಗಳ ಜೊತೆ ವೋಟ್ ಹಾಕಲು ಬಂದ ಕಮಲ್ ಹಾಸನ್ ಗೆ ಕ್ಲಾಸ್ ತಗೊಂಡ ಜನ

ಎರಡು ನಿಮಿಷ ಕ್ಯೂನಲ್ಲಿ ನಿಲ್ಲಲು ಆಗಲ್ವಾ ಮಗಳ ಜೊತೆ ವೋಟ್ ಹಾಕಲು ಬಂದ ಕಮಲ್ ಹಾಸನ್ ಗೆ ಕ್ಲಾಸ್ ತಗೊಂಡ ಜನ

by Shwetha
April 24, 2026
0

ತಮಿಳುನಾಡು ವಿಧಾನಸಭೆ ಚುನಾವಣೆಯ ಮತದಾನ ಪ್ರಕ್ರಿಯೆ ನಿನ್ನೆ ಮುಗಿದಿದೆ.ಶೇಕಡಾ 84 ಕ್ಕೂ ಹೆಚ್ಚು ಮತದಾನ ದಾಖಲಾಗಿದೆ. ಚಿತ್ರರಂಗದ ದಿಗ್ಗಜರು ಮತ್ತು ರಾಜಕೀಯ ನಾಯಕರು ತಮ್ಮ ಹಕ್ಕನ್ನು ಚಲಾಯಿಸಲು...

ಮುಖ್ಯ ಚುನಾವಣಾ ಆಯುಕ್ತರಿಗೆ ಪದ್ಮಭೂಷಣ ಪ್ರಶಸ್ತಿ ನೀಡಿ: ಚುನಾವಣಾ ಆಯೋಗದ ವಿರುದ್ಧ ಕಪಿಲ್ ಸಿಬಲ್ ವ್ಯಂಗ್ಯಭರಿತ ವಾಗ್ದಾಳಿ

ಮುಖ್ಯ ಚುನಾವಣಾ ಆಯುಕ್ತರಿಗೆ ಪದ್ಮಭೂಷಣ ಪ್ರಶಸ್ತಿ ನೀಡಿ: ಚುನಾವಣಾ ಆಯೋಗದ ವಿರುದ್ಧ ಕಪಿಲ್ ಸಿಬಲ್ ವ್ಯಂಗ್ಯಭರಿತ ವಾಗ್ದಾಳಿ

by Shwetha
April 24, 2026
0

ಪಶ್ಚಿಮ ಬಂಗಾಳದ ಚುನಾವಣಾ ಪ್ರಕ್ರಿಯೆಯಲ್ಲಿ ಕೇಂದ್ರ ಚುನಾವಣಾ ಆಯೋಗವು ಬಿಜೆಪಿ ಪರವಾಗಿ ಕೆಲಸ ಮಾಡುತ್ತಿದೆ ಎಂದು ರಾಜ್ಯಸಭಾ ಸದಸ್ಯ ಹಾಗೂ ಹಿರಿಯ ವಕೀಲ ಕಪಿಲ್ ಸಿಬಲ್ ಗಂಭೀರ...

ದಿನ ಭವಿಷ್ಯ (09-04-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

ದಿನ ಭವಿಷ್ಯ (24-04-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

by Shwetha
April 24, 2026
0

ದಿನ ಭವಿಷ್ಯ : 24-04-2026 ಮೇಷ ರಾಶಿ ಇಂದು ಮೇಷ ರಾಶಿಯವರಿಗೆ ಮಿಶ್ರ ಫಲ ದೊರೆಯಲಿದೆ. ಉದ್ಯೋಗ ಕ್ಷೇತ್ರದಲ್ಲಿ ಸಣ್ಣಪುಟ್ಟ ಅಡೆತಡೆಗಳು ಎದುರಾಗಬಹುದು ಆದರೆ ನಿಮ್ಮ ಪರಿಶ್ರಮದಿಂದ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram