Rashid Khan | ರಶೀದ್ ಖಾನ್ ಸ್ನೇಕ್ ಶಾಟ್…
ರಶೀದ್ ಖಾನ್ ಬೌಲಿಂಗ್ ಹೇಳಿಕೊಳ್ಳುವಂತಹ ಅದ್ಭುತವಾಗಿ ಏನೂ ಇರೋದಿಲ್ಲ ಎಂದು ರಶೀದ್ ಖಾನ್ ಬಗ್ಗೆ ಎಸ್ ಆರ್ ಹೆಚ್ ತಂಡದ ಬ್ಯಾಟಿಂಗ್ ಕೋಚ್ ಬ್ರಿಯಾನ್ ಲಾರಾ ಹೇಳಿಕೆ ನೀಡಿದ್ದರು.
ಆ ಮಾತು ನಿಜ ಎಂಬಂತೆ ಗುಜರಾತ್ ಟೈಟಾನ್ಸ್ ತಂಡದ ಸ್ಟಾರ್ ಆಟಗಾರ ರಶೀದ್ ಬುಧವಾರ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಕಳಪೆ ಪ್ರದರ್ಶನ ನೀಡಿದರು.
ನಾಲ್ಕು ಓವರ್ ಗಳನ್ನು ಎಸೆದ ರಶೀದ್ ಖಾನ್ 45 ರನ್ ನೀಡಿ ಒಂದು ವಿಕೆಟ್ ಪಡೆದರು.
ಅದಾಗ್ಯೂ, ಎಸ್‌ಆರ್‌ಎಚ್ ವಿರುದ್ಧ ನಡೆದ ಪಂದ್ಯದಲ್ಲಿ ಬೌಲರ್ ಆಗಿ ವಿಫಲವಾದರೂ, ರಶೀದ್ ಬ್ಯಾಟ್ಸ್‌ಮನ್ ಆಗಿ ಮಿಂಚಿನ ಪ್ರದರ್ಶನ ನೀಡಿದರು.
ಸೋಲಿನ ಅಂಚಿನಲ್ಲಿದ್ದ ಗುಜರಾತ್ ಟೈಟಾನ್ಸ್ ತಂಡವನ್ನು ರಾಹುಲ್ ತೆವಾಟಿಯಾ ಜೊತೆಗೂಡಿ ರಶೀದ್ ಖಾನ್ ಗೆಲುವಿನತ್ತ ಮುನ್ನಡೆಸಿದರು.
ಈ ರೋಚಕ ಪಂದ್ಯದಲ್ಲಿ 11 ಎಸೆತಗಳನ್ನು ಎದುರಿಸಿದ ರಶೀದ್ 31 ರನ್ ಗಳಿಸಿ ಅಜೇಯರಾಗಿ ಉಳಿದು ಪಂದ್ಯವನ್ನು ಗೆಲ್ಲಿಸಿಕೊಟ್ಟರು.
ಸನ್ ರೈಸರ್ಸ್ ವಿರುದ್ಧದ ಪಂದ್ಯದಲ್ಲಿ ರಶೀದ್ ಖಾನ್, ಭುವನೇಶ್ವರ್ ಕುಮಾರ್ ಬೌಲಿಂಗ್ ನಲ್ಲಿ ಒಂದು ಸಿಕ್ಸರ್ ಹಾಗೂ ಮಾರ್ಕೊ ಜಾನ್ಸನ್ ಬೌಲಿಂಗ್ ನಲ್ಲಿ ಸತತ ಮೂರು ಸಿಕ್ಸರ್ ಸಿಡಿಸಿದ್ರು.
ಈ ಸಿಕ್ಸರ್ ಗಳ ಬಗ್ಗೆ ಪಂದ್ಯದ ನಂತರ ನಾಯಕ ಹಾರ್ದಿಕ್ ಪಾಂಡ್ಯ, ರಾಹುಲ್ ತೆವಾಟಿಯಾ ಜೊತೆ ಮಾತನಾಡಿದ ರಶೀದ್ ಖಾನ್, ಭುವಿ ಬೌಲಿಂಗ್ ನಲ್ಲಿ ಹೊಡೆದ ಶಾಟ್ ಗೆ ಸ್ನೇಕ್ ಶಾಟ್ ಎಂದು ನಾಮಕರಣ ಮಾಡಿದ್ದಾರೆ.
ಆ ಶಾಟ್ ಗೆ ನಾನು ಸ್ನೇಕ್ ಶಾಟ್ ಅಂತಾ ಕರೆಯುತ್ತೇನೆ. ಹಾವು ಕಚ್ಚಿದ ನಂತರ ಹಿಂದೆ ಸರಿಯುತ್ತೆ ಅಲ್ವಾ. ಹಾಗೇ ಬಾಲ್ ಬರುವ ಸಂದರ್ಭದಲ್ಲಿ ನನ್ನ ಬಾಡಿ ಪೊಜಿಷನ್ ಸರಿಯಾಗಿ ಇಲ್ಲಂದ್ರೆ ಶಾಟ್ ಹೊಡೆಯಲಾಗುವುದಿಲ್ಲ.
ಆ ಎಸೆತವನ್ನು ಸರಿಯಾಗಿ ಅಂದಾಜಿಸ ನಂತರ ರಿಸ್ಟ್ ಪವರ್ ಬಳಸಿ ಹೊಡೆಯಬಹುದು ಎಂದಿದ್ದಾರೆ ರಶೀದ್. Rashid-khan-name-his-trademark-shot-snake-shot









