IPL 2022 : ಪಂತ್ ಗೆ ತಲೆ ಕೆಟ್ಟಿದ್ಯಾ… ರವಿಶಾಸ್ತ್ರಿ ಪ್ರಶ್ನೆ
ಮುಂಬೈ ಇಂಡಿಯನ್ಸ್ ವಿರುದ್ಧದ ನಿರ್ಣಾಯಕ ಪಂದ್ಯದಲ್ಲಿ ಸೋತ ನಂತರ ಪ್ಲೇ-ಆಫ್ ತಲುಪುವ ಅವಕಾಶವನ್ನು ಕಳೆದುಕೊಂಡಿದ್ದಕ್ಕಾಗಿ ಟೀಮ್ ಇಂಡಿಯಾ ಮಾಜಿ ಕೋಚ್ ರವಿಶಾಸ್ತ್ರಿ ಡೆಲ್ಲಿ ಕ್ಯಾಪಿಟಲ್ಸ್ ನಾಯಕ ರಿಷಬ್ ಪಂತ್ ವಿರುದ್ಧ ಕೋಪಗೊಂಡಿದ್ದಾರೆ.
ಗೆಲ್ಲಲೇಬೇಕಾದ ಪಂದ್ಯದಲ್ಲಿ, ಪಂತ್ ಉದಾಸೀನದಿಂದ ವರ್ತಿಸಿ ಮುಂಬೈ ತಂಡವನ್ನು ಹತ್ತಿರವಿದ್ದು, ಗೆಲ್ಲಿಸಿದ್ದಾರೆ ಎಂದು ಶಾಸ್ತ್ರಿ ಹೇಳಿದ್ದಾರೆ.
ಟಿಮ್ ಡೆವಿಡ್ ಡಿಆರ್ಎಸ್ ವಿಷಯದಲ್ಲಿ ನಿರ್ಲಕ್ಷ್ಯವಾಗಿ ವ್ಯವಹಿಸಿದ ರಿಷಬ್ ಪಂತ್ ಪರೋಕ್ಷವಾಗಿ ಆರ್ ಸಿಬಿಗೆ ಸಹಕರಿದ್ದಾರೆ ಎಂದು ಕಿಡಿಕಾರಿದ್ದಾರೆ.
ಎರಡು ಡಿಆರ್ ಎಸ್ ಗಳಿದ್ದರೂ ಪಂತ್ ಕಾಮನ್ ಸೆನ್ಸ್ ಉಪಯೋಗಿಸದೇ ನಿರ್ಲಕ್ಷ್ಯ ವಹಿಸಿದ್ದಾರೆ. ಆತನ ತಲೆ ಕೆಟ್ಟಿರಬೇಕು ಎಂದು ಶಾಸ್ತ್ರಿ ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ.
ಕ್ಯಾಪ್ಟನ್ ಸರಿಯಾದ ನಿರ್ಧಾರ ತೆಗೆದುಕೊಳ್ಳಲಾಗುವುದಿಲ್ಲ ಎಂದಾದ್ರೆ ಅಲ್ಲಿರುವ ಆಟಗಾರರ ಸಲಹೆ ನೀಡಬೇಕಿತ್ತು.
ಆದ್ರೆ ಯಾವ ಆಟಗಾರನೂ ಆ ರೀತಿ ಮಾಡಲಿಲ್ಲ. ಡೆಲ್ಲಿ ಕ್ಯಾಪಿಟಲ್ಸ್ ಆಟಗಾರರು ಆರ್ ಸಿಬಿಗೆ ಪ್ಲೇ ಆಫ್ಸ್ ಟಿಕೆಟ್ ಅನ್ನ ಬಂಗಾರದ ತಟ್ಟೆಯಲ್ಲಿ ಇಟ್ಟು ಕೊಟ್ಟಿದ್ದಾರೆ ಎಂದು ರವಿಶಾಸ್ತ್ರಿ ಹೇಳಿದ್ದಾರೆ.
ಮುಂಬೈ ವಿರುದ್ಧದ ಪಂದ್ಯದಲ್ಲಿ ಟಿಮ್ ಡೇವಿಡ್ ಮೊದಲ ಎಸೆತದಲ್ಲಿ ಔಟ್ ಆಗಬಹುದಿತ್ತು. ಆದರೆ, ರಿಷಬ್ ಪಂತ್ ಡಿಆರ್ ಎಸ್ ತೆಗೆದುಕೊಳ್ಳದೆ ನಿರ್ಲಕ್ಷ್ಯ ತೋರಿಸಿದರು.
ಇದರ ಲಾಭ ಪಡೆದ ಡೆವಿಡ್ ಕೇವಲ 11 ಎಸೆತಗಳಲ್ಲಿ 34 ರನ್ ಚಚ್ಚಿ ಪಂದ್ಯದ ಗತಿಯನ್ನ ಬದಲಿಸಿದರು.
ಅಂದಹಾಗೆ ರಿಷಬ್ ಪಂತ್ ನಾಯಕತ್ವದ ಬಗ್ಗೆ ಇದೀಗ ಸಾಕಷ್ಟು ಹಿರಿಯ ಕ್ರಿಕೆಟಿಗರು ಕಮೆಂಟ್ ಗಳನ್ನು ಮಾಡುತ್ತಿದ್ದಾರೆ. ಪಂತ್ ಟೀಂ ಇಂಡಿಯಾದ ಭವಿಷ್ಯದ ನಾಯಕ ಎಂದು ಬಿಂಬಿತರಾಗುತ್ತಿದ್ದಾರೆ.
ಆದ್ರೆ ಅವರಿಗೆ ನಿಜವಾಗಲೂ ಆ ಸಾಮರ್ಥ್ಯ ಇದ್ಯಾ..? ಒತ್ತಡದಲ್ಲಿ ಯಾವ ರೀತಿ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು ಅನ್ನೋದನ್ನ ಪಂತ್ ಕಲಿಯಬೇಕು.
ಯಾವುದೇ ಡಿಆರ್ ಎಸ್ ವಿಚಾರದಲ್ಲಿ ನಾಯಕರಾದವರು, ಸಾಮಾನ್ಯವಾಗಿ ವಿಕೆಟ್ ಕೀಪರ್ ಸಲಹೆ ಪಡೆಯುತ್ತಾರೆ. ಕೀಪರ್ ಸಲಹೆ ಮೇರೆಗೆ ನಾಯಕ ಡಿಆರ್ ಎಸ್ ಮೊರೆ ಹೋಗುತ್ತಾರೆ.
ಆದ್ರೆ ಇಲ್ಲಿ ವಿಕೆಟ್ ಕೀಪರ್ ಮತ್ತು ನಾಯಕ ರಿಷಬ್ ಪಂತ್ ಆಗಿದ್ರೂ ಅವರು ಡಿಆರ್ ಎಸ್ ತೆಗೆದುಕೊಳ್ಳುವ ಧೈರ್ಯ ಮಾಡಲಿಲ್ಲ ಎಂದು ಹಿರಿಯ ಕ್ರಿಕೆಟಿಗರು ಕಿಡಿಕಾರುತ್ತಿದ್ದಾರೆ.
ಅಲ್ಲದೇ ಬೌಲಿಂಗ್ ಬದಲಾವಣೆಯಲ್ಲೂ ಪಂತ್ ಚಾಣಾಕ್ಷತೆ ತೋರಲಿಲ್ಲ. ಶರ್ದೂಲ್ ಠಾಕೂರ್ ದುಬಾರಿಯಾಗುತ್ತಿದ್ದರೂ ಅವರ ಓವರ್ ಗಳನ್ನು ಮೊಟಕುಗೊಳಿಸದೇ ಠಾಕೂರ್ ಮೇಲೆ ನಂಬಿಕೆ ಇಟ್ಟರು.
ಇತ್ತ ಮಿಚೆಲ್ ಮಾರ್ಷ್ ಎರಡು ಓವರ್ ಗಳನ್ನು ಎಸೆದು ಕೇವಲ ಏಳು ರನ್ ನೀಡಿದ್ದರು. ಅವರ ಕೈಯಲ್ಲಿ ಯಾಕೆ ಬೌಲಿಂಗ್ ಮಾಡಿಸಿಲ್ಲ ಎಂದು ಪ್ರಶ್ನಿಸುತ್ತಿದ್ದಾರೆ. ravi-shastri-slams-rishabh-pant IPL 2022