Ind Vs WI ODI Series : ನಾವೇನೆಂದು ತೋರಿಸುತ್ತೇವೆ : ಟೀಂ ಇಂಡಿಯಾಗೆ ಪೂರನ್ ಎಚ್ಚರಿಕೆ
ಇಂಗ್ಲೆಂಡ್ ಪ್ರವಾಸದಲ್ಲಿ ಟಿ 20, ಏಕದಿನ ಸರಣಿಗಳನ್ನು ಗೆದ್ದು ಜೋಷ್ ನಲ್ಲಿರುವ ಟೀಂ ಇಂಡಿಯಾ ಇದೀಗ ವೆಸ್ಟ್ ಇಂಡೀಸ್ ಪ್ರವಾಸ ಕೈಗೊಂಡಿದೆ.
ಶಿಖರ್ ಧವನ್ ನೇತೃತ್ವದ ಟೀಂ ಇಂಡಿಯಾ ಈಗಾಗಲೇ ವಿಂಡೀಸ್ ನೆಲದಲ್ಲಿ ಕಾಲಿಟ್ಟಿದೆ ಕೂಡ.
ವಿಂಡೀಸ್ ವಿರುದ್ಧದ ಏಕದಿನ ಸರಣಿಗೆ ಟೀಂ ಇಂಡಿಯಾದ ಸ್ಟಾರ್ ಆಟಗಾರರಾದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಜಸ್ ಪ್ರೀತ್ ಬುಮ್ರಾ, ಅಲಭ್ಯರಾಗಿದ್ದಾರೆ.
ಈ ಹಿನ್ನೆಲೆಯಲ್ಲಿ ನಿಕೋಲಸ್ ಪೂರನ್ ಆಸಕ್ತಿದಾಯಕ ವ್ಯಾಖ್ಯಾನಗಳನ್ನು ಮಾಡಿದ್ದಾರೆ.

ಭಾರತದ ನಾಯಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಜಸ್ ಪ್ರಿತ್ ಬುಮ್ರಾ ಸೇರಿದಂತೆ ಹಲವರು ವಿಶ್ರಾಂತಿ ಪಡೆದುಕೊಂಡಿರುವ ಕಾರಣ ಏಕದಿನ ಸರಣಿಯಲ್ಲಿ ತಮ್ಮ ಕೆಲಸ ಸುಲಭವಾಗಲಿದೆ ಎಂದು ಹೇಳಿದ್ದಾರೆ.
ಟೀಂ ಇಂಡಿಯಾದಲ್ಲಿ ಅದೆಷ್ಟೋ ಅದ್ಭುತ ಆಟಗಾರರಿದ್ದಾರೆ. ಒಂಟಿ ಕೈಯಲ್ಲಿ ಪಂದ್ಯದ ಗತಿಯನ್ನ ಬದಲಿಸುವ ಮ್ಯಾಚ್ ವಿನ್ನರ್ ಗಳಲಿದ್ದಾರೆ.
ಬ್ಯಾಟಿಂಗ್ ನಲ್ಲಿ ಬೌಲಿಂಗ್ ನಲ್ಲಿ ಮಿಂಚಬಲ್ಲರು. ನಾವು ಕೆಟ್ಟ ಅನುಭವಗಳನ್ನು ಮರೆತು ಟೀಂ ಇಂಡಿಯಾಗೆ ಸವಾಲು ಎಸೆಯುತ್ತೇವೆ.
ಟ್ರಿನಿಡಾಡ್, ಫ್ಲೊರಿಡಾದಲ್ಲಿ ನಮ್ಮ ತಾಕತ್ತು ತೋರಿಸುತ್ತೇವೆ. ಕ್ರಿಕೆಟ್ ವಿಶ್ವಕ್ಕೆ ನಾವೇಂದು ಸಾರಿ ಹೇಳುತ್ತೇವೆ.
ಒಂದು ತಂಡವಾಗಿ ನಮಗೆ ಇದೊಂದು ಒಳ್ಳೆಯ ಅವಕಾಶ ಎಂದು ವೆಸ್ಟ್ ಇಂಡೀಸ್ ನಾಯಕ ನಿಕೋಲಸ್ ಪೂರನ್ ಹೇಳಿದ್ದಾರೆ.








