Bangalore | ಬ್ಯಾಡರಹಳ್ಳಿ ಪೊಲೀಸರಿಂದ ಗಾಂಜಾ ಪೆಡ್ಲರ್ ಬಂಧನ
ಬೆಂಗಳೂರು : ಸಿಲಿಕಾನ್ ಸಿಟಿಯಲ್ಲಿ ಗಾಂಜಾ ಮತ್ತು ಹೆಚ್ಚಾಗುತ್ತಿದ್ದು, ಬ್ಯಾಡರಹಳ್ಳಿ ಪೊಲೀಸರು ಗಾಂಜಾ ಪೆಡ್ಲರ್ ಒಬ್ಬನನ್ನ ಬಂಧಿಸಿದ್ದಾರೆ.
18 ವರ್ಷದ ಧನುಷ್ ಬಂಧಿತ ಆರೋಪಿಯಾಗಿದ್ದಾರೆ.
ವಾಟರ್ ಕ್ಯಾನ್ ಸಪ್ಲೈ ಕೆಲಸ ಮಾಡುತ್ತಿದ್ದ ಧನುಷ್, ಅದೇ ನೆಪದಲ್ಲಿ ಗಾಂಜಾ ಮಾರಾಟ ಮಾಡ್ತಿದ್ದನಂತೆ.

ಈತ ಆಂಧ್ರದಿಂದ ಗಾಂಜಾ ತಂದು ಮಾರಾಟ ಮಾಡ್ತಿದ್ದನಂತೆ.
ಇದರ ಖಚಿತ ಮಾಹಿತಿ ಪಡೆದ ಬ್ಯಾಡರಹಳ್ಳಿ ಠಾಣಾ ಪೊಲೀಸರು ಇದೀಗ ಆತನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಬಂಧಿತನಿಂದ 930 ಗ್ರಾಂ ಗಾಂಜಾ, 1,400 ಜಪ್ತಿ ಮಾಡಲಾಗಿದೆ.
ಈ ಸಂಬಂಧ ಬ್ಯಾಡರಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.








