Bangalore | ಮಾಜಿ ಗೃಹ ಸಚಿವರ ಮನೇಲಿ ಕಳ್ಳತನ ಮಾಡಿದ್ದ ಆರೋಪಿ ಬಂಧನ
ಬೆಂಗಳೂರು : ಮಾಜಿ ಗೃಹ ಸಚಿವ ಎಂ.ಬಿ.ಪಾಟೀಲ್ ಅವರ ಮನೆಯಲ್ಲಿ ಕಳ್ಳತನ ಮಾಡಿದ್ದ ಆರೋಪಿಯನ್ನು ಸದಾಶಿವನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಜಯಂತ್ ಬಂಧಿತ ಆರೋಪಿಯಾಗಿದ್ದಾರೆ.
ಎಂ.ಬಿ. ಪಾಟೀಲ್ ಮನೆಯಲ್ಲಿ ಐದು ವರ್ಷದಿಂದ ಜಯಂತ್ ದಾಸ್ ಲಾಂಡ್ರಿ ಕೆಲಸ ಮಾಡುತ್ತಿದ್ದ ಎಂದು ತಿಳಿದು ಬಂದಿದೆ.

ಕಳೆದ ತಿಂಗಳು ಎಂಬಿ ಪಾಟೀಲ್ ಅವರ ಮನೆಯಲ್ಲಿ ಜಯಂತ್, 85 ಲಕ್ಷ ರೂಪಾಯಿ ಮೌಲ್ಯದ ವಿದೇಶಿ ಕರೆನ್ಸಿ ಮತ್ತು ಲಕ್ಷ ಲಕ್ಷ ಬೆಲೆಯ 6 ಬ್ರಾಂಡೆಡ್ ವಾಚ್ ಗಳು ಕಳ್ಳತನ ಮಾಡಿದ್ದನು.
ಮನೆಯಲ್ಲಿ ಕಳ್ಳತನ ಮಾಡಿ ಒಡಿಸ್ಸಾಗೆ ಪರಾರಿಯಾಗಿನಂತೆ. ಇತ್ತ ಅಡಿಗೆಯವರ ಮೂಲಕ ಸದಾಶಿವನಗರ ಠಾಣೆಯಲ್ಲಿ ಗೃಹ ಸಚಿವ ಎಂ.ಬಿ.ಪಾಟೀಲ್ ಅವರು ದೂರು ದಾಖಲು ಮಾಡಿದ್ದರು.
ದೂರಿನನ್ವಯ ಸದಾಶಿವನಗರ ಪೊಲೀಸರು ಆರೋಪಿ ಜಯಂತ್ ಬಂಧಿಸಿದ್ದಾರೆ. ಸದ್ಯ ಐದು ದಿನ ಕಸ್ಟಡಿಗೆ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.








