Puri Jagannadh : ಚಾರ್ಮಿ ಜೊತೆ ಅಫೈರ್ ನಿಜಾನಾ..? ಪೂರಿ ಜಗನ್ನಾಥ್ ಹೇಳಿದ್ದೇನು.. ?
ಪಂಜಾಬಿ ಬೆಡಗಿ ಚಾರ್ಮಿ ಕೌರ್ ತೆಲುಗು ಸಿನಿಮಾ ಇಂಡಸ್ಟ್ರಿಯಲ್ಲಿ ಸ್ಟಾರ್ ನಟಿಯಾಗಿ ಈಗ ನಿರ್ಮಾಪಕಿಯಾಗಿ ಮುಂದುವರೆಯುತ್ತಿದ್ದಾರೆ.
ನಿರ್ದೇಶಕ ಪೂರಿ ಜಗನ್ನಾಥ್ ಜೊತೆ ಸೇರಿ ಪೂರಿ ಕನೆಕ್ಟ್ಸ್ ಹೆಸರಿನಲ್ಲಿ ಸಿನಿಮಾಗಳನ್ನು ಮಾಡುತ್ತಿದ್ದಾರೆ.
ಆದ್ರೆ ಪೂರಿ ಜಗನ್ನಾಥ್ ಮತ್ತು ಚಾರ್ಮಿ ನಡುವೆ ಏನೋ ಸಂಬಂಧವಿದೆ. ಹೀಗಾಗಿಯೇ ಚಾರ್ಮಿ ಇನ್ನೂ ಮದುವೆಯಾಗಿಲ್ಲ ಎಂಬ ಊಹಾಪೋಹಗಳು ಸೋಶಿಯನ್ ಮಿಡಿಯಾದಲ್ಲಿ ಹರಿದಾಡುತ್ತಿವೆ.
ಈ ವದಂತಿಗಳ ಬಗ್ಗೆ ನಿರ್ದೇಶಕ ಪೂರಿ ಜಗನ್ನಾಥ್ ಪ್ರತಿಕ್ರಿಯೆ ನೀಡಿದ್ದು, ಚಾರ್ಮಿ ನನಗೆ 13 ವರ್ಷಗಳಿಂದ ಪರಿಚಯ. ದಶಕಗಳಿಂದ ಅವರೊಂದಿಗೆ ಕೆಲಸ ಮಾಡುತ್ತಿದ್ದೇನೆ.

ಚಾರ್ಮಿಗೂ ನನಗೂ ಏನೋ ಸಂಬಂಧವಿದೆ ಎಂಬಂತೆ ಎಲ್ಲರೂ ಮಾತನಾಡುತ್ತಿದ್ದಾರೆ. ಆಕೆ ಇನ್ನೂ ಯಂಗ್ ಆಗಿರುವುದೇ ಇದಕ್ಕೆ ಕಾರಣ.
ಅದೇ ಚಾರ್ಮಿ 50 ವರ್ಷದವಳಾಗಿದ್ದರೇ ಈ ರೀತಿಯ ಮಾತುಗಳು ಬರುತ್ತಲೇ ಇರಲಿಲ್ಲ. ಇಲ್ಲಾ ಬೇರೆಯವರೊಂದಿಗೆ ಮದುವೆಯಾಗಿದ್ದರೂ ಈ ರೀತಿಯ ವದಂತಿಗಳು ಬರುತ್ತಿರಲಿಲ್ಲ.
ಆದ್ರೂ ನಾವಿಬ್ಬರೂ ಒಂದೇ ಇಂಡಸ್ಟ್ರೀಯಲ್ಲಿ ಇರುವುದು, ಎಷ್ಟೋ ವರ್ಷಗಳಿಂದ ಟ್ರಾವೆಲ್ ಮಾಡುತ್ತಿರುವುದರಿಂದ ಇಂತಹ ಮಾತುಗಳು ಬರುತ್ತಿವೆ.
ಒಂದು ವೇಳೆ ಅಫೈರ್ ಇದ್ದರೂ ಅದು ತುಂಬಾ ದಿನ ಇರೋದಿಲ್ಲ. ಆಕರ್ಷಣೆ ಅನ್ನೋದು ಕೆಲವು ದಿನಗಳು ಮಾತ್ರ ಇರುತ್ತದೆ. ಸ್ನೇಹವೇ ಶಾಶ್ವತ, ನಾವಿಬ್ಬರೂ ಒಳ್ಳೆಯ ಫ್ರೆಂಡ್ಸ್ ಎಂದು ಪೂರಿ ಜಗನ್ನಾಥ್ ಹೇಳಿದ್ದಾರೆ.








