Chamarajanagar | ಕಸಾಯಿಖಾನೆಗೆ ಅಕ್ರಮ ಜಾನುವಾರು ಸಾಗಾಟ – 50ಕ್ಕೂ ಹೆಚ್ಚು ಹಸು ರಕ್ಷಣೆ
ಚಾಮರಾಜನಗರ : ತಾಲೂಕಿನ ಬಾಣಳ್ಳಿ ಸಮೀಪ ಕಸಾಯಿಖಾನೆಗೆ ಅಕ್ರಮವಾಗಿ ಜಾನುವಾರು ಸಾಗಾಟ ನಡೆಸುತ್ತಿದ್ದವರನ್ನು ಬಂಧಿಸಲಾಗಿದೆ.
ಅಕ್ರಮ ಜಾನುವಾರು ಸಾಗಾಟದ ಖಚಿತ ಮಾಹಿತಿ ಮೇರೆಗೆ ಪಿಎಸ್ಐ ಹನುಮಂತ ಉಪ್ಪಾರ್ ನೇತೃತ್ವದ ತಂಡ ದಾಳಿ ನಡೆಸಿ 50 ಕ್ಕೂ ಹೆಚ್ಚು ಜಾನುವಾರುಗಳನ್ನು ರಕ್ಷಿಸಿ ನಾಲ್ವರನ್ನು ವಶಕ್ಕೆ ಪಡೆದಿದ್ದಾರೆ.

ಎರಡು ಕ್ಯಾಂಟರ್ ಗಳನ್ನೂ ವಶಪಡಿಸಿಕೊಂಡಿದ್ದು ಸಂತೇಮರಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಪ್ರಕರಣ ದಾಖಲಾಗಿದೆ. Chamarajanagar Illegal transportation of cattle to slaughter house saaksha tv








