Belgaum | ಅಮಾನವೀಯ ಘಟನೆ – ಮಾನಸಿಕ ಅಸ್ವಸ್ಥ ಬಲಿ!
ಕಂಬಕ್ಕೆ ಕಟ್ಟಿಹಾಕಿ ಮಾನಸಿಕ ಅಸ್ವಸ್ಥನ ಮೇಲೆ ಹಲ್ಲೆ
ಬೆಳಗಾವಿಯ ಬಸವನಕುಡಚಿ ಗ್ರಾಮದಲ್ಲಿ ಘಟನೆ
ಹಲ್ಲೆಯಿಂದಾಗಿ ವಿಶಾಲ್ ಕಲ್ಲಪ್ಪಾ ಪಟಾಯಿ ಸಾವು
ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
ಬೆಳಗಾವಿ : ಕುಂದಾನಗರಿ ಬೆಳಗಾವಿಯಲ್ಲಿ ಅಮಾನವೀಯ ಘಟನೆ ನಡೆದಿದ್ದು, ಮಾನಸಿಕ ಅಸ್ವಸ್ಥ ವ್ಯಕ್ತಿಯನ್ನು ಕಂಬಕ್ಕೆ ಕಟ್ಟಿಹಾಕಿ ಹಲ್ಲೆ ಮಾಡಿರುವ ಘಟನೆ ಬಸವನಕುಡಚಿ ಗ್ರಾಮದಲ್ಲಿ ನಡದಿದೆ.
ಗಾಂಧಿ ಗಲ್ಲಿಯ ನಿವಾಸಿ ವಿಶಾಲ್ ಕಲ್ಲಪಾ ಪಟಾಯಿ ಎಂಬುವವರನ್ನು ಕಟ್ಟಿ ಹಾಕಿ ಹಲ್ಲೆ ನಡೆಸಲಾಗಿದ್ದು, ಅವರು ಸಾವನ್ನಪ್ಪಿದ್ದಾರೆ.
ವಿಶಾಲ್ ಕಲ್ಲಪ್ಪಾ ಪಟಾಯಿ ಗ್ರಾಮಗಳಲ್ಲಿ ಓಡಾಡುತ್ತಾ ಸಾರ್ವಜನಿಕರಿಗೆ ತೊಂದರೆ ಕೊಡುತ್ತಿದ್ದರಂತೆ. ಇದಲ್ಲದೇ ನಾಲ್ಕು ದಿನಗಳ ಹಿಂದೆ ಕೆಲವರ ಮೇಲೆ ಹಲ್ಲೆ ನಡೆಸಿದ್ದನಂತೆ.

ಇದರೊಂದ ರೋಸಿ ಹೋದ ಗ್ರಾಮಸ್ಥರು, ವಿಶಾಲ್ ಕಲ್ಲಪ್ಪಾ ಪಟಾಯಿ ಅವರನ್ನು ಮರಕ್ಕೆ ಕಟ್ಟಿಹಾಕಿ ಮನಬಂದಂತೆ ಥಳಿಸಿದ್ದಾರೆ.
ಇದರಿಂದ ವಿಶಾಲ್ ಗಂಭೀರವಾಗಿ ಗಾಯಗೊಂಡಿದ್ದು, ಬೆಳಗಾವಿ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿತ್ತು.
ಆದ್ರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ವಿಶಾಲ್ ಉಸಿರು ನಿಲ್ಲಿಸಿದ್ದಾರೆ. ಈ ಕುರಿತು ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.








