ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾವಣೆಗೆ ಒಂದಲ್ಲ ನಾಲ್ಕು ಅವಕಾಶಗಳು
ಇತ್ತೀಚಿನ ವರ್ಷಗಳಲ್ಲಿ ದೇಶದ ಚುನಾವಣಾ ಆಯೋಗ ಹೊಸ ಹೊಸ ಪ್ರಯೋಗಳ ಮೂಲಕ ಅನೇಕ ಸುಧಾರಣೆಗಳನ್ನು ಜಾರಿ ಮಾಡುತ್ತಿದೆ.
ಇದೀಗ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿಕೊಳ್ಳಲು ಈ ಮೊದಲು ವರ್ಷಕ್ಕೊಮ್ಮೆ ಇದ್ದ ಅವಕಾಶದ ಬದಲು ಮತದಾರರಿಗೆ ನಾಲ್ಕು ಅವಕಾಶವನ್ನು ನೀಡಿದೆ.
ತ್ರೈಮಾಸಿಕ ಮೊದಲ ತಿಂಗಳ ಮೊದಲ ದಿನಾಂಕದಂದು ಮತದಾರನಿಗೆ ಹದಿನೆಂಟು ತಿಂಗಳು ತುಂಬಿದರೆ ಮತದಾರರ ಪಟ್ಟಿಯಲ್ಲಿ ತನ್ನ ಹೆಸರನ್ನು ಸೇರ್ಪಡೆ ಮಾಡಬಹುದಾಗಿದೆ.
ಅಂದರೆ ಜನವರಿ, ಏಪ್ರಿಲ್ , ಜುಲೈ ಮತ್ತು ಅಕ್ಟೋಬರ್ ತಿಂಗಳ ಒಂದನೇ ದಿನಾಂಕಕ್ಕೆ ಯಾರೆಲ್ಲ ಹದಿನೇಟು ವರ್ಷ ತುಂಬಿದರೆ ತಮ್ಮ ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಬಹುದಾಗಿದೆ.
ಮುಂದಿನ ಮತದಾರರರ ಪಟ್ಟಿ ಪರಿಶೀಲನೆಯ ನಂತರ ನಿಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾಗಿರುವುದನ್ನು ಖಚಿತಪಡಿಸಿಕೊಳ್ಳಿ .
ಯಾವ ರೀತಿ ಸೇರ್ಪಡೆ ಸಾಧ್ಯ ವೋಟರ್ ಹೆಲ್ಪ್ ಲೈನ್ ಆಪ್ ಡೌನ್ಲೋಡ್ ಮಾಡಿ, ಇದರ ಮೂಲಕ ಅಥವಾ ಆನ್ ಲೈನ್ www.nvsp.in ಲಾಗಿನ್ ಆಗಿ ನಿಮ್ಮ ನಿಮ್ಮ ವಿವರ ಸಲ್ಲಿಸಬಹುದು. ಒಂದು ವೇಳೆ ಕಷ್ಟ ಆದರೆ ನಿಮ್ಮ ನಿಮ್ಮ ಬೂಟ್ ಮಟ್ಟದ ಅಧಿಕಾರಿಗಳನ್ನು ಸಂಪರ್ಕಿಸಿ.

ನಿಮಗೆ ಬೇಕಾದ ಅರ್ಜಿಯ ನಮೂನೆಗಳನ್ನು ನೀವೇ ಆಯ್ಕೆ ಮಾಡಬೇಕು
ನಮೂನೆ 6 – ಹೊಸ ಮತದಾರರ ನೋಂದಣಿ
ಜನವರಿ 01 , ಏಪ್ರಿಲ್ 01 ,ಜುಲೈ 01 ,ಅಕ್ಟೋಬರ್ 01
ನಮೂನೆ 6 ಎ : ಅನಿವಾಸಿ ಭಾರತೀಯರ ಮತದಾರರ ಪಟ್ಟಿ
ನಮೂನೆ 6 ಬಿ – ಆಧಾರ್ ಸಂಖ್ಯೆಯನ್ನು ಮತದಾರರ ಗುರುತಿನ ಚೀಟಿಯೊಂದಿಗೆ ಲಿಂಕ್ ಮಾಡಲು
ನಮೂನೆ 7 – ಮತದಾರರ ಪಟ್ಟಿಯಿಂದ ಹೆಸರನ್ನು ತೆಗಯಲು
ನಮೂನೆ 8 – ಮತದಾರರ ಪಟ್ಟಿಯಲ್ಲಿನ ಮಾಹಿತಿಗಳ ತಿದ್ದುಪಡಿಗೆ
ವಿಶೇಷ ಸೂಚನೆ : ಆಧಾರ್ ಸಂಖ್ಯೆಯನ್ನು ಮತದಾರರ ಗುರುತಿನ ಚೀಟಿಯೊಂದಿಗೆ ಲಿಂಕ್ ಮಾಡಲು ಆಗಸ್ಟ್ ೧ ರಿಂದ ಅನ್ವಯವಾಗಲಿದೆ.








