Chitradurga | ಸ್ವಾಮೀಜಿ ವಿರುದ್ಧ ಅತ್ಯಾಚಾರ ಆರೋಪ : ಎಲ್.ಬಿ.ರಾಜಶೇಖರ್ ಹೇಳಿದ್ದೇನು ?
ಚಿತ್ರದುರ್ಗ : ಪ್ರತಿಷ್ಠಿತ ಮಠದ ಸ್ವಾಮೀಜಿ ವಿರುದ್ಧ ಅತ್ಯಾಚಾರ ಆರೋಪ ಕೇಳಿಬರುತ್ತಿದ್ದು, ಈ ಬಗ್ಗೆ ವೀರಶೈವ ಅಧ್ಯಕ್ಷರು ಎಲ್.ಬಿ.ರಾಜಶೇಖರ್ ಪ್ರತಿಕ್ರಿಯೆ ನೀಡಿದ್ದಾರೆ.
ಚಿತ್ರದುರ್ಗದಲ್ಲಿ ಮಾತನಾಡಿದ ಎಲ್.ಬಿ.ರಾಜಶೇಖರ್, ಮಾಧ್ಯಮಗಳಲ್ಲಿ ಬಂದ ವಿಷಯ ಸ್ವಾಮೀಜಿಗಳ ತೇಜೋವಧೆಗೆ ಕಾರವಾಗಿದೆ. ಸ್ವಾಮೀಜಿಗಳಿಗೆ ಹಿತ ಶತೃಗಳಿದ್ದು ಅವರು ಈ ಕೆಲಸ ಮಾಡುತ್ತಿದ್ದಾರೆ. ಚಿತ್ರದುರ್ಗದ ಜನತೆ ಹಾಗೂ ನಮ್ಮ ಸಮಾಜ ಇದನ್ನ ಖಂಡಿಸುತ್ತೇವೆ ಎಂದು ಹೇಳಿದರು.

ಏನೇ ಬಂದರು ಇದನ್ನ ಎದುರಿಸುವ ಶಕ್ತಿ ನೀಡಲಿ. ಆಡಳಿತಾಧಿಕಾರಿ ಹಾಗೂ ಸ್ವಾಮೀಜಿ ನಡುವೆ ಈ ಮನಸ್ತಾಪ ಆಗಿದೆ. ಆತನೇ ಈ ಕೆಲಸ ಮಾಡಿದ್ದಾನೆ. ಮಕ್ಕಳನ್ನ ಕರೆದುಕೊಂಡು ಹೋಗಿ ಮೈಸೂರಿನಲ್ಲಿ ಪ್ರಕರಣ ದಾಖಲಿಸಿದ್ದಾರೆ. ಮುರುಘಾ ಶರಣರು ಸೇರಿ 5 ಮಂದಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಇದು ಎರಡು ವರ್ಷದಿಂದ ಷಡ್ಯಂತ್ರ ನಡೆಯುತ್ತಿದೆ. ನಾನು ಯಾವುದೇ ತಪ್ಪು ಮಾಡಿಲ್ಲ, ಏನೇ ಬಂದರು ಎದುರಿಸೋಣ ಎಂದು ಸಲಹ ಸಮಿತಿಯಲ್ಲಿ ಹೇಳಿದ್ದಾರೆ. ಆಡಳಿತಾಧಿಕಾರಿಗೆ ಹೆಚ್ಚಿನ ಅಧಿಕಾರ ನೀಡುವ ವಿಚಾರವಾಗಿ ವೈಮನಸ್ಸು ಆಗಿದೆ ಎಂದು ಹೇಳಿದ್ದಾರೆ.








