Actor Chandan | ನಟನ ಹೋಟೆಲ್ ನಲ್ಲಿ ಕಳ್ಳತನ
ನಟ ಚಂದನ್ ಹೋಟೆಲ್ ನಲ್ಲಿ ಕಳ್ಳತನ
ಬೆಂಗಳೂರಿನ ಸಹಕಾರ ನಗರದಲ್ಲಿ ಹೋಟೆಲ್
ಶನಿವಾರ ರಾತ್ರಿ ಹೋಟೆಲ್ ನಲ್ಲಿ ಕಳ್ಳತನ
ಕೋಡಿಗೆಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲು
ಮೊನ್ನೆ ಮೊನ್ನೆಯಷ್ಟೆ ವಿವಾದದಲ್ಲಿ ಸಿಲುಕಿದ್ದ ನಟ ಚಂದನ್ ಕುಮಾರ್ ಅವರ ಹೋಟೆಲ್ ನಲ್ಲಿ ಕಳ್ಳತನವಾಗಿದೆ ಎಂದು ವರದಿಯಾಗಿದೆ.
ಚಂದನ್ ಕುಮಾರ್ ಕಳೆದ ಎರಡು ವರ್ಷಗಳ ಹಿಂದೆ ಬೆಂಗಳೂರಿನ ಸಹಕಾರ ನಗರದಲ್ಲಿ ಬಿರಿಯಾನಿ ಹೋಟೆಲ್ ತೆರೆದಿದ್ದರು.
ಈ ಹೋಟೆಲ್ ಗೆ ಸಿನಿಮಾ, ರಾಜಕೀಯ ಗಣ್ಯರು ಭೇಟಿ ನೀಡುತ್ತಿರುತ್ತಾರೆ.

ಆದ್ರೆ ಶನಿವಾರ ರಾತ್ರಿ ಹೋಟೆಲ್ ನಲ್ಲಿ ಕಳ್ಳತನವಾಗಿದೆ. ಚಂದನ್ ಅವರ ಹೋಟೆಲ್ ಸೇರಿದಂತೆ ನಾಲ್ಕೈದು ಅಂಗಡಿಗಳಗೆ ಖದೀಮರು ಕನ್ನಾ ಹಾಕಿದ್ದಾರೆ.
ಈ ಎಲ್ಲಾ ದೃಶ್ಯಾವಳಿಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ
ಇನ್ನು ಕಳ್ಳತನ ಸಂಬಂಧ ಚಂದನ್ ಕೋಡಿಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಪೊಲೀಸರು ಸಿಸಿ ಟಿವಿ ಕ್ಯಾಮೆರಾ ದೃಶ್ಯಾವಳಿಗಳ ಆಧಾರದಲ್ಲಿ ತನಿಖೆ ನಡೆಸುತ್ತಿದ್ದಾರೆ. thept in actor chandan hotels








