Redmi Note 11 SE Xiaomi | 13,499 ರೂ.ಗೆ ರೆಡ್ಮಿಯ ಹೊಸ ಸ್ಮಾರ್ಟ್ಫೋನ್ !
Redmi Note 11 SE Xiaomi ರಿಲೀಸ್
64 ಮೆಗಾಫಿಕ್ಸೆಲ್ ನ ವೈಡ್ ಆಂಗಲ್ ಕ್ಯಾಮೆರಾ
ಬಲಿಷ್ಠ ಬ್ಯಾಟರಿ, ಫಾಸ್ಟ್ ಚಾರ್ಜರ್ ಸೌಲಭ್ಯ
13,499 ರೂಪಾಯಿಗಳಲ್ಲಿ ಮೊಬೈಲ್ ಲಭ್ಯ
ಶವೋಮಿ ಕಂಪನಿ ಭಾರತದಲ್ಲಿ ತನ್ನ ಹೊಸ ಬಹುನಿರೀಕ್ಷಿತ ರೆಡ್ಮಿ ನೋಟ್ 11 ಎಸ್ ಇ ಮೊಬೈಲ್ ಅನ್ನು ಅನಾವರಣ ಮಾಡಿದೆ.
ಈ ಸ್ಮಾರ್ಟ್ ಫೋನ್ ನಲ್ಲಿ ಮೀಡಿಯಾಟೆಕ್ ಪ್ರೊಸೆಸರ್ ಅಳವಡಿಸಲಾಗಿದ್ದು, 64 ಮೆಗಾಫಿಕ್ಸೆಲ್ ನ ವೈಡ್ ಆಂಗಲ್ ಕ್ಯಾಮೆರಾ ನೀಡಲಾಗಿದೆ. ಬಲಿಷ್ಠವಾದ ಬ್ಯಾಟರಿ, ಫಾಸ್ಟ್ ಚಾರ್ಜರ್ ಸೌಲಭ್ಯವೂ ಇದೆ..
ರೆಡ್ಮಿ ನೋಟ್ 11 ಎಸ್ ಇ ಸ್ಮಾರ್ಟ್ ಫೋನ್ 6 ಜಿಬಿ ರ್ಯಾಮ್, 64 ಜಿಬಿ ಸ್ಟೋರೇಜ್ ಹೊಂದಿದೆ. ಇದರ ಬೆಲೆ 13,499 ರುಪಾಯಿ ಮಾತ್ರ.
ಆಗಸ್ಟ್ 31 ರಿಂದ ಫ್ಲಿಪ್ ಕಾರ್ಟ್ ಮತ್ತು ಎಂ ಐ.ಕಾಮ್ ಮೂಲಕ ಸೇಲ್ ಕಾಣಲಿದೆ. ಕಪ್ಪು, ಬಿಳಿ ಮತ್ತು ನೀಲಿ ಬಣ್ಣಗಳ ಆಯ್ಕೆಯಲ್ಲಿ ಖರೀದಿಗೆ ಸಿಗಲಿದೆ.

ಇದು 1,080 * 2,400 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ 6.43 ಇಂಚಿನ ಫುಲ್ ಹೆಚ್ ಡಿ ಪ್ಲಸ್ ಸೂಪರ್ ಅಮೋಲೆಡ್ ಡಿಸ್ ಪ್ಲೇ ಹೊಂದಿರಲಿದೆ.
ಆಂಡ್ರಾಯ್ಡ್ 11 ಬೆಂಬಲದೊಂದಿಗೆ ಕಾರ್ಯನಿರ್ವಹಿಸುವ ಈ ಮೊಬೈಲ್ ಕ್ವಾಡ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ.
ಇದರಲ್ಲಿ ಪ್ರಮುಖ ಕ್ಯಾಮೆರಾಗೆ 64 ಮೆಗಾಪಿಕ್ಸೆಲ್ ಸೆನ್ಸಾರ್ ನೀಡಲಾಗಿದೆ. ಎರಡನೇ ಕ್ಯಾಮೆರಾ 8 ಮೆಗಾ ಪಿಕ್ಸೆಲ್ ಅಲ್ಟ್ರಾ ವೈಡ್ ಅಂಗಲ್ ಲೆನ್ಸ್, ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಮಾಕ್ರೋ ಲೆನ್ಸ್ ಆಗಿದೆ.







