Mysure | ಅಮಾವಾಸ್ಯೆ ಹಿನ್ನೆಲೆಯಲ್ಲಿ ಗಜಪಡೆ ತಾಲೀಮು ರದ್ದು
ಮೈಸೂರು: ವಿಶ್ವವಿಖ್ಯಾತ ದಸರಾ ಮಹೋತ್ಸವಕ್ಕೆ ಕ್ಷಣಗಣನೆ ಆರಂಭವಾಗಿದೆ.
ಈ ನಡುವೆ ಇಂದು ಅಮಾವಾಸ್ಯೆ ಹಿನ್ನೆಲೆಯಲ್ಲಿ ಇಂದು ದಸರಾ ಗಜಪಡೆಗೆ ತಾಲೀಮು ರದ್ದು ಮಾಡಲಾಗಿದೆ.
ದಸರಾ ಪ್ರಯುಕ್ತ ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ಆನೆಗಳ ತಾಲೀಮು ನಡೆಯುತ್ತಿತ್ತು.
ಆದ್ರೆ ಇಂದು ಅಮಾವಾಸ್ಯೆ ಹಿನ್ನೆಲೆಯಲ್ಲಿ ಗಜಪಡೆಗೆ ವಿಶ್ರಾಂತಿ ನೀಡಲಾಗಿದೆ.

ಪ್ರತಿ ಅಮಾವಾಸ್ಯೆಯ ಸಮಯದಲ್ಲಿ ಆನೆಗಳಿಗೆ ತಾಲೀಮು ರದ್ದು ಮಾಡಲಾಗುತ್ತದೆ.
ಅದರಂತೆ ಇಂದು ಅಮಾವಾಸ್ಯೆ ಹಿನ್ನೆಲೆಯಲ್ಲಿ ಗಜಪಡೆಗೆ ವಿಶ್ರಾಂತಿ ನೀಡಲಾಗಿದೆ.
ಅಮಾವಾಸ್ಯೆ ಕಾರಣ ಅರಮನೆಯಿಂದ ಗಜಪಡೆ ಹೊರಕ್ಕೆ ಕರೆದೊಯ್ದರೆ ತೊಂದರೆ ಆಗಬಹುದೆಂಬ ನಂಭಿಕೆ ಇದೆ.
ಹೀಗಾಗಿ ಮುನ್ನೆಚ್ಚರಿಕೆಯಾಗಿ ಪ್ರತಿ ಅಮಾವಾಸ್ಯೆಯಂದು ಆನೆಗಳ ತಾಲೀಮು ರದ್ದು ಮಾಡಲಾಗುತ್ತದೆ. Mysore Gajapade training








