Bangalore | ಮೋಸ್ಟ್ ವಾಂಟೆಡ್ ಕಳ್ಳನನ್ನು ಬಂಧಿಸಿದ ಪೊಲೀಸರು
ಬೆಂಗಳೂರು : ನಾಲ್ಕು ವರ್ಷಗಳಿಂದ ಪೊಲೀಸರಿಗೆ ಚಳ್ಳೆ ಹಣ್ಣು ತಿನಿಸುತ್ತಿದ್ದ ಮೋಸ್ಟ್ ವಾಂಟೆಡ್ ಖತರ್ನಾಕ್ ಕಳ್ಳನನ್ನ ಅಶೋಕ್ ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಅಸೀಫ್ ಅಲಿಯಾಸ್ ಪಿಸ್ತೂಲ್ ಬಂಧಿರ ಆರೋಪಿಯಾಗಿದ್ದಾನೆ.
ನಾಲ್ಕು ವರ್ಷಗಳಿಂದಲೂ ಅಫೆನ್ಸ್ ಮಾಡಿ ತಲೆಮರೆಸಿಕೊಂಡಿದ್ದ ಅಸೀಫ್ ಅಲಿಯಾಸ್ ಪಿಸ್ತೂಲ್, ಕಳ್ಳತನ, ಸುಲಿಗೆ, ಮನೆಗಳ್ಳತನ, ಸರಗಳ್ಳತನ ಕೃತ್ಯಗಳಲ್ಲಿ ಭಾಗಿಯಾಗಿದ್ದರು.

ಈತ ಮೇಲೆ ಮೂವತ್ತಕ್ಕೂ ಹೆಚ್ಚು ಕೇಸ್ ಗಳಿವೆ. ಇಷ್ಟಿದ್ದರೂ ನಾಲ್ಕು ವರ್ಷದಿಂದ ಪೊಲೀಸರಿಗೆ ಚಳ್ಳೆ ಹಣ್ಣು ತಿನಿಸುತ್ತಿದ್ದ. ಆದ್ರೆ ಈ ಖತರ್ನಾಕ್ ಕಳ್ಳನನ್ನು ಅಶೋಕ ನಗರ ಪೊಲೀಸರು ಬಂಧಿಸಿದ್ದಾರೆ.
ಪತ್ನಿಯ ಜೊತೆ ಗಲಾಟೆ ಮಾಡಿದ್ದ ಅಸೀಫ್ ಮಗಳನ್ನು ನೋಡಲು ಶಾಲೆಯ ಬಳಿಗೆ ಹೋಗಿದ್ದಾನೆ.
ಇದರ ಮಾಹಿತಿ ಪಡೆದಿದ್ದ ಪೊಲೀಸರು ಸ್ಕೂಲ್ ವ್ಯಾನ್ ನಲ್ಲಿ ಹೋಗಿ ಆರೋಪಿಯನ್ನು ಬಂಧಿಸಿದ್ದಾರೆ.








