BJP | ಸಿದ್ದರಾಮಯ್ಯ ತಿಕ್ಕಲು ನಾಯಕ
ಬೆಂಗಳೂರು : ಮಾಜಿ ಸಿಎಂ ಸಿದ್ದರಾಮಯ್ಯ ಅವರ “ಪ್ರಧಾನಿ ನರೇಂದ್ರ ಮೋದಿ ಪುಕ್ಕಲು ನಾಯಕ “ ಎಂಬ ಹೇಳಿಕೆಗೆ ವಿಧಾನಪರಿಷತ್ ಸದಸ್ಯ ಚಲವಾದಿ ನಾರಾಯಣಸ್ವಾಮಿ ತಿರುಗೇಟು ನೀಡಿದ್ದಾರೆ.
ವಿಧಾನಸೌಧದ ಬಳಿ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ಇತ್ತೀಚೆಗೆ ರಾಜಕೀಯ ನಾಯಕರನ್ನು ವೈಯಕ್ತಿಕವಾಗಿ ನಿಂದಿಸುವ ಕೆಲಸ ಮಾಡುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರನ್ನು ಪುಕ್ಕಲು ನಾಯಕರು ಎಂದಿದ್ದಾರೆ. ಹಾಗಾಗಿ ಸಿದ್ದರಾಮಯ್ಯ ಅವರನ್ನು ನಾವು ತಿಕ್ಕಲು ನಾಯಕರು ಎನ್ನುತ್ತೇವೆ. ತಿಕ್ಕಲು ಅಂದರೆ ಹುಚ್ಚು ಅಂತ. ಅವರು ಕೀಳು ಅಭಿರುಚಿ ಹೇಳಿಕೆ ನೀಡುತ್ತಿದ್ದಾರೆ. ಇದು ಅವರ ದಿವಾಳಿತನ ತೋರಿಸುತ್ತದೆ ಎಂದು ವಾಗ್ದಾಳಿ ನಡೆಸಿದರು.

ಇದೇ ವೇಳೆ ಕಟೀಲ್ ಜೋಕರ್ ಎಂಬ ಹೇಳಿಕೆಗೆ ಟಾಂಗ್ ನೀಡಿದ ನಾರಾಯಣಸ್ವಾಮಿ, ಕಟೀಲ್ ಅವರಿಗೆ ಜೋಕರ್ ಅಂದರೆ ಏನು ಅಂತ ಗೊತ್ತಿಲ್ಲ. ಯಾಕೆಂದರೆ ಸಿದ್ದರಾಮಯ್ಯ ತರಹ ಅವರಿಗೆ ಇಸ್ಪೀಟ್ ಬರಲ್ಲ. ಸಿದ್ದರಾಮಯ್ಯ ಇಸ್ಪೀಟ್ ಗಿರಾಕಿ ಎಂದು ಕಿಡಿಕಾರಿದ್ದಾರೆ.








