Team India – ಬಾಂಗ್ಲಾ ಪ್ರವಾಸಕ್ಕೆ ಟೀಂ ಇಂಡಿಯಾ ಪ್ರಕಟ
ಡಿಸೆಂಬರ್ ನಲ್ಲಿ ಟೀಂ ಇಂಡಿಯಾ ಬಾಂಗ್ಲಾದೇಶದ ಪ್ರವಾಸ ಕೈಗೊಳ್ಳಲಿದ್ದು, ಟೆಸ್ಟ್ ಹಾಗೂ ಏಕದಿನ ಸರಣಿಯಲ್ಲಿ ಭಾಗಿಯಾಗಲಿದೆ.
ಈ ಸರಣಿಗೆ ಆಯ್ಕೆ ಸಮಿತಿ ಇಂದು ಭಾರತ ಕ್ರಿಕೆಟ್ ತಂಡವನ್ನು ಪ್ರಕಟ ಮಾಡಿದೆ. ರೋಹಿತ್ ಶರ್ಮಾ ಟೀಂ ಇಂಡಿಯಾವನ್ನು ಲೀಡ್ ಮಾಡಲಿದ್ದಾರೆ.
ಕೆ.ಎಲ್ ರಾಹುಲ್ ತಂಡದ ಉಪನಾಯಕರಾಗಿದ್ದಾರೆ. ಈ ಸರಣಿಯಲ್ಲಿ ಭಾರತ ಕ್ರಿಕೆಟ್ ತಂಡ ಮೂರು ಏಕದಿನ ಪಂದ್ಯ ಹಾಗೂ ಎರಡು ಟೆಸ್ಟ್ ಪಂದ್ಯಗಳನ್ನಾಡಲಿದೆ.
ಈ ಸರಣಿಯಿಂದ ಹಾರ್ದಿಕ್ ಪಾಂಡ್ಯ, ಸೂರ್ಯಕುಮಾರ್ ಯಾದವ್, ದಿನೇಶ್ ಕಾರ್ತಿಕ್ ಗೆ ವಿಶ್ರಾಂತಿ ನೀಡಲಾಗಿದೆ. ಮತ್ತೊಂದು ಕಡೆ ಇಂಜೂರಿ ಸಮಸ್ಯೆಯಿಂದ ತಂಡದಿಂದ ದೂರವಿದ್ದ ರವೀಂದ್ರ ಜಡೇಜಾ ತಂಡಕ್ಕೆ ವಾಪಸ್ ಆಗಿದ್ದಾರೆ.
ಭಾರತ ಏಕದಿನ ತಂಡ ಹೀಗಿದೆ
ರೋಹಿತ್ ಶರ್ಮಾ, ಕೆ.ಎಲ್ ರಾಹುಲ್, ವಿರಾಟ್ ಕೊಹ್ಲಿ, ಇಶಾನ್ ಕಿಶಾನ್, ರಜತ್ ಪಟಿದಾರ್, ರಾಹುಲ್ ತ್ರಿಪಾಠಿ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ವಾಷಿಂಗ್ ಟನ್ ಸುಂದರ್, ಮೊಹಮ್ಮದ್ ಶಮಿ, ಮೊಹ್ಮದ್ ಸಿರಾಜ್, ಯಶ್ ದಯಾಳ್, ದೀಪಕ್ ಚಹಾರ್, ಶರ್ದೂಲ್ ಠಾಕೂರ್, ಶಿಖರ್ ಧವನ್, ರಿಷಬ್ ಪಂತ್
ಟೆಸ್ಟ್ ತಂಡದಲ್ಲಿ ಚೇತೇಶ್ವರ ಪೂಜಾರಿ ಸ್ಥಾನ ಉಳಿಸಿಕೊಂಡಿದ್ದರೇ ಅಜಿಂಕ್ಯಾ ರಹಾನೆ ಮತ್ತೆ ಸ್ಥಾನ ಕಳೆದುಕೊಂಡಿದ್ದಾರೆ. ಇತ್ತ ಹನುಮ ವಿಹಾರಿಗೂ ಕೋಕ್ ನೀಡಲಾಗಿದೆ.
ಇನ್ನುಳಿದಂತೆ ಭಾರತ ಟೆಸ್ಟ್ ಸ್ಕ್ವಾಡ್ ಹೀಗಿದೆ
ರೋಹಿತ್ ಶರ್ಮಾ, ಕೆ.ಎಲ್ ರಾಹುಲ್, ಶುಭ್ ಮನ್ ಗಿಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ರಿಷಬ್ ಪಂತ್, ಕೆ.ಎಸ್.ಭರತ್, ಆರ್ ಅಶ್ವಿನ್, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಮೊಹಮ್ಮದ್ ಶಮಿ, ಮೊಹ್ಮದ್ ಸಿರಾಜ್, ಉಮೇಶ್ ಯಾದವ್, ಶರ್ದೂಲ್ ಠಾಕೂರ್.