Rohit Sharma | ರೋಹಿತ್ ಶರ್ಮಾ ಬಲಗೈಗೆ ಪೆಟ್ಟು – ಟೀಂ ಇಂಡಿಯಾಗೆ ಶಾಕ್
ಟಿ 20 ವಿಶ್ವಕಪ್ ನಲ್ಲಿ ಸೆಮೀಸ್ ಪ್ರವೇಶಿಸಿರುವ ಟೀಂ ಇಂಡಿಯಾ ನವೆಂಬರ್ 10 ರಂದು ಇಂಗ್ಲೆಂಡ್ ವಿರುದ್ಧ ಸೆಣಸಾಡಲಿದೆ.
ಈ ನಡುವೆ ಟೀಂ ಇಂಡಿಯಾಗೆ ಆಘಾತ ಎದುರಾಗಿದ್ದು, ಭಾರತದ ನಾಯಕ ರೋಹಿತ್ ಶರ್ಮಾ ಬಲಗೈಗೆ ಬಲವಾದ ಪೆಟ್ಟು ಮಾಡಿಕೊಂಡಿದ್ದಾರೆ.
ರೋಹಿತ್ ಶರ್ಮಾ ನೆಟ್ ಪ್ರಾಕ್ಟೀಸ್ ಮಾಡುತ್ತಿದ್ದ ವೇಳೆಯಲ್ಲಿ ಬಲಗೈಗೆ ಬಲವಾದ ಪೆಟ್ಟು ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಸೆಮೀಸ್ ನಲ್ಲಿ ಟೀಂ ಇಂಡಿಯಾ, ಇಂಗ್ಲೆಂಡ್ ವಿರುದ್ಧ ಗುದ್ದಾಟ ನಡೆಸಲಿದೆ..

ಹೀಗಾಗಿ ನೆಟ್ ಪ್ರಾಕ್ಟೀಸ್ ಮಾಡುತ್ತಿದ್ದಾಗ ಪೆಟ್ಟು ಮಾಡಿಕೊಂಡಿದ್ದಾರೆ.
ಎಸ್. ರಘು ಅವರಿಂದ ಥ್ರೋಡೌನ್ ತೆಗೆದುಕೊಳ್ಳುತ್ತಿದ್ದಾಗ ಶಾರ್ಟ್ ಬಾಲ್ ಅವರ ಬಲಗೈಗೆ ಬಿದ್ದಿದೆ.
ಕೂಡಲೇ ಅವರು ನೆಟ್ ತೊರೆದಿದ್ದಾರೆ.
ವೈದ್ಯಕೀಯ ತಂಡ ಪರಿಶೀಲನೆ ಮಾಡಿದ್ದು, ಯಾವುದೇ ಮುರಿತ ಕಂಡುಬಂದಿಲ್ಲ ಎಂದು ತಿಳಿಸಿದೆ.
ಆದ್ರೆ ಇಂಗ್ಲೆಂಡ್ ವಿರುದ್ಧದ ಸೆಮೀಸ್ ಪಂದ್ಯಕ್ಕಾಗಿ ರೋಹಿತ್ ಶರ್ಮಾ ನಾಯಕತ್ವ ಟೀಂ ಇಂಡಿಯಾಗೆ ಮುಖ್ಯವಾಗಿದೆ.








