E – Waste : ಆರ್ಕಿಡ್ಸ್ ಅಂತರಾಷ್ಟ್ರೀಯ ಶಾಲೆಯ ವತಿಯಿಂದ ಇ – ತ್ಯಾಜ್ಯ ಸಂಗ್ರಹ ಅಭಿಯಾನ
ಬೆಂಗಳೂರು : ವಿದ್ಯಾರ್ಥಿಗಳಲ್ಲಿ ಮರುಬಳಕೆ ಹಾಗೂ ಮಿತ ಬಳಕೆಯ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಆರ್ಕಿಡ್ಸ್ ಅಂತರಾಷ್ಟ್ರೀಯ ಶಾಲೆಯ ವತಿಯಿಂದ ತ್ಯಾಜ್ಯ ಸಂಗ್ರಹ ಅಭಿಯಾನವನ್ನ ಹಮ್ಮಿಕೊಳ್ಳಲಾಗಿತ್ತು..
ಬೆಂಗಳೂರಿನಲ್ಲಿ ಹಮ್ಮಿಕೊಳ್ಳಲಾಗಿದ್ದ ಈ ಅಭಿಯಾನದಲ್ಲಿ ದುರಸ್ಥಿಯಾಗದ ಎಲೆಕ್ಟ್ರಿಕ್ ಹಾಗೂ ಎಲೆಕ್ಟ್ರಿಕಲ್ ವಸ್ತುಗಳನ್ನು ಸಂಗ್ರಹಿಸಿ ಮರುಬಳಕೆ ಸಂಸ್ಥೆಯಾಗಿರುವ ಇ – ಪರಿಸರಕ್ಕೆ ಹಸ್ತಾಂತರಿಸಲಾಯ್ತು..
ಈ ವೇಳೆ ತ್ಯಾಜ್ಯ ಉತ್ಪನ್ನಗಳ ವಿಂಗಡಣೆ ಹಾಗೂ ಮರುಬಳಕೆಯ ಮಹತ್ವದ ಬಗ್ಗೆ ಇ – ಪರಿಸರದ ಪ್ರತಿನಿಧಿ ಪೂರ್ಣಿಮಾ ಅವರು ಜಾಲಹಳ್ಳಿ ಶಾಖೆಯ ಮಕ್ಕಳಿಗೆ ಅರಿವು ಮೂಡಿಸಿ ಮಾತನಾಡಿದರು..
ಈ ಅಭಿಯಾನದಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳು ಇ-ತ್ಯಾಜ್ಯ ವಸ್ತುಗಳಾದ ಹಳೆಯ ಲ್ಯಾಪ್ಟಾಪ್, ಕಂಪ್ಯೂಟರ್, ಟ್ಯಾಬ್ಗಳು, ಮೌಸ್, ಸ್ಪೀಕರ್ಗಳು, ಬ್ಯಾಟರಿಗಳು, ಪವರ್ಬ್ಯಾಂಕ್ಗಳು, ಚಾರ್ಜರ್ಗಳು, ಟಾರ್ಚ್, ಟಿವಿ, ಹೆಡ್ಫೋನ್ಗಳು, ಸಿಡಿ, ಡಿವಿಟಿಸೆಟ್, ವಿಸಿಆರ್.ಗಳು, ಗ್ಯಾಜೆಟ್ಗಳು ಹಾಗೂ ಹಳೆಯ ಮೊಬೈಲ್ಫೋನ್ಗಳನ್ನು ಮರುಬಳಕೆ ಸಂಸ್ಥೆಗೆ ನೀಡಿದರು.
ಇ-ತ್ಯಾಜ್ಯ ಸಂಗ್ರಹ ಅಭಿಯಾನವು ಮುಂಬೈ, ಪುಣೆ, ಹೈದಾರಾಬಾದ್ ಹಾಗೂ ಬೆಂಗಳೂರು ನಗರಗಳಲ್ಲಿರುವ ಆರ್ಕಿಡ್ಸ್ ಶಾಲೆಗಳಲ್ಲಿ ಸುಮಾರು ಒಂದುವಾರ ಕಾಲ ನಡೆಯಿತು.
ಬೆಂಗಳೂರಿನಲ್ಲೇ ಸುಮಾರು 300 ಕೆಜಿಯಷ್ಟು ಇ – ತ್ಯಾಜ್ಯವನ್ನು ಸಂಗ್ರಹಿಸಲಾಯಿತು.
ಈ ವೇಳೆ ಅಭಿಯಾನದಲ್ಲಿ ಭಾಗಿಯಾಗಿದ್ದ ಮಕ್ಕಳು , ಅಗತ್ಯವಿರುವಷ್ಟೇ ಗ್ಯಾಜೆಟ್ ಗಳನ್ನುಬಳಸಿ, ಅನಗತ್ಯ ಖರೀದಿಯನ್ನು ಮಾಡುವುದಿಲ್ಲವೆಂದು ಪ್ರತಿಜ್ಞೆ ಕೈಗೊಂಡರು.
ಗ್ಯಾಜೆಟ್ ಗಳು ರಿಪೇರಿಯಾಗದ ಸ್ಥಿತಿ ತಲುಪಿದಾಗ ಮರುಬಳಕೆ ಕೇಂದ್ರಕ್ಕೆ ನೀಡಲು ನಾಗರೀಕರನ್ನು ಪ್ರೇರೇಪಿಸುವಂತೆ ವಿದ್ಯಾರ್ಥಿಗಳಿಗೆ ಅಭಿಯಾನದ ಮೂಲಕ ತಿಳಿಸಲಾಯಿತು.
ಇ-ತ್ಯಾಜ್ಯ ಉತ್ಪಾದನೆಯಲ್ಲಿ ಬೆಂಗಳೂರು ನಗರ ದೇಶದಲ್ಲೇ ಮೂರನೇ ಸ್ಥಾನದಲ್ಲಿದ್ದರೆ, ಭಾರತವು ವಿಶ್ವದಲ್ಲಿ 5ನೇ ಸ್ಥಾನದಲ್ಲಿದೆ. ವರದಿಯ ಪ್ರಕಾರ ಭಾರತದಲ್ಲಿ ವರ್ಷದಲ್ಲಿ 1.7 ಲಕ್ಷ ಮೆಟ್ರಿಕ್ ಟನ್ ನಷ್ಟು ಇ-ತ್ಯಾಜ್ಯ ಉತ್ಪಾದನೆಯಾಗುತ್ತದೆ.
ಇ-ತ್ಯಾಜ್ಯದಿಂದ ಪರಿಸರದ ಮೇಲೆ ಉಂಟಾಗುವ ಹಾನಿಯ ಬಗ್ಗೆ ಜಾಗೃತಿ ಮೂಡಿಸುವ ಹಿನ್ನೆಲೆಯಲ್ಲಿ ಈ ಅಭಿಯಾನವನ್ನುನಡೆಸಲಾಗಿದೆ. ವಿದ್ಯಾರ್ಥಿಗಳಿಗೆ ಎಳವೆಯಲ್ಲೇ ಈ ಬಗ್ಗೆತಿಳಿಸಿದರೆ, ಮುಂದಕ್ಕೆ ಅವರು ಜವಾಬ್ದಾರಿಯುತ ಪ್ರಜೆಗಳಾಗಿ ಪರಿಸರವನ್ನುಉಳಿಸುವಲ್ಲಿಕಾರ್ಯೋನ್ಮುಖರಾಗುತ್ತಾರೆ.
E – Waste , orchids international school








