Corona ಇಂದಿನಿಂದ ರಾಜ್ಯದಲ್ಲಿ ಕೊರೊನಾ ಲಸಿಕಾ ಉತ್ಸವ
ಬೆಂಗಳೂರು : ರಾಜ್ಯದಲ್ಲಿ ಕೊರೊನಾ ವೈರಸ್ ರುದ್ರ ತಾಂಡವವಾಡುತ್ತಿದೆ. ಸಿಕ್ಕ ಸಿಕ್ಕವರ ದೇಹ ಹೊಕ್ಕಿ ಸಾಗುತ್ತಿರುವ ಹೆಮ್ಮಾರಿಗೆ ಕಡಿವಾಣ ಹಾಕಲು ಸರ್ಕಾರ ಈಗಾಗಲೇ ನೈಟ್ ಕಫ್ರ್ಯೂ ಜಾರಿ ಮಾಡಿದೆ.
ಈ ಮಧ್ಯೆ ಸರ್ಕಾರ ಇಂದಿನಿಂದ ಏಪ್ರಿಲ್ 14 ರವರೆಗೆ ಕೊರೊನಾ ಲಸಿಕಾ ಉತ್ಸವ ಆರಂಭಿಸಿದೆ. ಈ ಬಗ್ಗೆ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಟ್ವೀಟ್ ಮಾಡಿದ್ದಾರೆ.
ಟ್ವೀಟ್ ನಲ್ಲಿ, ಏಪ್ರಿಲ್ 11 ರಿಂದ ಏಪ್ರಿಲ್ 14 ರವರೆಗೆ ಕರೋನಾ ಲಸಿಕಾ ಉತ್ಸವವನ್ನು ಆಚರಿಸುತ್ತಿದ್ದೇವೆ.
45 ವರ್ಷದ ಮೇಲಿನ ಎಲ್ಲರೂ ತಪ್ಪದೆ ಇಂದೆ ಕರೋನ ಲಸಿಕೆ ಹಾಕಿಸಿ. ಬನ್ನಿ, ಕರೋನಾ ಯುಗಕ್ಕೆ ಅಂತ್ಯ ಹಾಡೋಣ.
ಹೊರ ಹೋಗದಂತೆ ಮನೆಯೊಳಗೆ ಕೊಡಿ ಹಾಕಿದ ಕೊರೊನಾ ಕಹಿ ನೆನಪನ್ನ ಮರೆಯಿರಿ. ಮನೆ ಮಂದಿಗೆಲ್ಲಾ ಲಸಿಕೆಯ ಸಿಹಿ ಕೊಡಿಸಿರಿ ಎಂದು ಜನತೆಗೆ ಕರೆಕೊಟ್ಟಿದ್ದಾರೆ.