Rajasthan ರಾಜಸ್ಥಾನದಲ್ಲಿ ಭುಗಿಲೆದ್ದ ಕೋಮು ಹಿಂಸಾಚಾರ : ನೆಟ್ ಸ್ಥಗಿತ, ಕಫ್ರ್ಯೂ ಜಾರಿ
ಜೈಪುರ : ಇಬ್ಬರು ಯುವಕರಿಂದ ಶುರುವಾದ ಗಲಾಟೆ ಕೋಮು ಹಿಂಸಾಚಾರಕ್ಕೆ ತಿರುಗಿ, ಪರಿಸ್ಥಿತಿ ನಿಯಂತ್ರಿಸಲು ಅಧಿಕಾರಿಗಳು ಇಂಟರ್ ನೆಟ್ ಸ್ಥಗಿತಗೊಳಿಸಿ, ಕಫ್ರ್ಯೂ ವಿಧಿಸಿರುವ ಘಟನೆ ರಾಜಸ್ಥಾನದ ಬರಾನ್ ಜಿಲ್ಲೆಯ ಛಬ್ರಾ ಪಟ್ಟಣದಲ್ಲಿ ನಡೆದಿದೆ.
ಕೋಮು ಹಿಂಸಾಚಾರದಲ್ಲಿ ಜನರ ಗುಂಪು ಹಲವಾರು ವಾಹನಗಳು ಹಾಗೂ ಅಂಗಡಿಗಳಿಗೆ ಬೆಂಕಿ ಹಚ್ಚಿದ್ದಾರೆ. ಇವರನ್ನ ತಡೆಯಲು ಪೊಲೀಸರು ಹಿಂಸೆಯಲ್ಲಿ ತೊಡಗಿದ್ದ ಜನರ ಗುಂಪನ್ನು ಚದುರಿಸಲು ಅಶ್ರುವಾಯು ಬಳಸಿದ್ದಾರೆ.
ಆದರೆ, ದೊಣ್ಣೆ, ಕಬ್ಬಿಣದ ಸರಳುಗಳು ಹಾಗೂ ಅಸ್ತ್ರಗಳಿಂದ ಶಸ್ತ್ರಸಜ್ಜಿತವಾಗಿದ್ದ ಎರಡೂ ಸಮುದಾಯಗಳ ಗುಂಪುಗಳು ರಾತ್ರಿಯ ತನಕ ಹಿಂಸಾಚಾರವನ್ನು ಮುಂದುವರಿಸಿವೆ. ಪೆÇಲೀಸ್ ಹಾಗೂ ಸರಕಾರಿ ವಾಹನಗಳು ಸೇರಿದಂತೆ ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ ಮಾಡಿವೆ.
ಬರಾನ್ ಜಿಲ್ಲಾಧಿಕಾರಿ ರವಿವಾರ ಸಂಜೆ 4ರಿಂದ ಛಬ್ರಾ ಪಟ್ಟಣದ ಪುರಸಭೆಯ ವ್ಯಾಪ್ತಿಯಲ್ಲಿ ಕಫ್ರ್ಯೂ ಆದೇಶಿಸಿದ್ದಾರೆ.
ಸದ್ಯ ಛಬ್ರಾ ಪಟ್ಟಣದ ಪೊಲೀಸರ ಕಂಟ್ರೋಲ್ ನಲ್ಲಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಹಲವು ಕ್ರಮಗಳನ್ನ ತೆಗೆದುಕೊಳ್ಳಲಾಗಿದೆ.










