ಕೊರೊನಾ ಸಂಕಷ್ಟ ನಡುವೆ ಯಶವಂತಪುರ ಪೊಲೀಸರ ಮಾನವಿಯತೆ
ಬೆಂಗಳೂರು : ಕೊರೊನಾ ವೈರಸ್ ಸಂಕಷ್ಟದ ಮಧ್ಯೆ ಗಾಯಾಳು ಭಿಕ್ಷುಕನಿಗೆ ಸಹಾಯ ಮಾಡುವ ಮೂಲಕ ಯಶವಂತಪುರ ಪೊಲೀಸರು ಮಾನವೀಯತೆ ಮೆರೆದಿದ್ದಾರೆ.
ಯಶವಂತಪುರ ಪ್ಲೇಓವರ್ ನಲ್ಲಿ ಕಾಲಿಗೆ ಗಾಯ ಮಾಡಿಕೊಂಡು ಭಿಕ್ಷುಕನೋರ್ವ ನರಳಾಡುತ್ತಿದ್ದ.
ಕೊರೊನಾ ಹಿನ್ನೆಲೆಯಲ್ಲಿ ಯಾವೊಬ್ಬರು ಕೂಡ ಆತನ ಸಹಾಯಕ ಧಾವಿಸಲಿಲ್ಲ.
ಇದನ್ನ ಗಮನಿಸಿದ ಯಶವಂತಪುರ ಠಾಣಾ ಪೊಲೀಸರು ಭಿಕ್ಷಕನ ಸಹಾಯಕ್ಕೆ ಧಾವಿಸಿದ್ದಾರೆ.
ಆತ ಕಾಲು ನೋವಿನಿಂದ ನರಳುತ್ತಿದ್ದನ್ನ ಗಮನಿಸಿದ ಪೊಲೀಸರು ಕೂಡಲೇ ಆಂಬುಲೆನ್ಸ್ ಕರೆಸಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.










