ಸಕಲೇಶಪುರದಲ್ಲಿ ನರಬಲಿ ಪಡೆದಿದ್ದ ಕಾಡಾನೆ elephant ಮದ್ದೂರಿನಲ್ಲಿ ಪ್ರತ್ಯಕ್ಷ
ಮಂಡ್ಯ : ಸಕಲೇಶಪುರದಲ್ಲಿ ನಾಲ್ವರನ್ನ ಬಲಿ ಪಡೆದಿದ್ದ ಕಾಡಾನೆ ಮದ್ದೂರಿನಲ್ಲಿ ಪ್ರತ್ಯಕ್ಷವಾಗಿದೆ.
ಸಕಲೇಶಪುರದಲ್ಲಿ ನಾನಾ ಅವಾಂತರಗಳನ್ನು ಸೃಷ್ಠಿ ಮಾಡಿದ್ದ ಈ ಆನೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಹಿಡಿದು, ಅದರ ಕೊರಳಿಗೆ ರೇಡಿಯೋ ಕಾಲರ್ ಆಳವಡಿಕೆ ಮಾಡಿದ್ದರು.
ಬಳಿಕ ಕೌದಳ್ಳಿ ಅರಣ್ಯ ಪ್ರದೇಶದಲ್ಲಿ ಬಿಡಲಾಗಿತ್ತು.
ಆದ್ರೆ ಈ ಒಂಟಿಸಲಗ ಮುತ್ತತ್ತಿ ಅರಣ್ಯ ಪ್ರದೇಶದ ಕಾಡಾನೆಗಳ ಜೊತೆ ಸೇರದೇ ಬೆಳಗ್ಗಿನ ಸಮಯದಲ್ಲಿ ಮದ್ದೂರು ತಾಲೂಕಿನ ಕೂಳಗೆರೆ ಸಮೀಪದ ಗದ್ದೆಯಲ್ಲಿ ಪ್ರತ್ಯಕ್ಷ ವಾಗಿದೆ.
ಇದರಿಂದ ಸುತ್ತಮುತ್ತಲಿನ ಗ್ರಾಮಸ್ಥರು ಆತಂಕ್ಕೆ ಒಳಗಾಗಿದ್ದಾರೆ.
ಸಕಲೇಶಪುರ ಅರಣ್ಯ ವ್ಯಾಪ್ತಿಯಲ್ಲಿ ರೈತರಿಗೆ ಶಾಪವಾಗಿ ಕಾಡಿದ್ದ ಈ ಆನೆ ಮದ್ದೂರು ವ್ಯಾಪ್ತಿಯಲ್ಲಿ ಕಾಣಿಸಿಕೊಂಡಿರುವ ರೈತರ ಎದೆಬಡಿತ ಹೆಚ್ಚಿಸಿದೆ.
ಕಾಡಾನೆ ಪ್ರತ್ಯಕ್ಷವಾಗಿರುವ ಕುರಿತು ರೈತರು ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.









