ಸೋಷಿಯಲ್ ಮೀಡಿಯಾ ತುಂಬ ರಣವೀರ್ ಸಿಂಗ್ ಹೊಸ ಸ್ಟೈಲ್ ನದ್ದೇ ಹವಾ…!
ಮುಂಬೈ: ಬಾಲಿವುಡ್ ನಟ ರಣವೀರ್ ಸಿಂಗ್ ಫ್ಯಾಷನ್ ಐಕಾನ್. ಫ್ಯಾಷನ್ ದೀವಾ ಅಂದ್ರು ಅಂದ್ರೂ ತಪ್ಪಾಗೋದಿಲ್ಲ.. ಸದಾ ಭಿನ್ನ ವಿಭಿನ್ನ ಲುಕ್ , ಸ್ಟೈಲ್ , ಡಿಫರೆಂಟ್ ಫ್ಯಾಷನ್ ಸೆನ್ಸ್ ನಿಂದಲೇ ಸೋಷಿಯಲ್ ಮಿಡಿಯಾಗಳಲ್ಲಿ ಸುದ್ದಿಯಾಗುವ ರಣವೀರ್ ಇದೀಗ ಮತ್ತೊಮ್ಮೆ ಫಂಕಿ ಸ್ಟೈಲ್ ನಿಂದಲೇ ಸುದ್ದಿಯಲ್ಲಿದ್ದಾರೆ.. ಸೋಷಿಯಲ್ ಮೀಡಿಯಾದ ತುಂಬ ಇವರ ಹೊಸ ಲುಕ್ ನ ಫೋಟೋಗಳದ್ದೇ ಸದ್ದಾಗಿದೆ.. 
ಆದ್ರೆ ಈ ಬಾರಿ ವೈರಲ್ ಆಗಿರೋ ಫೋಟೋ ನೋಡಿ ನೆಟ್ಟಿಗರು ಚಕಿತಗೊಂಡಿದ್ದಾರೆ.. ನೀಲಿ ಬಣ್ಣದ ಗುಚ್ಚಿಯ, ಪ್ಯಾಂಟು, ಟಾಪು ಹಾಕಿಕೊಂಡು, ಬೂದು ಬಣ್ಣದ ಟೋಪಿ, ಕೂದಲನ್ನೂ ಉದ್ದಕ್ಕೆ ಬಿಟ್ಟು, ಕೊಲಿಂಗ್ ಗ್ಲಾಸ್ ಹಾಕಿಕೊಂಡು ವಿಭಿನ್ನವಾಗಿ ರೆಡಿಯಾಗಿದ್ದಾರೆ. ಈ ಫೊಟೋವನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ. ರಣವೀರ್ ಸಿಂಗ್ ಲುಕ್ ನೋಡಿದ ಸೆಲೆಬ್ರಿಟಿಗಳು, ನಟ್ಟಿಗರು ಸಖತ್ತಾಗಿ ಕಮೆಂಟ್ ಮಾಡುತ್ತಿದ್ದಾರೆ. ಆಲಿಯಾ ಭಟ್, ಟೈಗರ್ ಶ್ರಾಫ್ ಜೋಯಾ ಆಖ್ತರ್ ಕಮೆಂಟ್ ಮಾಡಿರೋ ಸೆಲೆಬ್ರಿಟಿಗಳ ಪೈಕಿ ಇದ್ದಾರೆ..
ಸದ್ಯ ರಣವೀರ್ ಸಿಂಗ್ ಅವರು ಸಾಕಷ್ಟು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.. ಅದ್ರಲ್ಲೂ ಪ್ರಮುಖವಾಗಿ ಸ್ಟಾರ್ ಡೈರೆಕ್ಟರ್ ಶಂಕರ್ ಅವರ ಜೊತೆಗೆ ತಮಿಳಿನ ಸೂಪರ್ ಹಿಟ್ ಸಿನಿಮಾ ಅನಿಯನ್ ರೀಮೇಕ್ ನಲ್ಲಿಯೂ ನಾಯಕನಾಗಿ ನಟಿಸಲಿದ್ದಾರೆ.








