ಲಕ್ಷ್ಮಣ ಸವದಿ ಪುತ್ರನ ಕಾರು ಅಪಘಾತ : ಕಾರ್ ನಲ್ಲಿ ನನ್ನ ಮಗ ಇರಲಿಲ್ಲ – ಡಿಸಿಎಂ ಸವದಿ
ಮೈಸೂರು: ಡಿಸಿಎಂ ಲಕ್ಷ್ಮಣ ಸವದಿ ಮಗನ ಕಾರು ಅಪಘಾತದಲ್ಲಿ ಬೈಕ್ ಸವಾರ ಸಾವನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರಿನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.. ಅಪಘಾತದ ಕಾರಿನಲ್ಲಿ ನನ್ನ ಮಗ ಇರಲಿಲ್ಲ. ಅದಕ್ಕೆ ಎಫ್ ಐ ಆರ್ನಲ್ಲಿ ಆತನ ಹೆಸರು ಇಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಇದೇ ವೇಳೆ ನನ್ನ ಮಗ ಅಪಘಾತವಾದ ಕಾರಿನಲ್ಲಿ ಇದ್ದರೂ, ಅಪಘಾತ ಮಾಡು ಅಂತಾ ಹೇಳುತ್ತಿರಲಿಲ್ಲ. ನನ್ನ ಮಗ ತುರ್ತಾಗಿ ಗಾಯಗೊಂಡವರ ನೆರವಿಗೆ ಧಾವಿಸಿದ್ದಾನೆ. ಆದರೆ ಅವರು ಬದುಕಿ ಉಳಿದಿಲ್ಲ. ಎರಡು ದಿನದ ನಂತರ ಮೃತರ ಮನೆಗೆ ಭೇಟಿ ನೀಡಿ ಅವರಿಗೆ ಸಾಂತ್ವನ ಹೇಳಿ ನನ್ನ ಕೈಲಾದಷ್ಟು ಸಹಾಯ ಮಾಡುತ್ತೇನೆ. ಮೃತರ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳುವುದು ನನ್ನ ಕರ್ತವ್ಯ ಎಂದಿದ್ದಾರೆ.
ನಾನು ಮೃತ ವ್ಯಕ್ತಿಯ ಮನೆಗೆ ಭೇಟಿ ನೀಡುತ್ತೇನೆ. ಅವರು ಸಂಕಷ್ಟದಲ್ಲಿದ್ದಾರೆ ಅಂದ್ರೆ ನನ್ನ ಆಲೋಚನೆಗೆ ತಕ್ಕಂತೆ ಸಹಾಯ ಮಾಡುತ್ತೇನೆ.
ಆ ಕಾರಿನಲ್ಲಿ ನನ್ನ ಮಗ ಇರಲಿಲ್ಲ, ಮುಂದಿನ ಕಾರಿನಲ್ಲಿದ್ದ. ಅಪಘಾತ ಸಂಭವಿಸಿದ ಕೂಡಲೇ ಚಿದಾನಂದ ವಾಪಾಸ್ ಬಂದು ಆಸ್ಪತ್ರೆಗೆ ಸೇರಿಸಿದ್ದಾನೆ. ಕಾರಿನ. ನಂಬರ್ ಪ್ಲೇಟ್ ಕಿತ್ತಾಕಿದ್ದಾರೆ ಎಂಬುದು ಸುಳ್ಳು.
ನಂಬರ್ ಪ್ಲೇಟ್ ಕಿತ್ತಾಕಿದ್ರೂ ಪ್ರಕರಣ ಅಂತೂ ದಾಖಲಾಗುತ್ತೆ. ದೂರವಾಣಿ ಮೂಲಕ ಮಾತನಾಡೋದು ಸೂಕ್ತ ಅಲ್ಲ ಅಂತ ಮಾತನಾಡಿಲ್ಲ. ಖುದ್ದು ನಾನೇ ಮೃತ ವ್ಯಕ್ತಿಯ ಮನೆಗೆ ಭೇಟಿ ಕೊಡುತ್ತೇನೆ ಎಂದಿದ್ದಾರೆ.
ಹಫೀಜ್ ಮನೆ ಬಳಿ ಸ್ಫೋಟದ ಹಿಂದೆ ಭಾರತದ : ಪಾಕ್ ಆರೋಪ
ಅಪಘಾತವಾದ ಕಾರ್ ನಲ್ಲಿ ನಾನು ಇರಲಿಲ್ಲ ಎಂದ ಲಕ್ಷ್ಮಣ ಸವದಿ ಪುತ್ರ
ಸಿಎಂ ಬದಲಾಯಿಸದಿದ್ದರೆ ಬಿಜೆಪಿಗೆ ಉಳಿಗಾಲವಿಲ್ಲ : ಯತ್ನಾಳ