ಟೋಕಿಯೊ ಒಲಿಂಪಿಕ್ಸ್ : ಭಾರತಕ್ಕೆ ಮೊದಲ ಚಿನ್ನ, ಚೋಪ್ರಾ ಇತಿಹಾಸ GOLD in Tokyo
ಟೋಕಿಯೋ : ಭಾರತದ ಚಿನ್ನದ ಪದಕದ ಕನಸು ನನಸಾಗಿದೆ. ಜಾವಲಿನ್ ಥ್ರೋದಲ್ಲಿ ಭಾರತದ ಅಥ್ಲೀಟ್ಸ್ ನೀರಜ್ ಚೋಪ್ರಾ ಚಿನ್ನಕ್ಕೆ ಮುತ್ತಿಟ್ಟಿದ್ದಾರೆ.
ಇಂದು ನಡೆದ ಫೈನಲ್ ಪಂದ್ಯದಲ್ಲಿ ನೀರಜ್ ಚೋಪ್ರಾ ಆರಂಭದಿಂದಲೇ ಉತ್ತಮ ಪ್ರದರ್ಶನ ತೋರಿದರು. ಮೊದಲ ಪ್ರಯತ್ನದಲ್ಲಿ 87.03 ಮೀಟರ್ ಎಸೆದ ನೀರಜ್, ಎರಡನೇ ಪ್ರಯತ್ನದಲ್ಲಿ 87.58 ಮೀಟರ್ ಜಾವೆಲಿನ್ ಎಸೆದರು. ಆದರೆ ಮೂರನೇ ಪ್ರಯತ್ನದಲ್ಲಿ ನೀರಜ್ 76.79 ಮೀಟರ್ ಎಸೆದರು. ಈ ಮೂಲಕ ದಿಗ್ಗಜರನ್ನೇ ಮೀರಿಸುವ ಮೂಲಕ ಚಿನ್ನದ ಪದಕ ಗೆದ್ದು ಇತಿಹಾಸ ಬರೆದಿದ್ದಾರೆ.
ಈ ಮೂಲಕ ಚೋಪ್ರಾ ಅವರು ಭಾರತದ ಚಿನ್ನದ ಬರ ನೀಗಿಸಿದ್ದಾರೆ. ಭಾರತದ ಒಲಿಂಪಿಕ್ಸ್ ನಲ್ಲಿ 13 ವರ್ಷಗಳ ಬಳಿಕ ಚಿನ್ನದ ಪದಕ ಗೆದ್ದಿದ್ದು, 2008ರ ಬೀಜಿಂಗ್ ಒಲಿಂಪಿಕ್ಸ್ ನಲ್ಲಿ 100 ಮೀಟರ್ ಏರ್ ರೈಫಲ್ ಶೂಟಿಂಗ್ ನಲ್ಲಿ ಅಭಿನವ್ ಬಿಂದ್ರಾ ಬಂಗಾರದ ಪದಕ ಗೆದ್ದುಕೊಂಡಿದ್ದರು.









