ಅಫ್ಘಾನ್ ನಲ್ಲಿ ಉಗ್ರರ ಅಟ್ಟಹಾಸ : ಐವರು ಸಾವು Afghanistan saaksha tv
ಕಾಬೂಲ್ : ಅಫ್ಘಾನಿಸ್ತಾನದಲ್ಲಿ ಉಗ್ರರ ಅಟ್ಟಹಾಸ ಮುಂದುವರೆದಿದೆ. ಸದ್ಯ ಉಗ್ರರ ಕಬಂದ ಬಾಹುಗಳಲ್ಲಿರುವ ಅಫ್ಘಾನ್ ನಲ್ಲಿ ಸದ್ಯ ಗುಂಡಿನ ಕಾರುಬಾರು ನಡೆಯುತ್ತಿದೆ.
ಉಗ್ರರ ಕಾಟಕ್ಕೆ ಬೆಚ್ಚಿ ಬಿದ್ದಿರುವ ಅಲ್ಲಿನ ಜನರು ಪ್ರಾಣ ಉಳಿಸಿಕೊಳ್ಳಲು ನಾನಾ ಕಸರತ್ತುಗಳನ್ನು ನಡೆಸುತ್ತಿದ್ದಾರೆ.
ಈ ಮಧ್ಯೆ ಕಾಬೂಲ್ ವಿಮಾನ ನಿಲ್ದಾಣದಲ್ಲಿ ಗುಂಡಿನ ದಾಳಿ ನಡೆದಿದೆ. ಪರಿಣಾಮ, ಐವರು ಅಸುನೀಗಿದ್ದಾರೆ ಎಂದು ವರದಿಯಾಗಿದೆ.
ತಾಲಿಬಾನ್ ಉಗ್ರರು ಸದ್ಯ ಇಡೀ ಅಫ್ಘಾನಿಸ್ತಾನವನ್ನು ಕಂಟ್ರೋಲ್ ಗೆ ತೆಗೆದುಕೊಂಡಿದ್ದಾರೆ. ಕಾಬೂಲ್ ನ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡುತ್ತಾ ಕೇಕೆ ಹಾಕುತ್ತಿದ್ದಾರೆ.
ಸಿಕ್ಕ ಸಿಕ್ಕ ಮನೆಗೆ ನುಗ್ಗಿ ದೋಚುತ್ತಿದ್ದಾರೆ. ಇದರಿಂದ ಭಯಭೀತಗೊಂಡಿರುವ ಅಲ್ಲಿನ ವಾಸಿಗಳು ವಿವಿಧ ದೇಶಗಳಿಗೆ ತೆರಳಲು ನಾ ಮುಂದು, ತಾ ಮುಂದು ಎನ್ನುತ್ತಾ ಪೈಪೆÇೀಟಿಗಿಳಿದಿದ್ದಾರೆ. ವಿಮಾನ ಹತ್ತಲು ಹರಸಾಹಸ ಮಾಡುತ್ತಿದ್ದಾರೆ.
ಇತ್ತ ಅಫ್ಘಾನಿಸ್ತಾನದಲ್ಲಿ ನೆಲೆಸಿರುವ ಭಾರತೀಯರನ್ನು ಕರೆತರಲು ಎರಡು ವಿಮಾನಗಳನ್ನು ಸಜ್ಜುಗೊಳಿಸಲಾಗಿದೆ. ಶೀಘ್ರದಲ್ಲೇ ಅಲ್ಲಿ ನೆಲೆಸಿರುವ ಭಾರತೀಯರು ನಮ್ಮ ದೇಶಕ್ಕೆ ವಾಪಸ್ ಆಗಲಿದ್ದಾರೆ.









