ಹಿಂದಿಯಲ್ಲಿ ಬರಲಿದೆ ಕನ್ನಡದ `ಸಂಕಷ್ಟಕರ ಗಣಪತಿ’
ಕನ್ನಡದ ಸಂಕಷ್ಟಕರ ಗಣಪತಿ ಸಿನಿಮಾ ಹಿಂದಿಯಲ್ಲಿ ರಿಮೇಕ್ ಆಗಲಿದೆ. ಏಲಿಯನ್ ಹ್ಯಾಂಡ್ ಸಿಂಡ್ರೋಮ್ನ ಕಥಾಹಂದರ ಹೊಂದಿರುವ ಸಂಕಷ್ಟಕರ ಗಣಪತಿ ಚಿತ್ರದ ಹಿಂದಿ ರಿಮೇಕ್ ಹಕ್ಕುಗಳನ್ನು ಕಾರ್ವಾನ್ ಮತ್ತು ರಶ್ಮಿ ರಾಕೆಟ್ ಖ್ಯಾತಿಯ ಆಕರ್ಷ್ ಖುರಾನಾರವರು ನಿರ್ಮಾಪಕರಾದ ಸನ್ನಿ ಖುರಾನಾ ಹಾಗೂ ವಿಕಾಸ್ ಶರ್ಮಾ ಜೊತೆಗೂಡಿ ಖರೀದಿಸಿದ್ದಾರೆ. ಹಿಂದಿಯಲ್ಲಿ “ಬಾಯೆ ಹಾಥ್ ಕಾ ಖೇಲ್’ ಎನ್ನುವ ಶೀರ್ಷಿಕೆಯಲ್ಲಿ ಸಿನಿಮಾ ನಿರ್ಮಿಸಲಿದ್ದಾರೆ.
ಸಂಕಷ್ಟಕರ ಗಣಪತಿ ಸಿನಿಮಾ 2018ರಲ್ಲಿ ತೆರೆಕಂಡು ಪ್ರೇಕ್ಷಕರ ಮತ್ತು ವಿಮರ್ಶಕರ ಮೆಚ್ಚುಗೆಗೂ ಪಾತ್ರವಾಗಿ ನಂತರ ಅಮೆಜಾನ್ ಪ್ರೈಮ್ ನಲ್ಲಿ ಪ್ರಸಾರವಾಗಿತ್ತು.
ಅರ್ಜುನ್ ಕುರ್ಮಾ ಅವರ ನಿರ್ದೇಶನ, ಲಿಖೀತ್ ಶೆಟ್ಟಿ, ಅಚ್ಯುತ ಕುರ್ಮಾ, ಶೃತಿ ಗೊರಾಡಿಯಾ, ನಾಗಭೂಷಣ, ಮಂಜುನಾಥ ಹೆಗಡೆ ಮುಂತಾದವರ ತಾರಾಗಣ ಚಿತ್ರದಲ್ಲಿತ್ತು. ಉದಯ್ ಲೀಲಾ ಛಾಯಾಗ್ರಹಣ, ರಿತ್ವಿಕ್ ಮುರಳೀಧರ್ ಅವರ ಸಂಗೀತ, ರಘು ನಿಡುವಳ್ಳಿ ಸಂಭಾಷಣೆ ಮತ್ತು ವಿಜೇತ್ ಚಂದ್ರ, ಮಧು ತುಂಬಕೆರೆ ಅವರು ಸಂಕಲನದ ಸಿನಿಮಾ ಇದಾಗಿತ್ತು.









